Nepal Protest: ನೇಪಾಳ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ಹೊಸ ಸರ್ಕಾರದ ಸಾಥ್...
ನೇಪಾಳ ಕುದಿಯುವ ಜ್ವಾಲೆಯಿಂದ ಹೊರಬಂದು ಹೊಸ ಬದಕು ಕಟ್ಟಿಕೊಳ್ಳುವ ದಾರಿಗೆ ಸಾಗಿದೆ... ಭಾರತದ ನೆರೆಯ ದೇಶ ನೇಪಾಳ ಇದೀಗ ಬದಲಾಗುತ್ತಿದ್ದು, ಕಳೆದ ವಾರ ನಡೆದಿದ್ದ ಹೋರಾಟ ಮತ್ತು ಹಿಂಸಾಚಾರ ಮರೆತು ಇದೀಗ ಹೊಸ ಜೀವನದ ಕಡೆಗೆ ಹೆಜ್ಜೆ ಹಾಕಿದ್ದಾರೆ ನೇಪಾಳದ ಜನ. ನೇಪಾಳ ದೇಶಕ್ಕೆ ಹೊಸ ಪ್ರಧಾನಿಯ ಆಗಮನ ಕೂಡ ಆಗಿದ್ದು, ಇದೇ ಸಮಯದಲ್ಲಿ ಹೊಸ ಸರ್ಕಾರ ಭರ್ಜರಿ ಸುದ್ದಿಯನ್ನ ಹೋರಾಟಗಾರರ ಕುಟುಂಬಳಿಗೆ ನೀಡಿದೆ.
ಭಾರತದ ನೆರೆ ದೇಶ ನೇಪಾಳ ಒದ್ದಾಡಿ ಹೋಗಿತ್ತು, ಕಳೆದ ಕೆಲ ದಿನಗಳಿಂದ ನೇಪಾಳ ಕೊತ ಕೊತ ಕುದ್ದು ಹೋಗಿತ್ತು. ಆದರೆ ಈಗ ಎಲ್ಲವೂ ತಣ್ಣಗಾಗಿ ಹೋಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ನೇಪಾಳದ ಯುವಕರು & ಯುವತಿಯರು ಇದೀಗ ರಾಜಕೀಯ ಗೆಲುವನ್ನು ಕಂಡಿದ್ದಾರೆ. ಹೀಗಿದ್ದಾಗಲೇ ಸುಶೀಲ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಪ್ರಮಾಣ ವಚನವನ್ನು ಸ್ವೀಕರಿಸಿದ ನಂತರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ನೇಪಾಳ ಹೋರಾಟದ ಹಾದಿಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಹೊಸ ಭರವಸೆ ಮೂಡಿಸಿದ್ದಾರೆ!

ಹೊಸ ಸರ್ಕಾರ, ಹೊಸ ಭರವಸೆ!
ನೇಪಾಳ ಸರ್ಕಾರವು ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿ 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಬ್ಯಾನ್ ಮಾಡಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ಯುವತಿ & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿತ್ತು. ಆದ್ರೆ ಸೋಷಿಯಲ್ ಮೀಡಿಯಾ ವಿಚಾರಕ್ಕೆ ಪ್ರತಿಭಟನೆ ಮಾಡಿಲ್ಲ, ಭ್ರಷ್ಟಾಚಾರ ವಿರುದ್ಧ ಹೋರಾಟ ಅಂತಾ ಖುದ್ದಾಗಿ ನೇಪಾಳ ಯುವ ಸಮುದಾಯ ಹೇಳಿತ್ತು. ಇಂತಹ ಸಮಯದಲ್ಲೇ ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಭರವಸೆ ತುಂಬಿ & ಪರಿಹಾರ ನೀಡಲು ಮುಂದಾಗಿದೆ ನೇಪಾಳ ಸರ್ಕಾರ.












Click it and Unblock the Notifications