Get Updates
Get notified of breaking news, exclusive insights, and must-see stories!

ಟ್ಯುನಿಷಿಯಾ: ದೋಣಿ ಮುಳುಗಿ 50ಕ್ಕೂ ಹೆಚ್ಚು ವಲಸಿಗರ ಸಾವು

ಕೈರೋ, (ಈಜಿಪ್ಟ್), ಜೂನ್ 4: ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 50ಕ್ಕೂ ಹೆಚ್ಚು ವಲಸಿಗರು ಮೃತಪಟ್ಟ ದಾರುಣ ಘಟನೆ ಟ್ಯುನಿಷಿಯಾದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ನಡೆದಿದೆ.

75-90 ಮಂದಿ ಕೂರಬಹುದಾದ ದೋಣಿಯಲ್ಲಿ ಸುಮಾರು 180 ಮಂದಿ ಪ್ರಯಾಣ ಮಾಡುತ್ತಿದ್ದರು. ದೋಣಿಯಲ್ಲಿ ಬಿರುಕು ಉಂಟಾಗಿದ್ದರಿಂದ ನೀರು ಒಳನುಗ್ಗಿ ಮುಳುಗಿದೆ.

ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿರುವ ಟ್ಯುನಿಷಿಯಾ ಸೇನಾ ಪಡೆ, 48 ಮೃತದೇಹಗಳನ್ನು ಹೊರತೆಗೆದಿದೆ. 60ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ.

More than 50 migrants die in mediterranean sea

ಉದ್ಯೋಗ ಮತ್ತು ಆಹಾರಕ್ಕಾಗಿ ಪರದಾಡುತ್ತಿರುವ ಆಫ್ರಿಕಾದ ವಿವಿಧ ದೇಶಗಳ ಜನರು ಯುರೋಪ್‌ನತ್ತ ಮೆಡಿಟರೇನಿಯನ್ ಸಮುದ್ರದ ಮೂಲಕ ವಲಸೆ ಹೋಗುವುದು ಸಾಮಾನ್ಯವಾಗಿದೆ.

ಅಕ್ರಮ ವಲಸಿಗರು ದೋಣಿ, ಹಡಗುಗಳನ್ನು ಬಳಸಿ ಸೇನಾ ಪಡೆಗಳ ಕಣ್ತಪ್ಪಿಸಿ ಮೆಡಿಟರೇನಿಯನ್ ಸಮುದ್ರದ ಮೂಲಕ ಇಟಲಿ, ಫ್ರಾನ್ಸ್ ಮುಂತಾದ ದೇಶಗಳನ್ನು ತಲುಪಲು ಪ್ರಯತ್ನಿಸುತ್ತಾರೆ. ದೋಣಿಯ ಸಾಮರ್ಥ್ಯಕ್ಕಿಂತಲೂ ಅಧಿಕ ವಲಸಿಗರು ಅದರಲ್ಲಿ ತುಂಬಿಕೊಳ್ಳುವುದರಿಂದ ಸಮುದ್ರದಲ್ಲಿ ದೋಣಿ ಮುಳುಗಿ ವಲಸಿಗರು ಮೃತಪಟ್ಟ ಅನೇಕ ಘಟನೆಗಳು ನಡೆದಿವೆ.

ಫೆಬ್ರುವರಿ 2ರಂದು ಲಿಬಿಯಾದ ಕರಾವಳಿ ತೀರದಲ್ಲಿ ಮೆಡಿಟರೇನಿಯನ್‌ನಲ್ಲಿ ಉಂಟಾದ ದೋಣಿ ಅವಘಡದಲ್ಲಿ ಕನಿಷ್ಠ 90 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಯುರೋಪ್‌ಗೆ ತೆರಳಲು ಬಯಸುವ ಆಫ್ರಿಕಾದ ವಲಸಿಗರು ಟರ್ಕಿಯ ಮೂಲಕ ಸಮುದ್ರ ಮಾರ್ಗದಲ್ಲಿ ಹೋಗುತ್ತಾರೆ. 2018ರಲ್ಲಿ ಇದುವರೆಗೂ 32,601 ವಲಸಿಗರು ಸಮುದ್ರದಲ್ಲಿನ ದೋಣಿ ದುರಂತಗಳಲ್ಲಿ ಬದುಕುಳಿದಿದ್ದಾರೆ. ಇನ್ನು 649 ಮಂದಿ ಮೃತಪಟ್ಟಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ದಾಖಲೆಗಳು ಹೇಳಿವೆ.

2011ರಲ್ಲಿ ನಾಗರಿಕ ಯುದ್ಧಗಳು ಆರಂಭವಾದಾಗಿನಿಂದ ಅಕ್ರಮ ವಲಸೆ ಪ್ರಕ್ರಿಯೆ ಹೆಚ್ಚಾಗಿದೆ. ಲಕ್ಷಾಂತರ ಮಂದಿ ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಯುರೋಪಿಯನ್ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+