ಮಂಗಳ ಗ್ರಹದಲ್ಲಿ ಜೀವಿಗಳು..! ಹುಡುಕಾಟ ಆರಂಭಿಸಿದ ‘ನಾಸಾ’ ರೋವರ್..!
ವೈಜ್ಞಾನಿಕ ಸಂಶೋಧನೆ ಮೂಲಕ ಜಗತ್ತಿಗೇ ಮಾದರಿಯಾಗಿರುವ 'ನಾಸಾ' ಸಂಸ್ಥೆ ಈಗ ಮತ್ತೊಂದು ಸಾಧನೆ ಮಾಡಲು ಮುಂದಾಗಿದೆ. ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಉಡಾಯಿಸಿದ್ದ ಪೆರ್‌ಸೆವೆರನ್ಸ್ ರೋವರ್ ಜೀವಿಗಳಿಗಾಗಿ ಹುಡುಕಾಟ ಆರಂಭಿಸಿದೆ.
2021ರ ಫೆಬ್ರವರಿಯಲ್ಲಿ ಮಂಗಳನ ಮೇಲೆ ಲ್ಯಾಂಡ್ ಆಗಿದ್ದ ನಾಸಾ ರೋವರ್ ಪೆರ್‌ಸೆವೆರನ್ಸ್ ಹಲವು ಮಹತ್ವದ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸಿದ್ದ ಪೆರ್‌ಸೆವೆರನ್ಸ್ ರೋವರ್, ಈಗ ಮಂಗಳ ಗ್ರಹದ ಮೇಲೆ ಜೀವಿಗಳು ಇದ್ದಾವಾ..? ಎಂದು ಹುಡುಕಾಟ ಆರಂಭಿಸಿದೆ. ಪೆರ್‌ಸೆವೆರನ್ಸ್ ಉಡಾವಣೆ ಮಾಡಿದಾಗ ಸುಮಾರು 1 ಟನ್ ತೂಕವಿತ್ತು.
ರೋವರ್ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು 6 ಅಡಿಗಿಂತ ಉದ್ದ ಇವೆ, ಹಾಗೇ ಪೆರ್‌ಸೆವೆರನ್ಸ್ 6 ಚಕ್ರಗಳನ್ನ ಹೊಂದಿದೆ. ತನ್ನಲ್ಲಿರುವ ಸಾಧನಗಳನ್ನ ಬಳಸಿಕೊಂಡು ಸಾಧನೆ ಮಾಡಲು ಪೆರ್‌ಸೆವೆರನ್ಸ್ ಸಜ್ಜಾಗಿದೆ. ಇನ್ನೂ ಕೆಲವೇ ದಿನದಲ್ಲಿ ಮಂಗಳ ಗ್ರಹದ ಮಹತ್ವದ ಮಾಹಿತಿಗಳು ಭೂಮಿಗೆ ತಲುಪಲಿವೆ.

ಹಳೇ ಕೆರೆ
ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ
20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ನಾಸಾ ಸಂಸ್ಥೆಯ ‘ಪೆರ್‌ಸೆವೆರನ್ಸ್
ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.

ರಾಕೆಟ್ ಲಾಂಚ್
ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಉಪಗ್ರಹಕ್ಕೆ ಸ್ಯಾಂಪಲ್
ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications