Mosque Blast: ಮಸೀದಿಯಲ್ಲಿ ಸ್ಫೋಟ- ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ 2ನೇ ಆತ್ಮಾಹುತಿ ದಾಳಿ..!
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸ್ಪೋಟಗೊಂಡ ಕೆಲವೇ ಗಂಟೆಗಳಲ್ಲಿ 2ನೇ ಆತ್ಮಾಹುತಿ ದಾಳಿ ಸಂಭವಿಸಿದೆ. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮಸೀದಿಯಲ್ಲಿ ಈ ಸ್ಪೋಟ ಸಂಭವಿಸಿದೆ. ಸರಣಿ ಸ್ಪೋಟಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹಂಗು ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ್ದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಇದೊಂದು ಆತ್ಮಹುತಿ ಸ್ಫೋಟ ಎಂದು ಪೊಲೀಸರು ಶಂಕಿಸಿದ್ದಾರೆ. ಜುಮಾ ಪ್ರಾರ್ಥನೆಯ ವೇಳೆ ಸ್ಫೋಟ ಸಂಭವಿಸಿದೆ ಎಂದು ದೋಬಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಹರಾಜ್ ಖಾನ್ ಸ್ಥಳೀಯ ಮಾದ್ಯಮಗಳಿಗೆ ವಿವರಿಸಿದ್ದಾರೆ. ಸ್ಫೋಟದ ಸಮಯದಲ್ಲಿ ಮಸೀದಿಯಲ್ಲಿ 30 ರಿಂದ 40 ಆರಾಧಕರು ಇದ್ದರು ಎನ್ನಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮಸೀದಿಯ ಮೇಲ್ಛಾವಣಿಯು ಕುಸಿದಿದೆ. ಅವರಲ್ಲಿ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಭಯವಿದೆ ಎಂದು ಹೇಳಿದರು.

ಮೊದಲ ದಾಳಿ
ಇಂದು ಮುಂಜಾನೆ, ಬಲೂಚಿಸ್ತಾನ್ ಪ್ರಾಂತ್ಯದ ಮಸೀದಿಯೊಂದರ ಬಳಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಸೇರಿದ್ದ ಗುಂಪಿನಲ್ಲಿ ಆತ್ಮಹುತಿ ದಾಳಿ ನಡೆದಿದೆ. ಈ ವೇಳೆ 52 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಸ್ತುಂಗ್ ಜಿಲ್ಲೆಯ ಅಲ್ ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಈ ಸ್ಫೋಟ ಸಂಭವಿಸಿದೆ. ರ‍್ಯಾಲಿಗಾಗಿ ಕರ್ತವ್ಯದಲ್ಲಿದ್ದ ಮಸ್ತುಂಗ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ನವಾಜ್ ಗಶ್ಕೋರಿ ಮೃತಪಟ್ಟವರಲ್ಲಿ ಸೇರಿದ್ದಾರೆ.
ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ, ಆದರೆ ಪಾಕಿಸ್ತಾನಿ ತಾಲಿಬಾನ್ ತ್ವರಿತವಾಗಿ ಅದರಿಂದ ದೂರ ಸರಿದಿದೆ. ಇಸ್ಲಾಮಿಕ್ ಸ್ಟೇಟ್ ಗುಂಪು ಬಲೂಚಿಸ್ತಾನ್ ಮತ್ತು ಇತರೆಡೆಗಳಲ್ಲಿ ಹಿಂದಿನ ಮಾರಣಾಂತಿಕ ದಾಳಿಗಳನ್ನು ಹೇಳಿಕೊಂಡಿದೆ.
ದಾಳಿಯ ಹೊಣೆ
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. TTP ಒಂದು ಪ್ರತ್ಯೇಕ ಗುಂಪು ಆದರೆ ಆಗಸ್ಟ್ 2021 ರಲ್ಲಿ ನೆರೆಯ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಅಫ್ಘಾನ್ ತಾಲಿಬಾನ್‌ನ ನಿಕಟ ಮಿತ್ರವಾಗಿದೆ. ಈ ಪ್ರದೇಶದಲ್ಲಿ ದಾಳಿ ನಡೆಸುತ್ತಿರುವ ಟಿಟಿಪಿ ತಾನು ಈ ದಾಳಿಯ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಈ ದಾಳಿ ಸಹಜವಾಗಿ ಎಚ್ಚರಿಕೆಯ ಗಂಟೆ ಆಗಿದೆ. ಏಕೆಂದರೆ ಈ ದಾಳಿ ಮೂಲಕ ಪ್ರದೇಶವು ಇಸ್ಲಾಮಿಕ್ ಸ್ಟೇಟ್ ದಾಳಿಕೋರರ ಉಪಸ್ಥಿತಿಯನ್ನು ಕಂಡಿದೆ. ಅಂತಹ ಸಶಸ್ತ್ರ ಗುಂಪುಗಳು ರ‍್ಯಾಲಿಗಳನ್ನು ಗುರಿಯಾಗಿಸಬಹುದು ಎಂದು ಅಧಿಕಾರಿಗಳು ಪೊಲೀಸರನ್ನು ಎಚ್ಚರಿಸಿದ್ದಾರೆ.
ಪಾಕಿಸ್ತಾನದಲ್ಲಿ ಮತ್ತು ಪ್ರಪಂಚದಾದ್ಯಂತದ ಮುಸ್ಲಿಮರು ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಇಸ್ಲಾಂನ ಪ್ರವಾದಿಯ ಜನ್ಮದಿನವನ್ನು ಆಚರಿಸುತ್ತಾರೆ. ಆಚರಣೆಯನ್ನು ಬಹುಪಾಲು ಇಸ್ಲಾಮಿಕ್ ಪಂಗಡಗಳು ಒಪ್ಪಿಕೊಂಡಿದ್ದರೂ, ಕೆಲವು ಪಂಗಡಗಳು ಇದನ್ನು ಅನಗತ್ಯವಾದ ಆಚರಣೆ ಎಂದು ಪರಿಗಣಿಸುತ್ತವೆ. ಹೀಗಾಗಿ ಕೆಲ ಗುಂಪುಗಳು ಈ ಸಂದರ್ಭವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಈ ಹಿಂದೆ ಸಶಸ್ತ್ರ ಗುಂಪುಗಳ ದಾಳಿಯ ತಾಣವಾಗಿತ್ತು. ಇಲ್ಲಿ ಆಗಾಗ ದಾಳಿಗಳು ಸರ್ವೇ ಸಮಾನ್ಯ ಎಂಬಂತಾಗಿವೆ. ಈ ತಿಂಗಳ ಆರಂಭದಲ್ಲಿ ಬಲೂಚಿಸ್ತಾನದ ಅದೇ ಜಿಲ್ಲೆಯಲ್ಲಿ ನಡೆದ ಸ್ಫೋಟದಲ್ಲಿ ಪ್ರಮುಖ ಧಾರ್ಮಿಕ ಮುಖಂಡ ಸೇರಿದಂತೆ ಕನಿಷ್ಠ 11 ಜನರು ಗಾಯಗೊಂಡಿದ್ದರು.
ಅಲ್ಲದೆ ಜುಲೈನಲ್ಲಿ ನಡೆದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಧಾರ್ಮಿಕ ರಾಜಕೀಯ ಪಕ್ಷದ ಸಭೆಯೊಂದರಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿಯಲ್ಲಿರುವ ಅನಿಲ-ಸಮೃದ್ಧ ಬಲೂಚಿಸ್ತಾನ್ ಪ್ರಾಂತ್ಯವು ಎರಡು ದಶಕಗಳಿಗೂ ಹೆಚ್ಚು ಕಾಲ ಬಲೂಚ್ ಪ್ರತ್ಯೇಕತಾವಾದಿಗಳಿಂದ ದಂಗೆಯ ತಾಣವಾಗಿದೆ. ಪ್ರತ್ಯೇಕತಾವಾದಿಗಳು ಆರಂಭದಲ್ಲಿ ಪ್ರಾಂತೀಯ ಸಂಪನ್ಮೂಲಗಳ ಪಾಲು ಬಯಸಿದ್ದರು, ಆದರೆ ನಂತರ ಸ್ವಾತಂತ್ರ್ಯಕ್ಕಾಗಿ ಕರೆ ನೀಡುವ ಚಳವಳಿಯನ್ನು ಪ್ರಾರಂಭಿಸಿದರು.
-
Eid Mubarak Wishes 2026: ರಂಜಾನ್ ಹಬ್ಬದ ಶುಭಾಶಯಗಳ 35 ಮನಮುಟ್ಟುವ ಸಂದೇಶಗಳು ಇಲ್ಲಿವೆ -
Holiday Plan: ಉದ್ಯೋಗಿಗಳಿಗೆ ರಜೆ ಹಬ್ಬ: ಪ್ಲ್ಯಾನ್ ಮಾಡಿದ್ರೆ ಮಾರ್ಚ್ನಲ್ಲಿ ಎರಡು ಬಾರಿ ಪಡೆಯಬಹುದು ಸತತ 5 ದಿನಗಳ ಹಾಲಿಡೇ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications