• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4 ಶತಮಾನದ ಬಳಿಕ ಶೇಕ್ಸ್‌ಪಿಯರ್‌ನ್ನು ಮತ್ತೆ ಸಾಯಿಸಿದ ಅರ್ಜೆಂಟೈನಾ ಪತ್ರಕರ್ತೆ

|

ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದು ನಗೆಪಾಟಲಿಗೆ ಗುರಿಯಾಗಿದೆ.

ವಿಲಿಯಮ್ ಶೇಕ್ಸ್‌ಪಿಯರ್ ಎನ್ನುವ 81 ವರ್ಷದ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ ಹಿಂದೆ ನಿಧನರಾಗಿದ್ದರು, ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದರು.

ಆದರೆ ಇದನ್ನು ತಪ್ಪಾಗಿ ಗ್ರಹಿಸಿದ ಅರ್ಜೆಂಟೈನಾದ ಸುದ್ದಿವಾಹಿನಿ, ಇಂಗ್ಲಿಷ್ ಸಾಹಿತ್ಯ ಲೋಕದ ದಿಗ್ಗಜ ವಿಲಿಯಂ ಶೇಕ್ಸ್‌ಪಿಯರ್ ಅವರೇ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿತ್ತು.

ಇಷ್ಟಕ್ಕೇ ನಿಲ್ಲಿಸದೆ ವಿಶ್ವದಲ್ಲೇ ಮೊದಲು ಕೊರೊನಾ ಲಸಿಕೆ ಪಡೆದಿದ್ದ ವಿಲಿಯಂ ಶೇಕ್ಸ್‌ಪಿಯರ್ ನಿಧನರಾಗಿದ್ದಾರೆ ಅವರ ಸಾವು ನಮ್ಮನ್ನೆಲ್ಲಾ ಸಿಗ್ಭ್ರಾಂತರನ್ನಾಗಿಸಿದೆ. ನೀವೆಲ್ಲಾ ತಿಳಿದಂತೆ ಶೇಕ್ಸ್‌ಪಿಯರ್ ಇಂಗ್ಲಿಷ್ ಸಾಹಿತ್ಯ ಲೋಕದ ಪ್ರಮುಖ ಬರಹಗಾರರಾಗಿದ್ದಾರೆ, ನಗೆ ಅವರು ಮಾಸ್ಟರ್ ಇದ್ದಂತೆ 81 ವರ್ಷವಾಗಿದ್ದ ಇವರಿಗೆ ಇಂಗ್ಲೆಂಡ್‌ನಲ್ಲಿ ಮೊದಲ ಲಸಿಕೆ ನೀಡಲಾಗಿತ್ತು ಎಂದು ಆಂಕರ್ ಹೇಳಿದ್ದರು.

ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಕವಿ, ಸಾಹಿತಿ ಶೇಕ್ಸ್‌ಪಿಯರ್ 1616ರಲ್ಲೇ ನಿಧನಾರಗಿದ್ದು, ಈ ವಿಚಾರವನ್ನು ತಿಳಿದುಕೊಳ್ಳದೆ ಪತ್ರಕರ್ತೆ ಮಾಡಿದ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿಲಿಯಂ ಶೇಕ್ಸ್‌‌‌ಪಿಯರ್‌ (81) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್‌‌ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಡಿಸೆಂಬರ್ 8ರಂದು ವಿಲಿಯಂ ಶೇಕ್ಸ್‌ಪಿಯರ್‌ ಅವರು ಯೂನಿವರ್ಸಿಟಿ ಹಾಸ್ಪಿಟಲ್‌‌ ಕೊವೆಂಟ್ರಿ ಹಾಗೂ ವಾರ್ವಿಕ್‌‌ ಶೈರ್‌ನಲ್ಲಿ ಕೊರೊನಾ ಸೋಂಕು ವಿರುದ್ದ ಹೋರಾಡಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಲಿಯಂ ಅವರು ಫೈಜರ್‌-ಬಯೋಟೆಕ್‌‌‌ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ.

English summary
A newscaster in Argentina sadly reported the death of author William Shakespeare Thursday, whom she said was, “As we all know, one of the most important writers in the English language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X