ದೇಶಕ್ಕಾಗಿ ಹೋರಾಡಿ ಜೀವ ಬಿಟ್ಟ ಯುವಕರ ಬೆನ್ನಿಗೆ ನಿಂತ ನೇಪಾಳ ಹೊಸ ಸರ್ಕಾರ
ಭಾರತದ ನೆರೆಯ ದೇಶ ನೇಪಾಳ ಇದೀಗ ತಣ್ಣಗಾಗಿದೆ, ಕಳೆದ ವಾರ ಯುವಕರು & ಯುವತಿಯರೆಲ್ಲಾ ಸೇರಿ ಭಾರಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಇಡೀ ನೇಪಾಳ ದೇಶ ಹೊತ್ತಿ ಉರಿದಿತ್ತು, ಆದರೆ ಎಲ್ಲವೂ ಈಗ ಕಂಟ್ರೋಲ್‌ಗೆ ಬಂದಿದ್ದು ಹೊಸ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಟ ಶುರು ಮಾಡಿದ್ದ ನೇಪಾಳದ ಯುವ ಜನತೆ, ಕಂಡ ಕಂಡಲ್ಲಿ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದರು. ಹೀಗಿದ್ದಾಗ ಹಲವರು ತಮ್ಮ ಜೀವ ಕೂಡ ಕಳೆದುಕೊಂಡಿದ್ದರು.
ನೇಪಾಳ ಪ್ರಧಾನಿ & ರಾಷ್ಟ್ರಪತಿ ತಮ್ಮ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಓಡಿ ಹೋಗುವ ಹಂತಕ್ಕೆ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ನಡೆಸುತ್ತಿದ್ದವರು ರೊಚ್ಚಿಗೆದ್ದು, ಕೊನೆಗೆ ನೇಪಾಳ ಸಂಸತ್ ಕಟ್ಟಡಕ್ಕೆ ಕೂಡ ಬೆಂಕಿ ಹಚ್ಚಿದ್ದರು. ಹೀಗೆ ಶುರುವಾಗಿದ್ದ ಭಾರಿ ದೊಡ್ಡ ಹಿಂಸಾಚಾರದ ಪರಿಣಾಮ 20ಕ್ಕೂ ಹೆಚ್ಚು ಜನ ಬಲಿಯಾಗಿ 500 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಆರೋಪ ಮಾಡಲಾಗಿತ್ತು. ಹೀಗಿದ್ದಾಗ ನೇಪಾಳ ಸರ್ಕಾರ ತಮ್ಮ ದೇಶದ ಹಿತಕ್ಕಾಗಿ ಹೋರಾಡಿ ಜೀವ ಬಿಟ್ಟಿರುವ ಯುವ ಸಮುದಾಯಕ್ಕಾಗಿ ಹೊಸ ಘೋಷಣೆ ಹೊರಡಿಸಿದೆ. ಈ ಮೂಲಕ ಹೊಸ ನೇಪಾಳ ಸರ್ಕಾರ ಮಹತ್ವದ ನಿರ್ಧಾರವನ್ನು ಇದೀಗ ಪ್ರಕಟಿಸಿದೆ.

ಯುವಕರಿಗೆ ಸಿಗಲಿದೆಯಾ ಹೊಸ ಉದ್ಯೋಗ?
ಇದೀಗ ನೇಪಾಳದ ಹೊಸ ಸರ್ಕಾರ ಯುವಕರ ಕಲ್ಯಾಣಕ್ಕೆ ಹಲವು ಯೋಜನೆ ಜಾರಿಗೆ ತರಲು ನಿರ್ಧಾರ ಮಾಡಿದೆ. ಹಿಂದೆ ಇದ್ದ ಸರ್ಕಾರಗಳು ಮಾಡಿದ ತಪ್ಪು & ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಇದೀಗ ನೇಪಾಳ ದೇಶದ ಹೊಸ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಹೊಸ ಸರ್ಕಾರ ಯುಕವರಿಗೆ ಬೆಂಬಲ ನೀಡುತ್ತಾ, ಅವರ ಅಭಿವೃದ್ಧಿಗೆ ಮುಂದಾಗಿದೆ. ಹೊಸ ಹೊಸ ಯೋಜನೆ ತರುವ ನಿರೀಕ್ಷೆ ಕೂಡ ಇದೆ.












Click it and Unblock the Notifications