• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.23: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|

ಬೆಂಗಳೂರು, ನ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

12.35: ಜಾಗತಿಕ ಭಯೋತ್ಪಾದನೆ ಸೂಚ್ಯಂಕ 2014ರ ವರದಿ ಅನ್ವಯ ಭಾರತದಲ್ಲಿ 2012-2013 ರ ಅವಧಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಶೇ 70 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಉಗ್ರರು, ನಕ್ಸಲರ ದಾಳಿಗೆ 238 ರಿಂದ 404 ಜನ ಮೃತರಾಗಿದ್ದಾರೆ.

12.30: ಇಥಿಯೋಪಿಯಾದ ಗುಯೆ ಅಡೊಲಾ ಅವರು ಭಾನುವಾರ ನಡೆದ ದೆಹಲಿ ಹಾಫ್ ಮ್ಯಾರಥಾನ್ ಗೆದ್ದುಕೊಂಡಿದ್ದಾರೆ. ಮಹಿಳೆಯರ ವಿಭಾದಲ್ಲಿ ಕೀನ್ಯಾದ ಫ್ಲೋರೆನ್ಸ್ ಕಿಪ್ಲಾಗಾಟ್ ಅವರು ಏರ್ ಟೆಲ್ ದೆಹಲಿ ಮ್ಯಾರಾಥಾನ್ ಕಿರೀಟ ಧರಿಸಿದ್ದಾರೆ.

12.15: ಎಫ್ ಸಿ ಬಾರ್ಸಿಲೋನಾದ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರು ಸ್ಪ್ಯಾನೀಷ್ ಲಾ ಲೀಗಾದಲ್ಲಿ ಒಟ್ಟಾರೆ 253 ಗೋಲು ದಾಖಲಿಸಿ ಅತ್ಯಧಿಕ ಗೋಲ್ ಸ್ಕೋರರ್ ಎನಿಸಿದ್ದಾರೆ.

12.10: ಕೂಲ್ iris ಖರೀದಿಸಿದ ಯಾಹೂ ಸಂಸ್ಥೆ

11.15: ತಮಿಳುನಾಡಿನ ನಾಮಕ್ಕಲ್ ಬಳಿ ರಸ್ತೆ ಅಪಘಾತದಲ್ಲಿ ಐವರು ಆಯ್ಯಪ್ಪ ಭಕ್ತರು ಸಾವನ್ನಪ್ಪಿದ್ದಾರೆ. ಶಬರಿಮಲೆಯಿಂದ ವಾಪಸ್ ಬರುತ್ತಿದ್ದ ಕಾರು ಎದುರಿಗಿದ್ದ ಮರಳು ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

10.45: ಜಪಾನ್‌ನಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ನೂರಾರು ಮನೆಗಳು ಕುಸಿದು ಬಿದ್ದಿವೆ. ಸುಮಾರು 50ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.8 ಪ್ರಮಾಣ ಹೊಂದಿದ್ದು, ಗಾಯಾಳುಗಳ ಪೈಕಿ ಅರ್ಧದಷ್ಟು ಜನರ ಸ್ಥಿತಿ ಚಿಂತಾಜನಕವಾಗಿದೆ.

9.45: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಹುಟ್ಟುಹಬ್ಬದ ಸಮಾರಂಭದಲ್ಲಿ ಕಾಲ್ತುಳಿತದಿಂದಾಗಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

9.30: ಸೋಮಾಲಿಯಾದ ಅಲ್ ಶಬಾದ್ ಸಂಘಟನೆ ಕೀನ್ಯಾದಲ್ಲಿ 28 ಮುಸ್ಲಿಮೇತರರನ್ನು ಬಲಿ ತೆಗೆದುಕೊಂಡಿದ್ದಾರೆ.

9.15: ಟ್ಯುನಿಷಿಯಾದಲ್ಲಿ ನ.23ರಂದು ಪ್ರಪ್ರಥಮ ಬಾರಿಗೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. 2011ರ ಕ್ರಾಂತಿಯ ನಂತರ ಪ್ರಜಾಪ್ರಭುತ್ವದತ್ತ ದಾಪುಗಾಲಿಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top News of the today : Terror activities in India have increased by 70 per cent during 2012-2013 with the number of deaths rising from 238 to 404, most of which were caused by Naxals, says a new report and many news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more