ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ-20 ಶೃಂಗಸಭೆ ಬಳಿಕ ಜರ್ಮನಿಗೆ ತೆರಳಿದ ಪ್ರಧಾನಿ ಮೋದಿ

|
Google Oneindia Kannada News

ಗ್ಲಾಸ್ಗೋ, ನವೆಂಬರ್ 01: ಜಿ-20 ಶೃಂಗಸಭೆ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಜರ್ಮನಿಗೆ ಭೇಟಿ ನೀಡಿದ್ದಾರೆ.

ಜಿ20 ನಿಮಿತ್ತ ಪ್ರಧಾನಿ ಮೋದಿ ರೋಮ್‌ಗೆ ತೆರಳಿದ್ದು, ಇದೀಗ ಎರಡು ದಿನಗಳ ಪ್ರವಾಸಕ್ಕೆ ಜರ್ಮನಿಗೆ ಭೇಟಿ ನೀಡಿದ್ದಾರೆ.

ಜಿ20 ಶೃಂಗಸಭೆ ನಡುವಲ್ಲೇ ಪ್ರಧಾನಿ ಮೋದಿ ಅವರು ಇಂದು ಜರ್ಮನ್ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಗಾಢವಾಗಿಸಲು ಪ್ರತಿಜ್ಞೆ ಮಾಡಿದರು.

Narendra Modi

ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಡಾ ಮಾರ್ಕೆಲ್ ಅವರನ್ನು ಆಹ್ವಾನಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಜಿ20 ಶೃಂಗಸಭೆಯಲ್ಲಿ ಹಲವು ವಿಶ್ವ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

ಗ್ಲಾಸ್ಗೊದಲ್ಲಿ ಮೋದಿ, ಬ್ರಿಟನ್‌ ಪ್ರಧಾನಿ ಜತೆ ಮಾತುಕತೆ: ಇನ್ನು ಜಿ20 ಶೃಂಗಸಭೆ ಬಳಿಕ ಗ್ಲಾಸ್ಗೋ ತೆರಳಲಿರುವ ಪ್ರಧಾನಿ ಮೋದಿ 2 ದಿನ ಅಲ್ಲಿಯೇ ಉಳಿದುಕೊಳ್ಳಲ್ಲಿದ್ದಾರೆ.
ನವೆಂಬರ್ 1 ಮತ್ತು 2 ರಂದು ಗ್ಲ್ಯಾಸ್ಗೋದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗ್ಲಾಸ್ಗೊದಲ್ಲಿ ಪ್ರಧಾನಿ ಮೋದಿ ಅವರು 120ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ನಡೆಸುವ ಚರ್ಚೆಯಲ್ಲಿ ಭಾಗಿಯಾಗುವರು.

ಬ್ರಿಟನ್‌ನಲ್ಲಿ ಮೂರು ದಿನಗಳವರೆಗೆ ಅಂದರೆ ಮಂಗಳವಾರದವರೆಗೆ ಪ್ರವಾಸ ಕೈಗೊಳ್ಳುವ ಅವರು ಸಿಒಪಿ 26 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವರು. ಸೋಮವಾರ ಮಧ್ಯಾಹ್ನ ಅವರು ಭಾರತದ ಹವಾಮಾನ ಕ್ರಿಯಾ ಯೋಜನೆ ಕುರಿತು ಹೇಳಿಕೆ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಮೆರಿಕ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ವಿಶ್ವ ನಾಯಕರೊಂದಿಗೆ ಸಂವಾದ ನಡೆಸಿದರು. ಸಂತೋಷವನ್ನು ವಿನಿಮಯ ಮಾಡಿಕೊಂಡರು ಮತ್ತು ಸೌಹಾರ್ದತೆಯ ಮನೋಭಾವವನ್ನು ಪ್ರದರ್ಶಿಸಿದರು.

ಪಿಎಂಒ ಇಂಡಿಯಾ ಟ್ವೀಟ್ ಮಾಡಿದ ಸರಣಿ ಫೋಟೋಗಳಲ್ಲಿ, ಪ್ರಧಾನಿ ಮೋದಿ ಅವರು ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಕಾಣಬಹುದು.

ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ನಡುವೆ ಅತ್ಯಂತ ಆತ್ಮೀಯ ಭೇಟಿಯಾದರು. ಬರೀ ಇಪ್ಪತ್ತು ನಿಮಿಷಕ್ಕೆ ನಿಗದಿಯಾಗಿದ್ದ ಮೀಟಿಂಗ್ ಒಂದು ತಾಸು ನಡೆಯಿತು.

ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಮತ್ತು ಬಡತನವನ್ನು ಹೋಗಲಾಡಿಸುವಂತಹ ನಮ್ಮ ಗ್ರಹವನ್ನು ಉತ್ತಮಗೊಳಿಸುವ ಉದ್ದೇಶದಿಂದ ಪಿಎಂ ಮೋದಿ ಮತ್ತು ಪೋಪ್ ವ್ಯಾಪಕ ಶ್ರೇಣಿಯ ವಿಷಯಗಳನ್ನು ಚರ್ಚಿಸಿದರು. ಪೋಪ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಆಹ್ವಾನ ನೀಡಿದರು.

1999 ರಲ್ಲಿ ಅಟಲ್ ಜಿ ಪ್ರಧಾನಿಯಾಗಿದ್ದಾಗ ಪೋಪ್ ಜಾನ್ ಪಾಲ್ II ಬಂದಾಗ ಕೊನೆಯ ಬಾರಿಗೆ ಪೋಪ್ ಭೇಟಿ ನಡೆದಿತ್ತು ಎಂಬುದನ್ನು ಸ್ಮರಿಸಬಹುದು. ಈಗ ಪ್ರಧಾನಿ ಮೋದಿಯವರ ಪ್ರಧಾನಿ ಅವಧಿಯಲ್ಲಿ ಪೋಪ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಲಾಗಿದೆ.

English summary
Prime Minister Narendra Modi leaves for Glasgow, UK; ends his three-day visit to Rome, Italy on the sidelines of G20 Summit. He will be on a two-day tour - November 1 & 2 to Glasgow; to meet UK Prime Minister Boris Johnson
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X