ಡೊನಾಲ್ಡ್ ಟ್ರಂಪ್ ಜೊತೆ ಮುಕೇಶ್ ಅಂಬಾನಿ, ನೀತಾ ಅಂಬಾನಿ ದಂಪತಿ; ಫೋಟೋ ಭಾರೀ ವೈರಲ್
Donald Trump: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಇಂದು (ಜನವರಿ 20) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಹಲವು ರಾಷ್ಟ್ರಗಳ ಗಣ್ಯರು ಭಾಗಿ ಆಗಲಿದ್ದಾರೆ. ಭಾರತದಿಂದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ & ನೀತಾ ಅಂಬಾನಿ ದಂಪತಿ ಅವರು ಪಾಲ್ಗೊಳಲಿದ್ದಾರೆ. ಈಗಾಗಲೇ ನಿನ್ನೆ ಈ ದಂಪತಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ. ಈ ಪೋಟೋಗಳು ಇದೀಗ ಭಾರೀ ವೈರಲ್ ಆಗುತ್ತಿವೆ.
ಇಂದು (ಜನವರಿ 20) ಅಮೆರಿಖಾದ ಕಾಲಮಾನದ ಪ್ರಕಾರಣ ಮಧ್ಯಾಹ್ನ 12 ಗಂಟೆಗೆ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮ ಯುಎಸ್‌ನ ಪಶ್ಚಿಮ ಮುಂಭಾಗದಲ್ಲಿ ನಡೆಯಲಿದೆ. ವಾಷಿಂಗ್ಟನ್ ಡಿಸಿಯಲ್ಲಿ ಅದ್ಧೂರಿ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇಂದು ನಡೆಯಲಿರುಬವ ಟ್ರಂಪ್ ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಭಾರತದ ಖ್ಯಾತ ಉದ್ಯಮಿಯಾದ ಮುಕೇಶ್ ಮತ್ತು ನೀತಾ ಅಂಬಾನಿ ದಂಪತಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಅದರಂತೆಯೇ ಅವರು ಈಗಾಗಲೇ ಟ್ರಂಪ್ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕಾ ಅಧ್ಯಕ್ಷರಾಗಿ ಟ್ರಂಪ್ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಂಬಾನಿ ದಂಪತಿ ಜನವರಿ 19ರಂದೇ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಟ್ರಂಪ್ ಔತಣಕೂಟದ ಸಮಯದಲ್ಲಿ ಎಸ್ಟೇಟ್ ಉದ್ಯಮಿ ಕಲ್ಪೇಶ್ ಮೆಹ್ತಾ ದಂಪತಿಗಳೊಂದಿಗೆ ಅಂಬಾನಿ ದಂಪತಿ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಮುಕೇಶ್ ಅಂಬಾನಿ ಕಪ್ಪು ಸೂಟ್ ಧರಿಸಿದ್ದರೆ, ನೀತಾ ಅಂಬಾನಿ ಓವರ್ ಕೋಟ್ ಮತ್ತು ಪಚ್ಚೆಯೊಂದಿಗೆ ಕಪ್ಪು ಸೀರೆಯನ್ನು ಧರಿಸಿರುವುದು ಕಂಡುಬಂದಿದೆ.
#WATCH | US: At the Private Reception in Washington, Reliance Industries Chairman Mukesh Ambani & Founder & Chairperson of Reliance Foundation, Nita Ambani congratulated President-elect Donald Trump ahead of his swearing-in ceremony
— ANI (@ANI) January 19, 2025
The swearing-in ceremony of President-elect… pic.twitter.com/rWIpw19ou4
ಇನ್ನು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಂಬಾನಿ ದಂಪತಿ ಸೇರಿದಂತೆ ಪ್ರಮುಖ ಉದ್ಯಮಿಗಳು, ಎಲೋನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಫ್ರೆಂಚ್ ಬಿಲಿಯನೇರ್ ಕ್ಸೇವಿಯರ್ ನೀಲ್, ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್, ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಶ್, ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಅವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications