Tiger Spotted: 50 ವರ್ಷಗಳ ಬಳಿಕ ಕೊಪ್ಪಳ ಕಾಡಲ್ಲಿ ಹುಲಿ ಪ್ರತ್ಯಕ್ಷ! 4 ಡ್ರೋನ್, 38 ಸಹಿತ ಕಾರ್ಯಾಚರಣೆ ಶುರು

ಕೊಪ್ಪಳ: ಜಿಲ್ಲೆಯ ಗಂಗಾವತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೆಲ ಗ್ರಾಮಗಳ ಸುತ್ತಮುತ್ತ ಹಲವು ದಿನಗಳಿಂದ ಹುಲಿಯೊಂದು ಸಂಚಾರ ನಡೆಸುತ್ತಿರುವುದು ದೃಢಪಟ್ಟಿದೆ. ಜನರ ಆತಂಕಗೊಳ್ಳುವ ಬದಲಾಗಿ, ಎಚ್ಚರಿಕೆಯಿಂದ ಇರಬೇಕು. ಅರಣ್ಯಾಧಿಕಾರಿಗಳ ವಿಶೇಷ ತಂಡ ರಚಿಸಿದ್ದು, ಡ್ರೋನ್, ಹತ್ತಾರು ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ. ಶೀಘ್ರವೇ ಹುಲಿ ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಧೈರ್ಯ ಹೇಳಿದ್ದಾರೆ.

ಏಳು ಬೆಟ್ಟಗಳ ಸಾಲು ಹೊಂದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ತೆಂಬಾ ಭಾಗದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಹುಲಿ ಸಂಚರಿಸುತ್ತಿರುವುದು ದೃಢಪಟ್ಟಿದೆ. ಕಳೆದ ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿಯ ಹೆಜ್ಜೆ ಗುರುತುಗಳ ಬಗ್ಗೆ ಅನುಮಾನದ ಹಿನ್ನೆಲೆ ಅರಣ್ಯ ಇಲಾಖೆಯಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ವೇಳೆ ಹುಲಿಯ ಚಲನವಲನ ಪತ್ತೆಯಾಗಿದ್ದು, ಕ್ಯಾಮೆರಾದಲ್ಲಿ ಹುಲಿ ಸಂಚಾರ ಸೆರೆಯಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

Tiger Spotted in Koppal dp

ಹುಲಿಗಾಗಿ ರಾತ್ರಿ ಡ್ರೋನ್ ಹಾರಾಟ

ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಲಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ರಾತ್ರಿ ವೇಳೆಯಲ್ಲಿ ವಿಶೇಷ ಡ್ರೋನ್ ಹಾರಿಸಿ ಹುಲಿ ಪತ್ತೆಗೆ ಪ್ರಯತ್ನ ನಡೆಸಲಾಗಿದೆ. ಬಳ್ಳಾರಿ, ದರೋಜಿ, ವಿಜಯನಗರ ಸೇರಿ ಕೊಪ್ಪಳ ಜಿಲ್ಲೆಯ ಎಲ್ಲ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸೇರಿಸಿ, ಐದು ತಂಡಗಳಾಗಿ ವಿಭಜಿಸಿ ಹುಲಿ ಪತ್ತೆ ಕಾರ್ಯ ಆರಂಭವಾಗಿದೆ ಎಂದರು.

4 ಡ್ರೋನ್, 38 ಕ್ಯಾಮೆರಾ ಮೂಲಕ ನಿಗಾ

ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಭಾಗದ ಅಧಿಕಾರಿಗಳು ಸೋಮವಾರ ಕೊಪ್ಪಳ ತಾಲ್ಲೂಕಿನ ಬಸಾಪುರ ಭಾಗದಲ್ಲಿ 18 ಕ್ಯಾಮೆರಾ, ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ 20 ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಬೋನ್ ಗಳನ್ನು ಸಹ ಸಿದ್ಧಪಡಿಸಿ, ಅದು ಓಡಾಡುವ ಸ್ಥಳದಲ್ಲಿ ಇಡಲಾಗಿದ.ಎ ಅರಣ್ಯ ಇಲಾಖೆ ಅಧಿಕಾರಿಗಳು 4 ಡ್ರೋನ್ ಬಳಸಿ, ಹುಲಿ ಪತ್ತೆಗೆ ಪ್ರಯತ್ನಿಸಿದ್ದು, ದಟ್ಟ ಕಾಡಿರುವ ಕಾರಣ ಕ್ಯಾಮೆರಾ ಕಣ್ಣಿಗೆ ಇನ್ನೂವರೆಗೀ ಬಿದ್ದಿಲ್ಲ. ಶೀಘ್ರವೇ ಸೆರೆ ಹಿಡಿಯಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಹುಲಿ ಒಂದು ಸ್ಥಳದಿಂದ 20 ರಿಂದ 25 ಕಿಲೋ ಮೀಟರ್ ಸಂಚರಿಸಲಿದೆ. ಅದು ಕೂಡ ಹುಲಿಗೆ ಅಡಚಣೆ ಉಂಟಾದರೆ, ಆಹಾರ ಸಿಗದಿದ್ದರೆ ಮಾತ್ರ ದೂರ ಹೋಗಲು ಸಾಧ್ಯ. ಸದ್ಯದ ಮಟ್ಟಿಗೆ ಹುಲಿ ಜನರಿಗೆ ತೊಂದರೆ ಕೊಡುತ್ತಿಲ್ಲ. ತೆಂಬಾ ಅರಣ್ಯ ಪ್ರದೇಶ 8 ರಿಂದ 10 ಸಾವಿರ ಎಕರೆಯಷ್ಟಿದ್ದು, ಹುಲಿ ಸಿಗುವುದು ಅಷ್ಟು ಸುಲಭವಲ್ಲ. ಆದರೂ ಜನರ ಸುರಕ್ಷತೆ ದೃಷ್ಟಿಯಿಂದ ಹುಲಿ ಸೆರೆ ಹಿಡಿಯಲಾಗುವುದು. ಜನರ ಆತಂಕಕ್ಕೆ ಒಳಗಾಗುವುದು ಬೇಡ. ಜನರು ಹೊರಗಡೆ ಹೋಗುವಾಗ ಆದಷ್ಟು ಎಚ್ಚರದಿಂದ ಇರಬೇಕೆಂದು ಅವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+