ನಾಸಾ ಉಪಗ್ರಹದ ಕಣ್ಣಲ್ಲಿ ತಿತ್ಲಿ ಮತ್ತು ಲುಬಾನ್ ಚಂಡಮಾರುತ
ಕ್ಯಾಲಿಫೋರ್ನಿಯಾ, ಅಕ್ಟೋಬರ್ 16: ಪೂರ್ವ ಭಾರತದ ಕೆಲವು ಭಾಗಗಳಿಗೆ ಅಪ್ಪಳಿಸಿದ್ದ ಭೀಕರ ತಿತ್ಲಿ ಮತ್ತು ಲುಬಾನ್ ಚಂಡಮಾರುತದ ಉಪಗ್ರಹ ಚಿತ್ರವನ್ನು ಅಮೆರಿಕದ ನಾಸಾ(National Aeronautics and Space Administration) ಸಂಸ್ಥೆ ಬಿಡುಗಡೆ ಮಾಡಿದೆ.
ಹಿಂದು ಮಹಾಸಾಗರದಲ್ಲಿ ಕಂಡು ಬಂದ ಮೈಕೆಲ್ ಎಂಬ ಬಿರುಗಾಳಿಯ ನಂತರ ಕಂಡು ಬಂದ ತಿತ್ಲಿ ಮತ್ತು ಲುಬಾನ್ ಚಂಡ ಮಾರುತಕ್ಕೆ ಇದುವರೆಗೆ ಸುಮಾರು 20 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡುಬಂದ ತಿತ್ಲಿ ಚಂಡಮಾರುತ ಉಪಗ್ರಹದಿಂದ ಹೇಗೆ ಕಾಣಿಸುತ್ತಿತ್ತು ಎಂಬ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.

ಈ ಚಂಡಮಾರುತದಿಂದಾಗಿ ವಾತಾವರಣದಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಪೂರ್ವ ಭಾಗ ಮತ್ತು ದಕ್ಷಣ ಭಾಗಗಳಲ್ಲಿ ಅಲ್ಲಲ್ಲಿ ಮಳೆಯೂ ಬೀಳುತ್ತಿದ್ದು, ಅದಕ್ಕೂ ಕಾರಣ ಈ ಚಂಡಮಾರುತವೇ ಎನ್ನಲಾಗುತ್ತಿದೆ.

ಗಂಟೆಗೆ 120 ರಿಂದ 140 ಕಿಮೀ ವೇಗದಲ್ಲಿ ಚಲಿಸುವ ಈ ಚಂಡಮಾರುತದ ವೇಗ ಇದೀಗ ಕೊಂಚ ಕಡಿಮೆಯಾಗಿದೆ.












Click it and Unblock the Notifications