ಭಾರತದ ವಿರುದ್ಧ ನೇಪಾಳ ಸಂಸತ್‌ನಲ್ಲಿ ಮಸೂದೆ ಮಂಡನೆ!
ಕಾಠ್ಮಂಡು, ಮೇ 31: ಭಾರತದೊಂದಿಗೆ ಗಡಿ ವಿವಾದ ಆರಂಭಿಸಿರುವ ನೇಪಾಳ ತನ್ನ ಸಂಸತ್‌ನಲ್ಲಿ ಭಾನುವಾರ ಮಹತ್ವದ ತಿದ್ದುಪಡಿ ಮಸೂದೆ ಮಂಡಿಸಿದೆ.
Recommended Video
ನೇಪಾಳ ಭೂಪ್ರದೇಶದ ಭಾಗವಾಗಿರುವ ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಪ್ರದೇಶವನ್ನು ಭಾರತ ಒತ್ತುವರಿ ಮಾಡಿಕೊಂಡಿದೆ ಎಂದು ನೇಪಾಳ ಆರೋಪಿಸಿದೆ. ಹೀಗಾಗಿ ಇತ್ತೀಚೆಗೆ ನೇಪಾಳ ಸರ್ಕಾರ ತನ್ನ ರಾಜಕೀಯ ನಕಾಶೆಯನ್ನು ಹೊಸದಾಗಿ ರಚಿಸಿ ಬಿಡುಗಡೆ ಮಾಡಿತ್ತು.
ಭಾರತ ಸರ್ಕಾರ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ನ್ಯಾಯಸಮ್ಮತವಲ್ಲ ಎಂದು ತಕರಾರು ತೆಗೆದಿತ್ತು. ಹೀಗಾಗಿ ನೇಪಾಳ ಕಾನೂನು ಸಚಿವ ಶಿವಮಯ್ ಅವರು, ಸಂಸತ್‌ನಲ್ಲಿ ಭೂ ನಕಾಶೆ ಕುರಿತಾದ ಮಸೂದೆ ಮಂಡಿಸಿದ್ದಾರೆ. ಇದಕ್ಕೆ ಅಲ್ಲಿನ ವಿರೋಧ ಪಕ್ಷಗಳು ಬೆಂಬಲ ಸೂಚಿವೆ. ಈ ಮೂಲಕ ನೇಪಾಳದ ಹೊಸ ರಾಜಕೀಯ ನಕಾಶೆಗೆ ಅಲ್ಲಿನ ಸಂಸತ್ ಅಂಗೀಕಾರ ನೀಡುವ ಸೂಚನೆ ಇದೆ. ನೇಪಾಳ ಭಾರತದೊಂದಿಗೆ ಗಡಿ ವಿವಾದವನ್ನು ಮುಂದುವರೆಸುವ ಇರಾದೆ ವ್ಯಕ್ತಪಡಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಾಖಂಡದ ಪಿಥೋರಗರ್ ಹಾಗೂ ಕೈಲಾಶ್ ಮಾನಸರೋವರ್ ಮಾರ್ಗದಲ್ಲಿ ಲಿಪುಲೆಖ್ ಬಳಿ ಲಿಂಕ್ ರಸ್ತೆಯನ್ನು ಇತ್ತೀಚೆಗೆ ಉದ್ಘಾಟಿಸಿದ್ದರು. ಅದಾದ 10 ದಿನಗಳ ನಂತರ ನೇಪಾಳದ ವಿದೇಶಾಂಗ ಸಚಿವಾಲಯವು ಲಿಂಕ್ ರಸ್ತೆಯನ್ನು ಆಕ್ಷೇಪಿಸಿ ಪತ್ರಿಕಾ ಪ್ರಕಟಣೆ ನೀಡಿತ್ತು. ಭಾರತವು ನೇಪಾಳದ ವಾದವನ್ನು ತಿರಸ್ಕರಿಸಿದೆ, ವಿವಾದಿತ ಜಾಗವು ಸಂಪೂರ್ಣವಾಗಿ ಭಾರತದ ಭೂಪ್ರದೇಶದಲ್ಲಿದೆ ಎಂದು ಹೇಳಿದೆ.












Click it and Unblock the Notifications