ಮಲೇಶ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್

ಕೌಲಾಲಂಪುರ, ಮಾರ್ಚ್ 01: ಮಲೇಷ್ಯಾದ ಪ್ರಧಾನಿ ಮಹತೀರ್ ಮೊಹಮ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಅವರು ಭಾನುವಾರದಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಮಾತನಾಡಿ, ನನ್ನ ಬಳಿ 114 ಸದಸ್ಯ ಬಲ ಎಂದು ಹೇಳಿದ್ದಾರೆ.

ನ್ಯಾಷನಲ್ ಪ್ಯಾಲೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ಯಾಸೀನ್ ಅವರು ನೂತನ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜಕೀಯ ಅಸ್ಥಿರತೆಯಿಂದ ಕಂಗಲಾಗಿರುವ ಮಲೇಷ್ಯಾದಲ್ಲಿ ಮುಹಿದ್ದೀನ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ನೂತನ ಸರ್ಕಾರದ ವಿರುದ್ಧ ಹೋರಾಡುವುದಾಗಿ ಮಾಜಿ ಪ್ರಧಾನಿ ಮಹತೀರ್ ಹೇಳಿದ್ದಾರೆ.

ಮಹತೀರ್ ಮೊಹಮ್ಮದ್ ಅವರು ತಮ್ಮ ಉತ್ತರಾಧಿಕಾರಿತಾಗಿ ಅನ್ವರ್ ಇಬ್ರಾಹಿಂರನ್ನು ನೇಮಿಸಿ ಹೊಸ ಸರ್ಕಾರ ರಚಿಸಲು ಮುಂದಾಗಿದ್ದರು. ಆದರೆ, ಮೈತ್ರಿಕೂಟ ಇದಕ್ಕೆ ಅಡ್ಡಿಪಡಿಸಿತ್ತು. ಹೀಗಾಗಿ, ತಮ್ಮ ಸ್ಥಾನಕ್ಕೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ. 222 ಸ್ಥಾನಗಳುಳ್ಳ ಸಂಸತ್ತಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ಕನಿಷ್ಠ 112 ಸ್ಥಾನಗಳು ಬೇಕಿವೆ. 1981 ರಿಂದ 2003 ರ ಅವಧಿಯಲ್ಲಿ ಮಹತೀರ್ ಪ್ರಧಾನಿಯಾಗಿದ್ದಾಗ ಅನ್ವರ್ ಅವರು ಉಪ ಪ್ರಧಾನಿಯಾಗಿದ್ದರು. ಆದರೆ, 1998ರಲ್ಲಿ ಅನ್ವರ್ ಅಮಾನತುಗೊಳಿಸಿ, ಜೈಲಿಗೆ ಕಳಿಸಲಾಗಿತ್ತು.

Muhyiddin becomes Malaysia prime minister

72 ವರ್ಷ ವಯಸ್ಸಿನ ಮುಹಿದ್ದೀನ್ ಅವರು ಯುಎಂಎನ್ಒ ಸದಸ್ಯರಾಗಿದ್ದು, ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನಜೀಬ್ ಸರ್ಕಾರದ ವೇಳೆ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಹಗರಣವೊಂದರಲ್ಲಿ ಮುಹಿದ್ದೀನ್ ಹೆಸರು ಕೇಳಿ ಬಂದ ಹಿನ್ನಲೆ ಅವರನ್ನು ನಜೀಬ್ ಅಮಾನತುಗೊಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+