ಭಾರತ-ಅಮೆರಿಕ ನಡುವೆ ಬಂಧ ಬೆಸೆದ ಯೋಗ-ಮೋದಿ
ವಾಷಿಂಗ್ ಟನ್, ಜೂನ್, 08: ಪ್ರಧಾನಿಯಾದ ಬಳಿಕ ನಾಲ್ಕನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಸಂಸತ್ ನ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಆರ್ಥಿಕ ಅಭಿವೃದ್ಧಿ, ಉಭಯ ದೇಶಗಳ ನಡುವಿನ ಬಾಂಧವ್ಯ, ಅಮೆರಿಕ ಸಂವಿಧಾನ, ಭಯೋತ್ಪಾದನೆ ನಿಗ್ರಹ, ಉದ್ಯೋಗ ಅವಕಾಶ, ಪ್ರಜಾಪ್ರಭುತ್ವ, ಜಾಗತಿಕ ತಾಪಮಾನ ಸೇರಿದಂತೆ ಅನೇಕ ವಿಷಯಗಳ ಕುರಿತು ಮೋದಿ ಮಾತನಾಡಿದರು.[ಅಣುಬಂಧ, ಪರಿಸರ ಸಂರಕ್ಷಣೆಗೆ ಮಹಾನ್ ನಾಯಕರ ಸಂಕಲ್ಪ]

ಅಮೆರಿಕ ಪ್ರವಾಸದಲ್ಲಿದ್ದ ಮೋದಿ ನಿನ್ನೆ ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಮೋದಿ ಮಾತನಾಡುತ್ತಿದ್ದಂತೆ ಅಮೆರಿಕ ಸಂಸತ್ ನ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಭರ್ಜರಿ ಸ್ವಾಗತದೊಂದಿಗೆ ಪ್ರಧಾನಿ ಭಾಷಣ ಆರಂಭಿಸಿದರು. ಸುಮಾರು 35 ನಿಮಿಷಗಳ ಕಾಲ ಪ್ರಧಾನಿ ಮಾತನಾಡಿದರು.
ಮೋದಿ ಭಾಷಣದ ಹೈಲೈಟ್ಸ್
* ನನಗೆ ಅವಕಾಶ ಕೊಟ್ಟ ಅಮೆರಿಕದ ಜನತೆಗೆ ಧನ್ಯವಾದ
* ಜಾಗತಿಕ ಪ್ರಜಾಪ್ರಭುತ್ವದ ಬಹುದೊಡ್ಡ ರಾಷ್ಟ್ರಗಳು ಒಟ್ಟಿಗೆ ಸಾಗುತ್ತಿವೆ
* ಪ್ರಜಾಪ್ರಭುತ್ವಕ್ಕೆ ಲಿಂಕನ್ ಕೊಡುಗೆ ಅನನ್ಯ[ಇಂಡೋ-ಅಫ್ಘನ್ ನಡುವೆ 'ಅಣೆಕಟ್ಟು' ಬಂಧನ]
* ಭಾರತ ಇಂದು ಒಂದಾಗಿ ಜೀವಿಸುತ್ತಿದೆ. ಅದರಲ್ಲಿ ಆಶ್ಚರ್ಯ ಏನೂ ಇಲ್ಲ
* ದೇಶ ಮತ್ತು ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಯಾವ ಅಡ್ಡಿ ಎದುರಾಗಬಾರದು.
* ಸ್ವಾಮಿ ವೀವೇಕಾನಂದರು, ಅಂಬೇಡ್ಕರ್, ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್ ಎಲ್ಲರ ಬದುಕು ನಮಗೆ ಆದರ್ಶ
* ಎರಡು ದೇಶಗಳ ನಡುವಿನ ಬಂಡವಾಳ ಹೂಡಿಕೆ ಅಸಂಖ್ಯ ಉದ್ಯೋಗ ಸೃಷ್ಟಿಸಿದೆ,
* ಕಳೆದ ಕೆಲ ವರ್ಷಗಳಲ್ಲಿ ಭಾರತ ಮತ್ತು ಭಾರತದ ನಗರಗಳು ಬದಲಾಗಿದೆ, ಬದಲಾಗುತ್ತಿದೆ.
* ಭಾರತ ಮತ್ತು ಅಮೆರಿಕದ ನಡುವೆ ಬಂಧ ಬೆಸದ ಯೋಗ
A speech which spoke to America. PM @narendramodi receives a standing ovation as speech ends pic.twitter.com/dWvnWyzqwl
— Vikas Swarup (@MEAIndia) June 8, 2016
* ಅನಿವಾಸಿ ಭಾರತೀಯರು ನಮ್ಮ ಹೆಮ್ಮೆಯ ಗುರುತು
* ಸವಾಲಾಗಿರುವ ಭಯೋತ್ಪಾದನೆ ಮೆಟ್ಟಲು ಪ್ರಪಂಚ ಒಂದಾಗಬೇಕು
* ಪರಮಾಣು ಒಪ್ಪಂದ ಉಭಯ ದೇಶಗಳ ಬಾಂಧವ್ಯಕ್ಕೆ ಹೊಸ ಅರ್ಥ ನೀಡಿತು
* 2022ರೊಳಗೆ ಆರು ಅಂಶಗಳ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.
* ಮಾನವತಾವಾದಕ್ಕಿಂತ ದೊಡ್ಡದು ಪ್ರಪಂಚದಲ್ಲಿ ಬೇರೊಂದಿಲ್ಲ












Click it and Unblock the Notifications