ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲು

ಇಸ್ಲಾಮಾಬಾದ್, ಜುಲೈ 06: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡ ಕುಖ್ಯಾತಿ ಗಳಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್​ ಅವರಿಗ್ ಜೈಲು ಶಿಕ್ಷೆಯಾಗಿದೆ.

ವಿದೇಶಗಳಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ , ಪುತ್ರಿ ಮರ್ಯಮ್ ಹಾಗೂ ಅಳಿಯ ಕ್ಯಾ. ಸಫ್ದಾರ್ ವಿರುದ್ಧ ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಗುರುವಾರ ದೋಷಾರೋಪ ಹೊರಿಸಿರುವುದು ತಿಳಿದಿರಬಹುದು.

ಈಗ ಅವೆನ್ ಫೀಲ್ಡ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ನವಾಜ್ ಗೆ 7 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ನವಾಜ್ ಷರೀಫ್ ಅವರ ಅಳಿಯ ಸಫ್ದಾರ್ ಗೆ 1 ವರ್ಷ ಶಿಕ್ಷೆ ನೀಡಿ ಕೋರ್ಟ್ -1 ಜಡ್ಜ್ ಮೊಹಮ್ಮದ್ ಬಷೀರ್ ಅವರು ಆದೇಶ ಹೊರಡಿಸಿದ್ದಾರೆ.

Nawaz Sharif sentenced to 10 years, Maryam 7 in Avenfield reference

ಲಂಡನ್ನಿನ ಅವೆನ್ ಫೀಲ್ಡ್ ಪ್ರಾಪರ್ಟೀಸ್ ನಲ್ಲಿ ನಕಲಿ ದಾಖಲೆ ನೀಡಿ ಆಸ್ತಿ ಹೊಂದಿರುವ ಕಾರಣಕ್ಕೆ ನವಾಜ್ ಷರೀಫ್ ಕುಟುಂಬದ ಮೇಲೆ 2006ರಿಂದ ತನಿಖೆ ನಡೆದಿದೆ. ಪನಾಮಾ ಪೇಪರ್ಸ್ ನಲ್ಲಿ ಹೆಸರು ಕಾಣಿಸಿಕೊಂಡ ಬಳಿಕ ಮತ್ತೆ ಮೂರು ಪ್ರಕರಣದಲ್ಲಿ ಕೂಡಾ ಆರೋಪಿಯನ್ನಾಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+