Gen-Z ಹೋರಾಟದ ಕಿಚ್ಚು, ನೇಪಾಳಕ್ಕೆ ಭಾರತೀಯ ಸೇನೆ ಎಂಟ್ರಿ ಗ್ಯಾರಂಟಿ?

ನೇಪಾಳ ನೆಲದಲ್ಲಿ ಮತ್ತೆ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಧಗಧಗಿಸಲು ಶುರು ಮಾಡಿದೆ. ಹೀಗಾಗಿ ನೇಪಾಳ ಸರ್ಕಾರ ಕೂಡ ಸೂಕ್ತ ಕ್ರಮ ಕೈಗೊಂಡಿದ್ದು, ಈಗಾಗಲೇ ನಿಷೇಧಾಜ್ಞೆ & ಕರ್ಫ್ಯೂ ಸೇರಿ ಹಲವು ಕ್ರಮ ಜಾರಿಗೆ ತರಲಾಗಿದೆ. ಇಷ್ಟಾದರೂ ಅತ್ತ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲೇ ವಾತಾವರಣ ಇದ್ದು, ಯಾವ ಕ್ಷಣದಲ್ಲಿ ದೊಡ್ಡ ಕಿಚ್ಚೇ ಹೊತ್ತಿಕೊಳ್ಳುತ್ತೋ ಎನ್ನುವ ಭಯ ಅಲ್ಲಿನ ಜನರನ್ನು ಕಾಡುತ್ತಿದೆ. ಈಗಾಗಲೇ ಸಾವು & ನೋವು ಕಂಡಿರುವ ನೇಪಾಳ ಹೋರಾಟ ಭವಿಷ್ಯದಲ್ಲಿ ಭಾರತಕ್ಕೂ ಸಮಸ್ಯೆ ಮಾಡುತ್ತಾ?

ನೇಪಾಳ ನೆಮ್ಮದಿಯಾಗಿದ್ದ ದೇಶ ಆದ್ರೆ ಅಲ್ಲಿನ ಸರ್ಕಾರವೇ ಮಾಡಿಕೊಂಡ ಒಂದು ಸಣ್ಣ ಎಡವಟ್ಟು ದೊಡ್ಡ ವಿಪತ್ತು ಸೃಷ್ಟಿ ಮಾಡಿತ್ತು. ನೇಪಾಳ ಸರ್ಕಾರ ಸುಮ್ಮನೇ ಇರದೆ ತನ್ನ ಬುಡಕ್ಕೆ ತಾನೇ ಬೆಂಕಿ ಹಚ್ಚಿಕೊಂಡು ಮಾಯವಾಗಿತ್ತು. ನೇಪಾಳದಲ್ಲಿ ಅಧಿಕಾರದಲ್ಲಿದ್ದ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆ ದೊಡ್ಡ ಗಲಾಟೆ ನಡೆದು ಹೋಗಿತ್ತು. ಆ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ದೊಡ್ಡ ಮಟ್ಟಿಗೆ ಹಿಂಸಾಚಾರ ನಡೆದು ಕೊನೆಗೂ ಕೆ.ಪಿ. ಶರ್ಮಾ ಓಲಿ ಸರ್ಕಾರ ಬಿದ್ದು ಹೋಗಿತ್ತು. ಆ ನಂತರ ಅಸ್ತಿತ್ವಕ್ಕೆ ಬಂದಿರುವ ನೇಪಾಳದ ಹೊಸ ಸರ್ಕಾರಕ್ಕೂ ಇದೀಗ ಪ್ರತಿಭಟನೆಯ ಕಾವು ತಟ್ಟಲು ಶುರು ಮಾಡಿದೆ.

Nepal s Gen Z Protests Understanding India s Potential Responses

ಬೆಂಕಿಯ ಬಲೆಯಲ್ಲಿ ಸಿಲುಕಿದ ನೇಪಾಳ?

ಹೌದು, ಈಗಿರುವ ಪರಿಸ್ಥಿತಿ ನೋಡಿದರೆ ಅಕಸ್ಮಾತ್ ನೇಪಾಳದಲ್ಲಿ ಮತ್ತೆ ಹೋರಾಟ ಶುರುವಾದರೆ ಅದು ದೊಡ್ಡ ವಿನಾಶಕ್ಕೆ ನಾಂದಿ ಹಾಡುವ ಭಯ ಕಾಡುತ್ತಿದೆ. ಏಕೆಂದರೆ ಈಗಾಗಲೇ ಮೊದಲ ಸುತ್ತಿನ ಹೋರಾಟದಲ್ಲೇ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ನೇಪಾಳದಲ್ಲಿ ಮತ್ತೆ ಹಿಂಸೆ ಶುರುವಾದರೆ ಪರಿಸ್ಥಿತಿ ಇನ್ನೂ ಘೋರವಾಗಿ ಇರಲಿದೆ. ಇದೇ ಕಾರಣಕ್ಕೆ ಹೇಗಾದರೂ ಸರಿ ಈ ಹೋರಾಟ ಮತ್ತೆ ಶುರುವಾಗಬಾರದು ಎಂದು ಸರ್ಕಾರ ಕೂಡ ಸೂಕ್ತ ಮುನ್ನೆಚ್ಚರಿಕೆ ಕ್ರಮ ಜಾರಿಗೊಳಿಸಿದೆ. ಹಾಗಾದರೆ ನೇಪಾಳದ ಸಹಾಯಕ್ಕೆ ಭಾರತೀಯ ಸೇನೆ ಎಂಟ್ರಿ ಕೊಡುತ್ತಾ?

ನೇಪಾಳ ನೆಲಕ್ಕೆ ಭಾರತೀಯ ಸೇನೆ ಎಂಟ್ರಿ?

ಈಗ ಕೇಳಿ ಬರುತ್ತಿರುವ ಆರೋಪ ನೋಡಿದರೆ ನೇಪಾಳದಲ್ಲಿ ದಿಢೀರ್ ಗಲಾಟೆ ಶುರುವಾಗಿರುವುದರ ಹಿಂದೆ ಚೀನಾ ಕೈವಾಡ ಇದೆ ಎನ್ನಲಾಗಿದೆ. ಅದರಲ್ಲೂ ನೇಪಾಳದ ಕಮ್ಯುನಿಸ್ಟ್ ಪಕ್ಷದ ಲಕ್ಷಲಕ್ಷ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಇನ್ನೊಂದು ಕಡೆ ನೇಪಾಳದಲ್ಲಿ Gen-Z ಹೋರಾಟ ನಡೆಸಿದ್ದ ಹೋರಾಟಗಾರರು ತೊಡೆತಟ್ಟಿ ಅಖಾಡ ಪ್ರವೇಶ ಮಾಡುತ್ತಿದ್ದಾರೆ. ಹೀಗೆ ಇಬ್ಬರ ನಡುವೆ ರಕ್ತಪಾತವಾಗುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದು ಕಡೆ ಪರಿಸ್ಥಿತಿ ಕೈಮೀರಿದರೆ ಭಾರತ ಕೂಡ ಎಂಟ್ರಿ ಆಗುವ ಎಲ್ಲಾ ಸಾಧ್ಯತೆ ಇದೀಗ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+