ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಮೋದಿ ಭಾಷಣ

|
Google Oneindia Kannada News

ಮೇಲ್ಬೋರ್ನ್, ಅ. 20: ಅಮೇರಿಕದಲ್ಲಿತಮ್ಮ ಭಾಷಣದಿಂದ ಮೋಡಿ ಮಾಡಿದ್ದ ನರೇಂದ್ರ ಮೋದಿ ಅದೇ ಚಮತ್ಕಾರವನ್ನು ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ತೋರಿಸಲಿದ್ದಾರೆ.

ಆಸ್ಟ್ರೇಲಿಯಾದ ಫೆಡರಲ್ ಪಾರ್ಲಿಮೆಂಟ್ ನ ಜಂಟಿ ಅಧಿವೇಶನದಲ್ಲಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಬ್ರಿಸ್ಬೇನ್ ನಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಯ ನಂತರ ನರೇಂದ್ರ ಮೋದಿ ಆಸ್ಟ್ರೇಲಿಯಾದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸಂಸತ್ ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದ್ದಾರೆ. [ದಿಗ್ಗಜರ ಸಮಾಗಮಕ್ಕೆ ಕಾರಣವಾದ ಸ್ವಚ್ಛ ಭಾರತ]

narendra modi

ಹಿಂದಿಯಲ್ಲೇ ಮಾತನಾಡಲಿರುವ ಮೋದಿ
ವಿಶ್ವದ ಇತರೆಡೆ ಭಾಷಣ ನೀಡುರುವಂತೆ ಮೋದಿ ಇಲ್ಲಿಯೂ ಸಹ ಹಿಂದಿಯಲ್ಲೇ ಮಾತನಾಡಲಿದ್ದಾರೆ. ಹಿಂದಿಯಲ್ಲಿ ಮಾತನಾಡುವ ಮೂಲಕ ಭಾರತದ ಸಂಸ್ಕೃತಿ ಮತ್ತು ಗೌರವವನ್ನು ಸಾರಲಿದ್ದಾರೆ ಎಂದು ತಸ್ಮೇನಿಯಾ ಸೆನೆಟರ್ ಲೀಸಾ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಸಂಸತ್‌ ಗೆ ಇದೇ ಮೊದಲ ಬಾರಿ ಆಯ್ಕೆಯಾಗಿರುವ ಭಾರತ ಮೂಲದ 42 ವರ್ಷದ ಸಿಂಗ್, ಮೋದಿ ನಮ್ಮ ಸಂಸತ್ ಉದ್ದೇಶಿಸಿ ಮಾತನಾಡುತ್ತಿರುವುದು ಸಂತಸ ತಂದಿದೆ. ಇಲ್ಲಿ ಯಾವುದೇ ಭಾಷೆ ಮುಖ್ಯವಾಗಲ್ಲ. ಇದು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೆ ಬಹುಮುಖ್ಯವಾದ ಸಂಗತಿಯಾಗಿದೆ. ಎರಡು ದೇಶಗಳ ನಡುವಿನ ಸಂಬಂಧ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.[ನರೇಂದ್ರ ಮೋದಿಯೇ ಪಾಕಿಸ್ತಾನದ ಟಾರ್ಗೆಟ್ ಯಾಕೆ?]

ನವೆಂಬರ್ 15 ಮತ್ತು 16 ರಂದು ಜಿ-20 ಶೃಂಗ ಸಭೆ ಬ್ರಿಸ್ಬೇನ್ ನಲ್ಲಿ ನಡೆಯಲಿದೆ. ಬ್ರಿಟನ್ ಪ್ರಧಾನಿ, ಚೀನಾ ಅಧ್ಯಕ್ಷ ಜಿನ್ ಪಿಂಗ್ ಸಹ ಭಾಗವಹಿಸಲಿದ್ದಾರೆ. ಆದರೆ ಮೋದಿ ಭಾಷಣ ಕೇಳಲು ಎಲ್ಲರೂ ಕಾತರದಿಂದ ಇದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

English summary
Narendra Modi will be the first Indian Prime Minister to address the gallery of Australian member of parliamentarians and leaders at a special joint sitting of Federal Parliament after he attends the G20 leaders' Summit in Brisbane in November. While several MPs have expressed their delight and happiness for him to make his maiden trip as the PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X