• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥೆಯಾಗಿ ಮೊದಲ ಆಫ್ರಿಕನ್ ಮಹಿಳೆ

|

ವಿಶ್ವಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ನೈಜೀರಿಯಾದ ಎನ್‌ ಗೋಜಿ ಒಕೊಂಜೊ ಇವೇಲಾ ವಿಶ್ವ ವಾಣಿಜ್ಯ ಸಂಸ್ಥೆಯ ನೂತನ ಮಹಾ ನಿರ್ದೇಶಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅಮೆರಿಕ ಸೇರಿ ಡಬ್ಲ್ಯೂಟಿಒನ 164 ಸದಸ್ಯ ರಾಷ್ಟ್ರಗಳ ಸಮ್ಮತಿ ಮೇರೆಗೆ ನೈಜೀರಿಯಾದ ಮಾಜಿ ಹಣಕಾಸು ಸಚಿವೆಯನ್ನು ಈ ಹುದ್ದೆಗೆ ನಾಮ ನಿರ್ದೇಶಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಡಬ್ಲ್ಯೂಟಿಒ ಮಹಾ ನಿರ್ದೇಶಕರಾಗಿ ದಕ್ಷಿಣ ಕೊರಿಯಾದ ಹಣಕಾಸು ಸಚಿವರನ್ನು ನೇಮಿಸಲು ಟ್ರಂಪ್ ಮುಂದಾಗಿದ್ದರು. ಇದಕ್ಕೆ ಸಾಕಷ್ಟು ಸದಸ್ಯ ರಾಷ್ಟ್ರಗಳ ವಿರೋಧವಿತ್ತು.

ಈಗ ಜಜ್ಹ್ ಇವರನ್ನು ಅಮೆರಿಕ ಬೆಂಬಲ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಯ್ಕೆ ಬಹುತೇಕ ಖಚಿತವಾಗಿದೆ. ಈ ಹಿಂದೆ ವಿಶ್ವನ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಎನ್‌ ಗೋಜಿ ಒಕೊಂಜೊ ಇವೇಲಾ ಮುಂದಿನ ನಾಲ್ಕು ವರ್ಷದ ಅವಧಿಗೆ ಡಬ್ಲ್ಯೂಟಿಒ ಅಧ್ಯಕ್ಷರಾಗಿರಲಿದ್ದಾರೆ.

 Nigeria’s Ngozi Okonjo-Iweala Poised To Be First African Director General Of The WTO

ಈ ಮೂಲಕ ಡಬ್ಲ್ಯೂಟಿಒಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲ ಆಫ್ರಿಕನ್ ಮಹಿಳೆ ಈ ಹುದ್ದೆಗೇರುತ್ತಿದ್ದಾರೆ.ಎಂಐಟಿಯಲ್ಲಿ ಅರ್ಥಶಾಸ್ತ್ರದ ಡಾಕ್ಟರೇಟ್ ಪದವಿ ಹೊಂದಿರುವ ಈಕೆ ಆಯ್ಕೆಗೆ ಟ್ರಂಪ್ ಆಡಳಿತ ವಿರೋಧ ವ್ಯಕ್ತಪಡಿಸಿತ್ತು.

ಡಬ್ಲ್ಯೂಟಿಒದ ಸಾಮಾನ್ಯ ಮಂಡಳಿಯ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಅಮೆರಿಕ ಚೀನಾ ವಾಣಿಜ್ಯ ಸಮರದ ಬಳಿಕ ವಿಶ್ವ ವಾಣಿಜ್ಯ ಸಂಸ್ಥೆಯ ರೂಪುರೇಷೆಯೇ ಬದಲಾಗಿದೆ.

ನ್ಯಾಯಾಧೀಶರು ಸೇರಿದಂತೆ ಸಾಕಷ್ಟು ಪ್ರಮುಖ ಹುದ್ದೆಗಳು ಖಾಲಿ ಇದೆ. ಹಾಗೆಯೇ ವಿಶ್ವ ವಾಣಿಜ್ಯ ಸಂಸ್ಥೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಸಾಕಷ್ಟು ಕ್ರಮಗಳಾಗಿವೆ.

ಇವೆಲ್ಲವನ್ನೂ ಸರಿದಾರಿಗೆ ಜವಾಬ್ದಾರಿ ನೂತನ ಮಹಾನಿರ್ದೇಶಕರ ಮೇಲಿದೆ ಇದಕ್ಕೆ ಅಮೆರಿಕ,ಚೀನಾ ಸೇರಿ ಇತರೆ ಸದಸ್ಯರಾಷ್ಟ್ರಗಳು ಹೇಗೆ ಸಹಕಾರ ನೀಡುತ್ತವೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

English summary
Nigeria’s Ngozi Okonjo-Iweala, former two-time finance minister and former managing director of the World Bank, is poised to become the next Director General (DG) of the World Trade Organisation (WTO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X