ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀನಾ ಭಾರತೀಯ ಮೂಲದ ಮೊದಲ 'ಮಿಸ್ ಅಮೆರಿಕ'

By Prasad
|
Google Oneindia Kannada News

ನ್ಯೂ ಜೆರ್ಸಿ, ಸೆ. 16 : ಭಾರತೀಯ ಮೂಲದ ನ್ಯೂಯಾರ್ಕ್‌ನ ಸ್ನಿಗ್ಧ 'ಚಾಕೊಲೇಟ್' ಸುಂದರಿ ನೀನಾ ದವಲೂರಿ 'ಮಿಸ್ ಅಮೆರಿಕ' ಆಗಿ ಭಾನುವಾರ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ಅಮೆರಿಕನ್ 'ಮಿಸ್ ಅಮೆರಿಕ' ಆಗಿದ್ದು ಇದೇ ಮೊದಲನೇ ಬಾರಿ.

ತನ್ನ ತಂದೆಯಂತೆ ವೈದ್ಯೆಯಾಗಬೇಕೆಂಬ ಕನಸು ಕಟ್ಟಿಕೊಂಡಿರುವ ನೀನಾ 50 ಸಾವಿರ ಅಮೆರಿಕನ್ ಡಾಲರ್ ಬಹುಮಾನ ಮೊತ್ತವಾಗಿ ಗಳಿಸಿದ್ದಾರೆ. ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಮಿದುಳಿ ವರ್ತನೆ ಮತ್ತು ಕಾಗ್ನಿಟಿವ್ (ಅರಿವಿನ) ವಿಜ್ಞಾನದಲ್ಲಿ ಪದವಿ ಗಳಿಸಿದ್ದಾರೆ.

ಮಿಸ್ ಅಮೆರಿಕ ಎಂದು ಘೋಷಿಸುತ್ತಿದ್ದಂತೆಯೆ ಹಳದಿ ಗೌನ್ ತೊಟ್ಟಿದ್ದ ಚಾಕೊಟೇಲ್ ಬಣ್ಣದ ನೀನಾ ಖುಷಿಯಿಂದ ಕುಣಿದಾಡಿದರು, ಕಣ್ಣಂಚಿನಿಂದ ಜಿನುಗುತ್ತಿದ್ದ ಭಾಷ್ಪಾಂಜಲಿಯನ್ನು ಒರೆಸಿಕೊಳ್ಳುತ್ತ ತನ್ನ ಪಾಲಕರು, ಸಹೋದರಿ ಮತ್ತು ಅಭಿಮಾನಿಗಳತ್ತ ಕೈಬೀಸಿ ಕಿರೀಟ ತೊಡಿಸಿಕೊಂಡರು.

ಸ್ಪರ್ಧಾಳುಗಳು ತೊಡುವ ಸಂಜೆಗೌನ್, ಜೀವನಶೈಲಿ, ದೈಹಿಕ ಆರೋಗ್ಯ, ಪ್ರತಿಭೆ, ವೈಯಕ್ತಿಕ ಸಂದರ್ಶನ ಮತ್ತು ವೇದಿಕೆಯ ಮೇಲೆ ನಡೆಯುವ ಪ್ರಶ್ನೋತ್ತರದ ಆಧಾರದ ಮೇಲೆ ಮಿಸ್ ಅಮೆರಿಕ ಸುಂದರಿಯನ್ನು ಆಯ್ಕೆ ಮಾಡಲಾಗುತ್ತದೆ.

ಟಿವಿ ಆಂಕರುಗಳು ಕಣ್ಣಿನ ರೆಪ್ಪೆಯ ಸೌಂದರ್ಯ ವರ್ಧನೆಗಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಉದ್ದೇಶದ ಹಿಂದಿನ ಔಚಿತ್ಯವೇನು ಎಂಬ ಪ್ರಶ್ನೆಗೆ, ಪ್ಲಾಸ್ಟಿರ್ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ ನೀನಾ, ಜನರು ಕೃತಕ ಸೌಂದರ್ಯಕ್ಕಿಂತ ತಮ್ಮ ಮೇಲೆ ವಿಶ್ವಾಸವಿಟ್ಟುಕೊಂಡಿರಬೇಕು ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿದರು.

ಸುಮಾರು 15 ವರ್ಷಗಳ ಕಾಲ ಭಾರತೀಯ ನೃತ್ಯ ಶೈಲಿಯಲ್ಲಿ ನೀನಾ ತರಬೇತಿ ಪಡೆದಿದ್ದಾರೆ ಮತ್ತು ಹಲವಾರು ಬೇಸಿಗೆಗಳನ್ನು ಭಾರತದಲ್ಲಿ ಕಳೆದಿದ್ದಾರೆ. ಅಮೆರಿಕದ ಸೈರಾಕಾಸ್ ನಲ್ಲಿ ಜನಿಸಿದ ಅವರು, ಓಕ್ಲಹಾಮಾ, ಮಿಷಿಗನ್, ಫಯಟ್ ವಿಲ್ಲೆ ಮುಂತಾದ ಪ್ರದೇಶಗಳಲ್ಲಿ ಬೆಳೆದರು. ತಮಾಷೆ ಅಂದ್ರೆ ಮಿಸಿ ನ್ಯೂಯಾರ್ಕ್ ಆಗುವ ಮೊದಲು ಅವರು 60 ಪೌಂಡ್ ತೂಕ ಕಳೆದುಕೊಂಡಿದ್ದರು.

ಕಂದುಬಣ್ಣದ ಸುಂದರಿ ಮಿಸ್ ಅಮೆರಿಕ ಆಯ್ಕೆಯಾಗುತ್ತಲೇ ಸಾಕಷ್ಟು ವಿರೋಧಗಳನ್ನೂ ಎದುರಿಸಿದರು. "ನೀನು ಮಿಸ್ ಅಮೆರಿಕಾ ಆಗಿದ್ದಾದರೂ ಹೇಗೆ? ಗ್ಯಾಸ್ ಸ್ಟೇಷನ್ ಕ್ಲರ್ಕ್ ಅಥವಾ ಮೋಟೆಲೆ ಮಾಲಕಿಯ ತರಹ ಕಾಣ್ತೀಯಾ" ಎಂಬೆಲ್ಲ ಅಸಂಬದ್ಧ ಸಂದೇಶಗಳು ಹರಿದಾಡಲು ಆರಂಭಿಸಿದವು.

"ಮಿಸ್ ಅಮೆರಿಕ ಪಟ್ಟಕ್ಕೆ ಮುಸ್ಲಿಂಳನ್ನು ಆಯ್ಕೆ ಮಾಡಿದ್ದಾರೆ. ಹೀಗೆ ಮಾಡಿ ಬರಾಕ್ ಒಬಾಮಾರನ್ನು ಸಂತೋಷ ಪಡಿಸಿದ್ದಾರೆ." "ನಾನು ಜನಾಂಗ ಪಕ್ಷಪಾತಿಯಲ್ಲ. ಆಕೆ ಅಮೆರಿಕನ್ ಆಗಿ ಇಂಡೋನೇಷಿಯನ್ ಡಾನ್ಸ್ ಮಾಡುತ್ತಿದ್ದಾಳೆ. ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಗಾಗಿದ್ದರೆ ಇದು ಓಕೆ ಆಗಿತ್ತು" ಎಂಬಿತ್ಯಾದಿ ಟ್ವಿಟ್ಟರ್ ಸಂದೇಶಗಳು ಹರಿದಾಡಿವೆ. ಆದರೆ, ನೀನಾಳನ್ನು ಬೆಂಬಲಿಸಿ ಮತ್ತು ಜನಾಂಗೀಯ ನಿಂದನೆಯನ್ನು ವಿರೋಧಿಸಿ ಹಲವಾರು ಟ್ವೀಟ್ ಗಳು ಬಂದಿವೆ. (ಪಿಟಿಐ)

ಜನಾಂಗೀಯ ನಿಂದನೆಯ ಟ್ವೀಟ್1

ಜನಾಂಗೀಯ ನಿಂದನೆಯ ಟ್ವೀಟ್1

"ನೀನು ಮಿಸ್ ಅಮೆರಿಕಾ ಆಗಿದ್ದಾದರೂ ಹೇಗೆ? ಗ್ಯಾಸ್ ಸ್ಟೇಷನ್ ಕ್ಲರ್ಕ್ ಅಥವಾ ಮೋಟೆಲೆ ಮಾಲಕಿಯ ತರಹ ಕಾಣ್ತೀಯಾ"

ಜನಾಂಗೀಯ ನಿಂದನೆಯ ಟ್ವೀಟ್2

ಜನಾಂಗೀಯ ನಿಂದನೆಯ ಟ್ವೀಟ್2

"ಮಿಸ್ ಅಮೆರಿಕ ಪಟ್ಟಕ್ಕೆ ಮುಸ್ಲಿಂಳನ್ನು ಆಯ್ಕೆ ಮಾಡಿದ್ದಾರೆ. ಹೀಗೆ ಮಾಡಿ ಬರಾಕ್ ಒಬಾಮಾರನ್ನು ಸಂತೋಷ ಪಡಿಸಿದ್ದಾರೆ."

ಜನಾಂಗೀಯ ನಿಂದನೆಯ ಟ್ವೀಟ್3

ಜನಾಂಗೀಯ ನಿಂದನೆಯ ಟ್ವೀಟ್3

"ನಾನು ಜನಾಂಗ ಪಕ್ಷಪಾತಿಯಲ್ಲ. ಆಕೆ ಅಮೆರಿಕನ್ ಆಗಿ ಇಂಡೋನೇಷಿಯನ್ ಡಾನ್ಸ್ ಮಾಡುತ್ತಿದ್ದಾಳೆ. ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಗಾಗಿದ್ದರೆ ಇದು ಓಕೆ ಆಗಿತ್ತು."

Array

ಅಮಿತಾಬ್ ಬಚ್ಚನ್ ಶುಭಾಶಯ

ಬಾಲಿವುಡ್ ಷೆಹೆನ್‌ಷಾ ಅಮಿತಾಬ್ ಬಚ್ಚನ್ ಅವರಿಂದ ನೀನಾ ದವಲೂರಿಗೆ ಶುಭಾಶಯ.

ಮಹಿಳೆ ಮಿಸ್ ಅಮೆರಿಕಾ ಆಗಿದ್ದಾರೆ

ಕನಿಷ್ಠಪಕ್ಷ ಮಹಿಳೆಯೊಬ್ಬರು ಮಿಸ್ ಅಮೆರಿಕಾ ಆಗಿದ್ದಾರೆ. ನಮ್ಮ ಭಾರತದಲ್ಲಿ ಅದೃಶ್ಯ ವ್ಯಕ್ತಿ ಮಿಸ್ಟರ್ ಇಂಡಿಯಾ ಆಗಿದ್ದರು ಅಂತ ಟ್ವಿಟ್ಟಿಗರೊಬ್ಬರು ಸರಿಯಾಗಿ ಬಾರಿಸಿದ್ದಾರೆ.

ಭಾರತೀಯ, ಅರಬ್ ವ್ಯತ್ಯಾಸ ಗೊತ್ತಿಲ್ಲವೆ

ಭಾರತೀಯ ಅರಬ್ ವ್ಯತ್ಯಾಸ ಗೊತ್ತಿಲ್ಲವೆ? ಮೊದಲು ಶಾಲೆಗೆ ಹೋಗಿ.

ಜನಾಂಗೀಯ ನಿಂದನೆಗೆ ಚಾಟಿಏಟು

ಜನಾಂಗೀಯ ನಿಂದನೆಗೆ ಚಾಟಿಏಟು

ಮತ್ತೊಂದು ಬೆಂಬಲದ ಟ್ವೀಟ್

ಮತ್ತೊಂದು ಬೆಂಬಲದ ಟ್ವೀಟ್

ಕೆಣಕುವ ಟ್ವೀಟ್‌ಗೆ ಪ್ರತ್ಯುತ್ತರ

ಕೆಣಕುವ ಟ್ವೀಟ್‌ಗೆ ಪ್ರತ್ಯುತ್ತರ.

ಬೇಜಾರಾಗಿದ್ರೆ...

ಬಿಳಿ ಬಣ್ಣವಿಲ್ಲದ ಹುಡುಗಿ ಮಿಸ್ ಅಮೆರಿಕಾ ಆಗಿಲ್ಲವೆಂದು ಬೇಜಾರಾಗಿದ್ದರೆ...

ಬಾಲಿವುಡ್ ನಟಿಯಾಗಲು ಇಷ್ಟವಿಲ್ಲ

ಬಾಲಿವುಡ್ ನಟಿಯಾಗಲು ಇಷ್ಟವಿಲ್ಲ

ಭಾರತದಲ್ಲಾಗಿದ್ದರೆ ಸೌಂದರ್ಯ ಸ್ಪರ್ಧೆ ಹಿಂದಿ ಚಿತ್ರರಂಗದಲ್ಲಿ ಮಿಂಚಲು ಸಿಗುವ ಲೈಸೆನ್ಸ್ ಎಂದು ನಂಬಿಕೊಂಡಿರುತ್ತಾರೆ. 1966ರಲ್ಲಿ ಗೆದ್ದಿದ್ದ ರಿಟಾ ಫರಿಯಾ ಹೊರತುಪಡಿಸಿದರೆ ಎಲ್ಲರೂ ಬಾಲಿವುಡ್ ಮೋಹಕ್ಕೆ ಸಿಲುಕಿದವರೆ. ರಿಟಾ ಫರಿಯಾ ಮಾತ್ರ ಮಾಡೆಲಿಂಗ್ ಮತ್ತು ಸಿನೆಮಾ ಆಫರುಗಳನ್ನು ತಿರಸ್ಕರಸಿದ್ದರು. ಅಚ್ಚರಿಯೆಂದರೆ, ಮಿಸ್ ಅಮೆರಿಕ 2013 ನೀನಾ ದವಲೂರಿ ಕೂಡ ಬಾಲಿವುಡ್ ಪ್ರವೇಶ ಪಡೆಯುವ ಯಾವುದೇ ಇಚ್ಛೆಯನ್ನು ಇಟ್ಟುಕೊಂಡಿಲ್ಲ.

English summary
Nina Davuluri made history as the first Indian American to be crowned Miss America. Nina, who aspires to become a physician like her father, will earn at least USD 50,000 in scholarships. Nine does not like to enter Bollywood to make a career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X