ಪತ್ನಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನವಾಜ್ ಷರೀಫ್‌ಗೆ ಪೆರೋಲ್
ಲಾಹೋರ್, ಸೆಪ್ಟೆಂಬರ್ 12: ಮಂಗಳವಾರ ಲಂಡನ್‌ನಲ್ಲಿ ನಿಧನರಾದ ತಮ್ಮ ಪತ್ನಿ ಬೇಗಂ ಕುಲ್ಸೂಮ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪೆರೋಲ್ ನೀಡಲಾಗಿದೆ.
ಅಡಿಯಾಲ ಜೈಲಿನಲ್ಲಿದ್ದ ಷರೀಫ್, ಅವರ ಮಗಳು ಮರಿಯಮ್ ಮತ್ತು ಅಳಿಯ ಕ್ಯಾಪ್ಟನ್ (ನಿವೃತ್ತ) ಮುಹಮ್ಮದ್ ಸಫ್ದಾರ್ ಅವರನ್ನು ಪಂಜಾಬ್ ಸರ್ಕಾರದ ಗೃಹ ಇಲಾಖೆಯ ಆದೇಶದ ಮೇರೆಗೆ 12 ಗಂಟೆಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು.
ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಲ್ಸೂಮ್ (68) ಲಂಡನ್‌ನಲ್ಲಿ ನಿಧನರಾಗಿದ್ದರು. ಅವರ ಮೃತದೇಹವನ್ನು ಪಾಕಿಸ್ತಾನಕ್ಕೆ ತರಲಾಗುತ್ತಿದ್ದು, ಷರೀಫ್ ಅವರ ಜತಿ ಉಮ್ರಾ ಲಾಹೋರ್ ನಿವಾಸದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಿಂದ ವಿಶೇಷ ವಿಮಾನದಲ್ಲಿ ನವಾಜ್ ಷರೀಫ್, ಅವರ ಮಗಳು ಮತ್ತು ಅಳಿಯನನ್ನು ಬುಧವಾರ ನಸುಕಿನ 3.15ರ ವೇಳೆಗೆ ಜತಿ ಉಮ್ರಾಕ್ಕೆ ಕರೆತರಲಾಯಿತು .
ಈ ಮೂವರಿಗೂ ಐದು ದಿನಗಳ ಪೆರೋಲ್ ನೀಡುವಂತೆ ಕೋರಿ ನವಾಜ್ ಅವರ ಸಹೋದರ ಶಹಬಾಜ್ ಷರೀಫ್ ಪಂಜಾಬ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಅದನ್ನು ಪರಿಗಣಿಸದ ಸರ್ಕಾರ ಕೇವಲ 12 ಗಂಟೆಗಳ ಅವಧಿಗೆ ಪೆರೋಲ್ ನೀಡಿತು.
ಕುಲ್ಸೂಮ್ ಅವರ ಅಂತ್ಯ ಸಂಸ್ಕಾರ ಶುಕ್ರವಾರ ನಡೆಯಲಿದ್ದು, ಅವರ ಮೃತದೇಹವನ್ನು ತರಲು ಶಹಬಾಜ್ ಲಂಡನ್‌ಗೆ ತೆರಳಿದ್ದಾರೆ.












Click it and Unblock the Notifications