ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಎಡಪಕ್ಷಗಳ ಮೈತ್ರಿಕೂಟಕ್ಕೆ ಭರ್ಜರಿ ಜಯ

By Sachhidananda Acharya
|
Google Oneindia Kannada News

ಕಠ್ಮಂಡು, ಡಿಸೆಂಬರ್ 11: ನೇಪಾಳ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ 165ರಲ್ಲಿ 91 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿದೆ. ಈ ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆಯ ಆಸೆ ಮತ್ತೆ ಚಿಗುರೊಡೆದಿದೆ.

ಕೆ.ಪಿ ಓಲಿ ನೇತೃತ್ವದ ಸಿಪಿಎನ್-ಯುಎಂಎಲ್ ಮತ್ತು ಪ್ರಚಂಡ ನೇತೃತ್ವದ ಸಿಪಿಎನ್-ಮಾವೋವಾದಿ ಪಕ್ಷಗಳ ಒಕ್ಕೂಟ 91 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಸಿಪಿಎನ್-ಯುಎಂಎಲ್ 66 ಸ್ಥಾನಗಳಲ್ಲಿ ಹಾಗೂ ಸಿಪಿಎನ್-ಮಾವೋವಾದಿ ಪಕ್ಷ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

Nepal Left alliance wins 91 seats, on course to form next government

ಇನ್ನು ಕಳೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ನೇಪಾಳಿ ಕಾಂಗ್ರೆಸ್ (ಎನ್ ಸಿ) ಈ ಬಾರಿ ಕೇವಲ 14 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದೆ.

ಎಡಪಕ್ಷಗಳ ಮೈತ್ರಿಕೂಟ ಜಯ ಸಾಧಿಸಿರುವುದರಿಂದ ಪ್ರಧಾನಿ ಹುದ್ದೆಯಿಂದ ಶೇರ್ ಬಹದ್ದೂರ್ ದೆಬಾ ಕೆಳಗಿಳಿಯಲಿದ್ದಾರೆ. ಕೆ.ಪಿ ಓಲಿ ನೂತನ ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ನೇಪಾಳ ಸಂಸತ್ತಿನಲ್ಲಿ 275 ಸ್ಥಾನಗಳಿದ್ದು ಇವರಲ್ಲಿ 165 ಸದಸ್ಯರನ್ನು ನೇರವಾಗಿ ಜನರೇ ಆಯ್ಕೆ ಮಾಡುತ್ತಾರೆ. ಉಳಿದ 110 ಜನರನ್ನು ಪರೋಕ್ಷವಾಗಿ ಆಯ್ಕೆ ಮಾಡಲಾಗುತ್ತದೆ.

ನೇಪಾಳ ಸಂಸತ್ತಿಗೆ ನವೆಂಬರ್ 26 ಮತ್ತು ಡಿಸೆಂಬರ್ 7ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

English summary
Nepal's Left alliance winning 91 of the 165 seats in the historic polls that many hope will bring the political stability to the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X