ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್: ಗುಂಡಿಟ್ಟು ಇಬ್ಬರು ಪೊಲೀಸರ ಹತ್ಯೆ

|
Google Oneindia Kannada News

ನ್ಯೂಯಾರ್ಕ್, ಡಿ. 21: ಇಬ್ಬರು ನ್ಯೂಯಾರ್ಕ್ ಪೊಲೀಸ್ ಅಧಿಕಾರಿಗಳನ್ನು ಬ್ರೂಕ್ಲಿನ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದವ ಸ್ವತಃ ಗುಂಡು ಹೊಡೆದುಕೊಂಡು ಸತ್ತಿದ್ದಾನೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಆದರೆ ಪೊಲೀಸರೇ ಆತನನ್ನು ಎನ್ ಕೌಂಟರ್ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಹೇಳಿದೆ.

ಕಪ್ಪು ಜನಾಂಗಕ್ಕೆ ಸೇರಿದ ಆರು ವರ್ಷದ ಬಾಲಕನ ತಂದೆಯನ್ನು ಬಿಳಿ ವರ್ಣದ ಪೊಲೀಸ್ ಅಧಿಕಾರಿ ಇತ್ತೀಚೆಗೆ ಹತ್ಯೆ ಮಾಡಿದ್ದ. ಇದಕ್ಕೆ ಪ್ರತೀಕಾರ ಎಂಬಂತೆ ಈ ಘಟನೆ ನಡೆದಿದೆ. 28 ವರ್ಷದ ಇಸ್ಮಾಯಿಲ್ ಬ್ರಿಸ್ಲೆ ಪೊಲೀಸ್ ಅಧಿಕಾರಿಗಳಾದ ವೆಂಜಿಯನ್ ಲಿಯು ಮತ್ತು ರಫೆಲ್ ರಮೋಸ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.(ಅಮೆರಿಕಕ್ಕೆ ಆತಂಕ ತಂದಿರುವ ಡೆಡ್ಲಿ 'ವೈರಸ್')

death

ಈ ಬಗ್ಗೆ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ನ್ಯೂಯಾರ್ಕ್ ಪೋಲಿಸ್ ಸಂತಾಪ ವ್ಯಕ್ತಪಡಿಸಿದೆ. ಮಡಿದವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಬೇಕಾಗಿದೆ. ಇದೊಂದು ದುರ್ಘಟನೆ ಇಲಾಖೆಗೆ ಮರೆಯಲಾಗದ ನೋವು ತಂದಿದೆ ಎಂದು ಹಿರಿಯ ಅಧಿಕಾರಿ ರೋಯ್ ರಿಚ್ಟರ್ ಹೇಳಿದ್ದಾರೆ.

ಸಬ್ ವೇ ಯೊಂದರಲ್ಲಿ ಆರೋಪಿಯನ್ನು ಉದ್ದೇಶಪೂರ್ವಕವಾಗಿ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದ್ದರೆ, ಆತ ಸ್ವತಃ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

English summary
Two New York police officers were shot dead in Brooklyn, officials have said, in what local media called an apparent ambush. The shootings came amid anger over the chokehold death of an unarmed black father-of-six by a white police officer, and a grand jury's decision not to press charges against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X