ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬಿಯಾದಲ್ಲಿ ಭೀಕರ ದೋಣಿ ದುರಂತ, 90 ನಿರಾಶ್ರಿತರು ದುರ್ಮರಣ

By Sachhidananda Acharya
|
Google Oneindia Kannada News

ಟ್ರಿಪೋಲಿ, ಫೆಬ್ರವರಿ 2: ಲಿಬಿಯಾ ಕರಾವಳಿಯಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ 90 ಜನರು ನೀರು ಪಾಲಾಗಿದ್ದಾರೆ ಎಂದು ಅಂತರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಹೇಳಿದೆ.

ಇಲ್ಲಿನ ಝುವಾರ ನಗರದ ಸಮೀಪ ದೋಣಿ ಮಗುಚಿದ್ದು 10 ಮೃತ ದೇಹಗಳು ತೀರಕ್ಕೆ ತೇಲಿ ಬಂದಿವೆ. ಸಾವಿಗೀಡಾದವರಲ್ಲಿ ಕನಿಷ್ಠ 8 ಪಾಕಿಸ್ತಾನಿಯರು ಮತ್ತು ಇಬ್ಬರು ಲಿಬಿಯನ್ನರು ಸೇರಿದ್ದಾರೆ.

ಇನ್ನು ಮೀನುಗಾರಿಕಾ ದೋಣಿಯೊಂದು ಓರ್ವನನ್ನು ರಕ್ಷಿಸಿದ್ದು ಇನ್ನಿಬ್ಬರು ತೀರಕ್ಕೆ ಈಜಿ ಬರುವಲ್ಲಿ ಸಫಲರಾಗಿದ್ದಾರೆ.

Ninety feared dead after shipwreck in Mediterranean sea near Libya coast

ಬೋಟ್ ಮುಳುಗಿದ್ದು ಯಾಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2017ರಲ್ಲಿ ಮೆಡಿಟರೇನಿಯನ್ ಸಮುದ್ರದ ಮೂಲಕ ಇಟಲಿ ಮತ್ತು ಇತರ ಯುರೋಪ್ ರಾಷ್ಟ್ರಗಳಿಗೆ ಸುಮಾರು 12,000 ನಿರಾಶ್ರಿತರು ವಲಸೆ ಹೋಗಿದ್ದಾರೆ.

ಇವರೆಲ್ಲಾ ವಲಸೆಗೆ ಬಳಸುವ ಮೆಡಿಟರೇನಿಯನ್ ಸಮುದ್ರವನ್ನು ಐಎಂಒ ಅಪಾಯಕಾರಿ ಗಡಿ ಎಂದು ಪರಿಗಣಿಸಿದ್ದು 2017ರಲ್ಲಿ 3,116 ಜೀವಗಳನ್ನು ಇದು ಬಲಿ ಪಡೆದಿದೆ.

ಇದೇ ರೀತಿ ಜನವರಿ 10ರಂದು 100ಕ್ಕೂ ಹೆಚ್ಚು ಸಂತ್ರಸ್ತರು ಬೋಟ್ ಮಗುಚಿ ನೀರು ಪಾಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

English summary
Around 90 people have drowned after a shipwreck off western Libya. 10 bodies had washed ashore near the town of Zuwara and that the death toll included at least eight Pakistani nationals and two Libyans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X