Nepal Flood: 3 ದಿನ ಮಣ್ಣಿನಡಿ ಸಿಲುಕಿದ್ದ 6 ವರ್ಷದ ಬಾಲಕಿ ಜೀವಂತ ಪತ್ತೆ: ನೇಪಾಳದಲ್ಲಿ ಪವಾಡಸದೃಶ ರಕ್ಷಣೆ
ರಾಸುವಾ: ನೇಪಾಳದಲ್ಲಿ ಘಟಿಸಿದ ಭೀಕರ ಪ್ರವಾಹದಿಂದ ಅನೇಕರನ್ನು ರಕ್ಷಿಸಲಾಗುತ್ತಿದೆ. ಇಲ್ಲಿ ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯುವಾಗ ಮನಕಲುಕುವ ಘಟನೆ ನಡೆದಿದೆ. ಅವಶೇಷಗಳಡಿ ಉಸಿರು ಹಿಡಿದ್ದ ಆರು ವರ್ಷದ ಬಾಲಕಿಯನ್ನು ಜೀವಂತವಾಗಿ ರಕ್ಷಣಾ ತಂಡಗಳು ಪತ್ತೆ ಮಾಡಿವೆ.
ನೇಪಾಳದ ರಾಸುವಾ ಜಿಲ್ಲೆಯಲ್ಲಿ ನಡೆದ ಪ್ರವಾಹ ದುರಂತದಲ್ಲಿ ನೂರಾರು ಜನ ಮೃತಪಟ್ಟಿದ್ದಾರೆ. ಮನೆಗಳು ಕುಸಿದು ಎಲ್ಲೆಂದರಲ್ಲಿ ಮಣ್ಣು ತುಂಬಿಕೊಂಡಿದೆ. ನೀರಿ ಕೊಚ್ಚಿ ಹೋದವರು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 800ರ ಗಡಿ ಸಮೀಪಿಸಿದೆ. ಮೃತದೇಹ ಹುಡುಕಿ ಹೊರ ತೆಗೆಯಲಾಗುತ್ತಿದೆ. ಈ ವೇಳೆ ಅಚ್ಚರಿ ಸಂಗತಿಯೊಂದು ನಡೆದಿದ್ದು, ಅವಶೇಷಗಳಡಿ ಸಿಲುಕಿದ್ದು ಆರು ವರ್ಷದ ಮಗುವನ್ನು ರಕ್ಷಣಾ ತಂಡ ರಕ್ಷಿಸಿದೆ. ಮಗು ಜೀವಂತವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ದಿನಗಳಿಂದ ಮಣ್ಣಿನಲ್ಲಿದ್ದ ಬಾಲಕಿ ಮನಿಷಾ
ಮೂರು ದಿನಗಳಿಂದ ಮಣ್ಣು, ಮನೆ ಅವಶೇಷಗಳಡಿ ಸಿಲುಕಿದ್ದ ಮಗು ಕೊನೆಗೂ ಜೀವಂತವಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಮಗುವಿನ ಧ್ವನಿ ಕೇಳಿಸಿದೆ. ಮೊದಲಿಗೆ ಇದನ್ನು ಭ್ರಮೆ ಎಂದುಕೊಂಡ ಸಿಬ್ಬಂದಿ ಸೂಕ್ಷ್ಮವಾಗಿ ಕೇಳಿಸಿಕೊಂಡಾಗ ಅದು ಅಳುವ ಮಗುವಿನ ಧ್ವನಿ ಎಂಬುದು ಗೊತ್ತಾಗಿದೆ. ತಡ ಮಾಡದೇ ಧ್ವನಿ ಕೇಳಿ ಬರುತ್ತಿದ್ದ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಅವಶೇಷಗಳಡಿ ಉಸಿರಾಡುತ್ತಿದ್ದ ಬಾಲಕಿ ಮನಿಷಾಳನ್ನು ರಕ್ಷಣಾ ತಂಡ ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಿಸಿದೆ. ಮೊದಲಿಗೆ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಕೂಡಲೇ ಕಠ್ಮಂಡುವಿಗೆ ಕಳುಹಿಸಲಾಗಿದೆ.
ಒಂದು ಕಡೆ ಕಾರ್ಯಾಚರಣೆಗೆ ನಿರಂತರ ಮಳೆ ಅಡ್ಡಿ ಉಂಟು ಮಾಡುತ್ತಿದೆ. ಬದುಕುಳಿದವರು ಮುಂದೆ ಈ ನೆಲದಲ್ಲಿ ಹೇಗೆ ಜೀವನ ಎಂದು ಯೋಚಿಸುತ್ತಿದ್ದಾರೆ. ಕೆಲವರು ಕುಟುಂಬಸ್ಥರುನ್ನು, ಮನೆಯನ್ನು ಕಳೆದುಕೊಂಡು ಬೀದಿ ಬಿದ್ದಿದ್ದಾರೆ. ಇಡೀ ಜೀವನ ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿ ಹಲವರದ್ದಾಗಿದೆ. ಪ್ರವಾಹದ ಬಳಿಕ ಸಾಂಕ್ರಾಮಿಕ ರೋಗದ ಭೀತಿಯು ಇಲ್ಲಿ ನಾಗರಿಕರನ್ನು ಕಾಡುತ್ತಿದೆ. ಇವುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಾಲಕನೊಬ್ಬ ತನ್ನ ತಂಗಿಯನ್ನು ಹೆಗಲ ಮೇಲೆ ಹೊತ್ತು ಪೋಷಕರ ಹುಡುಕಾಟದ ವಿಡಿಯೋ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.
ಸಾಮೂಹಿಕ ಶವ ಸಂಸ್ಕಾರಕ್ಕೆ, ಜಿಯೋ ಟ್ಯಾಗ್ ವ್ಯವಸ್ಥೆ
ಪ್ರವಾದಲ್ಲಿ ಸಿಲುಕಿ ಮೃತಪಟ್ಟು ಗುರುತು ಪತ್ತೆ ಆಗದ, ವಾರಸುದಾರರ ಸಿಗದ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ. ಘಟನೆ ನಡೆದು ಬಳಿಕ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಶವಗಳು ಕೊಳೆಯುತ್ತಿವೆ. ಸೋಂಕು ಹರಡುವ ಸಾಧ್ಯತೆ ಹಿನ್ನೆಲೆ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಇನ್ನೂ ಮೃತರ ಕುರಿತು ಮಾಹಿತಿಗೆ ಸಂಬಂಧಿಸಿಕರ ಡಿಎನ್‌ಎ ಮಾದರಿ ನೀಡಬೇಕು. ವರದಿ ಬಂದ ಬಳಿಕ ನಿಮಗೆ ಹೊಂದಿಕೆ ಆಗುವ ಶವಗಳ ಸಮಾಧಿ ನಂಬರ್ ಆಧಾರದಲ್ಲಿ ಹುಡುಕಿ ಶವ ತೆಗೆದು ಸಂಬಂಧಪಟ್ಟವರಿಗೆ ಹಸ್ತಾಂತರಿಸಲು ಜಿಯೋ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ.
Miracle rescue in Nepal as a young girl is found alive after two days buried beneath the soil. 🙏 #Nepal #NepalFloodUpdate https://t.co/A32MuJ8MtM
— JUST IN | World (@justinbroadcast) August 29, 2026


Click it and Unblock the Notifications
