ಜನರೇ ಹುಷಾರ್: ಜಗತ್ತಿನಲ್ಲೇ ಅತಿಹೆಚ್ಚು ಹರಡಬಲ್ಲ ಕೊವಿಡ್-19 ರೂಪಾಂತರಿ ಪತ್ತೆ!

ನವದೆಹಲಿ, ಏಪ್ರಿಲ್ 2: ಕೊರೊನಾವೈರಸ್ ಪಿಡುಗಿನ ಹಾವಳಿ ಜೂನ್ ವೇಳೆಗೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದು ಆಗಿದೆ. ಇದರ ಮಧ್ಯೆ ಹೊಸ ರೂಪಾಂತರಿಯು ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವರದಿಯಾಗಿದೆ.

ಕೋವಿಡ್-19 ರೋಗದ ಡೆಲ್ಟಾ, ಡೆಲ್ಟಾ ಪ್ಲಸ್ ಮತ್ತು ಓಮಿಕ್ರಾನ್ ರೂಪಾಂತರಿಗಿಂತ ಎಕ್ಸ್ಇ ರೂಪಾಂತರಿಯು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ.

ಒಮಿಕ್ರಾನ್‌ನ BA.2 ಉಪ-ತಳಿ XE ಎಂದು ಕರೆಯಲ್ಪಡುವ ಕೊರೊನಾವೈರಸ್‌ನ ಹೊಸ ರೂಪಾಂತರವು ಮೊದಲಿನ ರೂಪಾಂತರಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೊನಾವೈರಸ್ ಎಕ್ಸ್ಇ ರೂಪಾಂತರ ಎಂದರೇನು?, ಈ ರೂಪಾಂತರಿಯ ಲಕ್ಷಣಗಳೇನು?, ಜನರು ಎಕ್ಸ್ಇ ರೂಪಾಂತರದ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು?, ಹೊಸ ರೂಪಾಂತರಿಯು ನಾಲ್ಕನೇ ಅಲೆಗೆ ಕಾರಣವಾಗುತ್ತಾ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಕೊವಿಡ್-19 ಕಾಲದಲ್ಲಿ ಪತ್ತೆಯಾದ ಏನಿದು ಎಕ್ಸ್ಇ?

ಕೊವಿಡ್-19 ಕಾಲದಲ್ಲಿ ಪತ್ತೆಯಾದ ಏನಿದು ಎಕ್ಸ್ಇ?

ಹೊಸ ರೂಪಾಂತರ, XE, Omicron ನ ಎರಡು ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ - BA.1 ಮತ್ತು BA.2. ಇದು ಈ ಸಮಯದಲ್ಲಿ ಜಗತ್ತಿನಾದ್ಯಂತ ಸಣ್ಣ ಪ್ರಮಾಣದ ಪ್ರಕರಣಗಳಿಗೆ ಮಾತ್ರ ಕಾರಣವಾಗಿದೆ. "XE ಮರುಸಂಯೋಜಕ (BA.1-BA.2), ಜನವರಿ 19 ರಂದು ಯುಕೆನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. 600 ಕ್ಕಿಂತ ಕಡಿಮೆ ಅನುಕ್ರಮಗಳು ವರದಿಯಾಗಿವೆ ಮತ್ತು ದೃಢೀಕರಿಸಲ್ಪಟ್ಟಿವೆ," ಎಂದು ಈ ವಾರದ ಆರಂಭದಲ್ಲಿ ಬಿಡುಗಡೆಯಾದ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಓಮಿಕ್ರಾನ್ ರೂಪಾಂತರದಲ್ಲಿಯೇ ಎಕ್ಸ್ಇ ಹೆಚ್ಚು ಅಪಾಯಕಾರಿ

ಓಮಿಕ್ರಾನ್ ರೂಪಾಂತರದಲ್ಲಿಯೇ ಎಕ್ಸ್ಇ ಹೆಚ್ಚು ಅಪಾಯಕಾರಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಅತಿಹೆಚ್ಚು ರೂಪಾಂತರಗಳು ಆಗಾಗ ಸದ್ದು ಮಾಡಿ ಸುದ್ದಿ ಆಗುತ್ತವೆ. ಅದೇ ರೀತಿ ಜಗತ್ತಿನ ಅದೆಷ್ಟೋ ರಾಷ್ಟ್ರಗಳಲ್ಲಿ ಕೊವಿಡ್ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಓಮಿಕ್ರಾನ್ ರೂಪಾಂತರಿ. ಈ ಓಮಿಕ್ರಾನ್ ರೂಪಾಂತರದ ಪೈಕಿ ಇದುವರೆಗೂ BA.2 ಉಪ ತಳಿಯು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದರೆ ಈಗ ಓಮಿಕ್ರಾನ್ ರೂಪಾಂತರಿಯಲ್ಲೇ ಎಕ್ಸ್ಇ ತಳಿಯು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ಗೊತ್ತಾಗಿದೆ. ಯುಎಸ್ ನೆಲದ ಹಲವು ಪ್ರದೇಶಗಳಲ್ಲಿ ಈಗಾಗಲೇ ಎಕ್ಸ್ಇ ತಳಿಯು ಪತ್ತೆಯಾಗಿದ್ದು, ಹರಡುವಿಕೆಯ ವೇಗವನ್ನು ಹೆಚ್ಚಿಸಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಕೊರೊನಾವೈರಸ್ ರೂಪಾಂತರ ಹರಡುವಿಕೆ ಅಪಾಯ

ಕೊರೊನಾವೈರಸ್ ರೂಪಾಂತರ ಹರಡುವಿಕೆ ಅಪಾಯ

ಈ ಮೊದಲಿನ ಬಿಎ.2 ರೂಪಾಂತರಕ್ಕೆ ಹೋಲಿಸಿದರೆ ಈಗಿನ ಹೊಸ ರೂಪಾಂತರಿಯು ಶೇ.10 ಪಟ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಅದನ್ನು ಸಂಶೋಧನೆಯ ಮೂಲಕ ದೃಢೀಕರಣ ಮಾಡಿಕೊಳ್ಳುವ ಅಗತ್ಯವಿದೆ," ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. XE ರೂಪಾಂತರದಲ್ಲಿನ ತೀವ್ರತೆ ಮತ್ತು ಪ್ರಸರಣದ ವೇಗ ಸೇರಿದಂತೆ ಗುಣಲಕ್ಷಣಗಳಲ್ಲಿನ ಗಮನಾರ್ಹ ವ್ಯತ್ಯಾಸಗಳನ್ನು ಗುರುತಿಸಬೇಕಿದೆ. ಅಲ್ಲಿಯವರೆಗೆ ಇದನ್ನು ಓಮಿಕ್ರಾನ್ ರೂಪಾಂತರದ ಭಾಗವಾಗಿ ವರ್ಗೀಕರಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Recommended Video

    ಮೋದಿ ಹತ್ಯೆಗೆ ಪ್ಲ್ಯಾನ್: ಭದ್ರತಾ ಪಡೆಗೆ ಕಳುಹಿಸಿದ ಈ- ಮೇಲ್ ನಲ್ಲಿ ಶಾಕಿಂಗ್ ಮಾಹಿತಿ | Oneindia Kannada
    ಜಾಗತಿಕ ಮಟ್ಟದಲ್ಲಿ ಕೊವಿಡ್-19 ರೂಪಾಂತರಿ

    ಜಾಗತಿಕ ಮಟ್ಟದಲ್ಲಿ ಕೊವಿಡ್-19 ರೂಪಾಂತರಿ

    UK ಆರೋಗ್ಯ ಭದ್ರತಾ ಸಮಿತಿ (UKHSA)ಯ ಅಧ್ಯಯನದ ಪ್ರಕಾರ, XD, XE ಮತ್ತು XF ಎಂಬ ಮೂರು ಹೊಸ ಮರುಸಂಯೋಜಕ ತಳಿಗಳ ಹರಡುವಿಕೆ ಹೆಚ್ಚಾಗಿದೆ. ಈ ಮರುಸಂಯೋಜಕ ತಳಿಯು ಎರಡು ಹಿಂದಿನ-ವಿಭಿನ್ನ ರೂಪಾಂತರಗಳ ಮಿಶ್ರಣವಾಗಿದೆ. ಓಮಿಕ್ರಾನ್ ರೂಪಾಂತರಿಯ ಡೆಲ್ಟಾ x BA.1 ತಳಿಯ ಹೈಬ್ರಿಡ್ ಅನ್ನು XD ಸೂಚಿಸುತ್ತದೆ. ವರದಿಗಳ ಪ್ರಕಾರ ಇದು ಹೆಚ್ಚಾಗಿ ಫ್ರಾನ್ಸ್, ಡೆನ್ಮಾರ್ಕ್ ಮತ್ತು ಬೆಲ್ಜಿಯಂನಲ್ಲಿ ಕಂಡುಬಂದಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವೈರಾಲಜಿಸ್ಟ್ ಟಾಮ್ ಪೀಕಾಕ್ ಪ್ರಕಾರ, XD ಒಂದಕ್ಕಿಂತ ಹೆಚ್ಚು ದೇಶಗಳಿಗೆ ಹರಡಿದೆ. ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ರೂಪಾಂತರಿಯು ಹೊಂದಿದೆ.

    ಎಕ್ಸ್ಇ ಎಂಬುದು ಓಮಿಕ್ರಾನ್‌ನ BA.1 x BA.2 ಉಪ-ರೂಪಾಂತರಗಳ ಹೈಬ್ರಿಡ್ ಆಗಿದೆ. ಇದು ಬ್ರಿಟನ್‌ನಲ್ಲಿ ಕಂಡುಬಂದಿದ್ದು, ಸಮುದಾಯ ಪ್ರದೇಶಗಳಲ್ಲಿ ಹರಡುವಿಕೆಗೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+