Myanmar Earthquake: ಅನ್ನ, ನೀರು, ಸೂರು ಇಲ್ಲದೆ ನರಳುತ್ತಿರುವ ಮ್ಯಾನ್ಮಾರ್ ಪ್ರಜೆಗಳು
ಒಂದೇ ಒಂದು ಭೂಕಂಪನ ಏನೆಲ್ಲಾ ಅನಾಹುತ ಮಾಡಬಹುದು? ಪ್ರಕೃತಿಯ ಮುಂದೆ ಈ ಮನುಷ್ಯರು ಅದೆಷ್ಟು ಚಿಕ್ಕವರು? ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ. ಇದು ಮ್ಯಾನ್ಮಾರ್ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಬಂದು ಎರಗಿರುವ ಭೀಕರ ಪ್ರಾಕೃತಿಕ ವಿಕೋಪ ಎನ್ನಬಹುದು. ನಾವು ಹೇಳುತ್ತಿರುವುದು ಇತ್ತೀಚೆಗೆ ಮ್ಯಾನ್ಮಾರ್ ದೇಶದಲ್ಲಿ ಸಂಭವಿಸಿದ್ದ ಭೀಕರ 7.7 ತೀವ್ರತೆಯ ಭೂಕಂಪನದ ಬಗ್ಗೆ.
ಪ್ರಕೃತಿ ಮೇಲೆ ಮನುಷ್ಯರು ನಡೆಸುತ್ತಿರುವ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ, ಭೂಮಿ ಮೇಲೆ ದೊಡ್ಡ ದೊಡ್ಡ ಅನಾಹುತಗಳು ನಡೆಯುತ್ತಿವೆ. ಇಷ್ಟುದಿನ ಭೀಕರ ಮಳೆ & ಬಿರುಗಾಳಿ ಪರಿಣಾಮ ಮನುಷ್ಯರು ನಲುಗಿದ್ದರು. ಹೀಗಿದ್ದಾಗ ಭಾರಿ ಘೋರ ಭೂಕಂಪನದ ಸರದಿಯು ಇದೀಗ ಶುರುವಾಗಿದೆ. ಭೂಮಿಯ ಅಂತರಾಳದಲ್ಲಿ ಶಿಲಾಪದರಗಳ ನಡುವಿನ ತಿಕ್ಕಾಟದಿಂದ ಇದೀಗ ಭೂಮಿ ಮೇಲೆ ಮನುಷ್ಯರು ಬದುಕುವುದು ಕಷ್ಟಕರವಾಗುತ್ತಿದೆ. ಮ್ಯಾನ್ಮಾರ್ ಮತ್ತು ಥಾಯ್‌ಲ್ಯಾಂಡ್ ದೇಶಗಳ ಜನರು ತುತ್ತು ಅನ್ನಕ್ಕೂ ನರಳುವ ಸ್ಥಿತಿ ಎದುರಾಗಿದೆ.

ದಿಢೀರ್ ಎಲ್ಲವೂ ನಾಶವಾಗಿ ಹೋಯ್ತು...
ಮ್ಯಾನ್ಮಾರ್ ಭೂಕಂಪನ ಈಗಾಗಲೇ 1700ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಜೊತೆ ಗಾಯಾಳುಗಳ ಪರಿಸ್ಥಿತಿ ಕೂಡ ಬಿಗಡಾಯಿಸುತ್ತಿದೆ. ಈಗಿರುವ ಸ್ಥಿತಿ ನೋಡಿದರೆ ಸಾವಿನ ಸಂಖ್ಯೆ ಇನ್ನೂ ಭಾರಿ ಹೆಚ್ಚಾಗುವ ಭಯ ಕಾಡುತ್ತಿದೆ. ಈ ನಡುವೆ ಮ್ಯಾನ್ಮಾರ್ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಭೂಕಂಪನ ಪರಿಣಾಮ ಜನರಿಗೆ ಅನ್ನ & ನೀರು ಸಿಗದಿರುವ ಪರಿಸ್ಥಿತಿ ಎದುರಾಗಿದೆ. ಕುಸಿದು ಬಿದ್ದ ಕಟ್ಟಡ & ಮನೆಗಳ ಬಳಿ ಜನರು ಗೋಳಾಡುತ್ತಿದ್ದಾರೆ. ಅಲ್ಲದೆ ಮಹಿಳೆಯರು & ಮಕ್ಕಳಿಗೆ ಅಗತ್ಯ ವಸ್ತುಗಳು ಸಿಗದೆ ಸಮಸ್ಯೆ ಸೃಷ್ಟಿಯಾಗಿದೆ.
ಜಾಗತಿಕ ಮಟ್ಟದಲ್ಲಿ ಸಿಗುತ್ತಿದೆ ಬೆಂಬಲ
ಮತ್ತೊಂದು ಕಡೆ ಮ್ಯಾನ್ಮಾರ್ ದೇಶಕ್ಕೆ ಇದೀಗ ಭಾರತ ಸೇರಿದಂತೆ ವಿವಿಧ ದೇಶಗಳು ಸಹಾಯ ಹಸ್ತ ಚಾಚಿದ್ದು, ಅಗತ್ಯ ವಸ್ತುಗಳನ್ನು ಇದೀಗ ಮ್ಯಾನ್ಮಾರ್ ದೇಶಕ್ಕೆ ರವಾನೆ ಮಾಡುತ್ತಿವೆ. ಭೀಕರ ಭೂಕಂಪದ ಪರಿಣಾಮ ನಲುಗಿ ಹೋಗಿರುವ ಮ್ಯಾನ್ಮಾರ್ ದೇಶಕ್ಕೆ ಬೆಂಬಲ ಅತ್ಯಗತ್ಯ. ಹೀಗಾಗಿ ಹಲವು ದೇಶಗಳು ಮಾನವೀಯ ನೆರವು ನೀಡಲು ಮುಂದಾಗಿವೆ.
ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪನಕ್ಕೆ ನಲುಗಿ ಹೋಗಿರುವ ಮ್ಯಾನ್ಮಾರ್ ದೇಶ ಈಗ ಶವಗಳ ರಾಶಿಯಿಂದ ತುಂಬಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕುಸಿದು ಬಿದ್ದ ಕಟ್ಟಡಗಳೇ ಕಾಣುತ್ತಿವೆ. ಇಂತಹ ಸಮಯದಲ್ಲಿ ಮ್ಯಾನ್ಮಾರ್ ಬೆಂಬಲಕ್ಕೆ ನಿಂತಿರುವ ಭಾರತ, ಮೊದಲ ನೆರವು ರವಾನೆ ಮಾಡಿದೆ. 80 NDRF ತುಕಡಿ ನಿಯೋಜನೆ ಮಾಡಿ, ಮ್ಯಾನ್ಮಾರ್‌ಗೆ ಬೆನ್ನೆಲುಬಾಗಿ ನಿಂತಿದೆ ಭಾರತ.












Click it and Unblock the Notifications