ಕಜಾಕಸ್ತಾನ ತೈಲಾಗಾರ ಗಲಾಟೆಯಲ್ಲಿ ಸಿಲುಕಿಕೊಂಡಿರುವ 150ಕ್ಕೂ ಅಧಿಕ ಭಾರತೀಯರು
ಕಜಾಕಸ್ತಾನ್, ಜು.1:ಕಜಾಕಸ್ಥಾನದ ತೈಲಾಗಾರದ ಗಲಾಟೆಯಲ್ಲಿ 150ಕ್ಕೂ ಅಧಿಕ ಭಾರತೀಯರು ಸಿಲುಕಿಕೊಂಡಿದ್ದಾರೆ. ಸ್ಥಳೀಯ ಕೆಲಸಗಾರರು ಹಾಗೂ ಕೆಲ ಗುಂಪುಗಳ ಮಧ್ಯೆ ಕಜಾಕಸ್ತಾನ್ ತೈಲಾಗಾರದಲ್ಲಿ ಜಗಳ ಆರಂಭವಾಗಿದ್ದು ಇದು ಹಿಂಸಾಚಾರದತ್ತ ತಿರುಗುತ್ತಿದೆ.
ಇದರಲ್ಲಿ 150ಕ್ಕೂ ಅಧಿಕ ಕೇರಳಿಗರು ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಿವಾಸಿ ಕೇರಳಿಗರ ಇಲಾಖೆಗೆ ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ.
ಕೇರಳ ಸರ್ಕಾರಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಕೂಡ ಸಾಥ್ ನೀಡಿದ್ದು, ಖಜಾಕಸ್ಥಾನ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ.

ಕಜಾಕಸ್ಥಾನದ ಅತಿದೊಡ್ಡ ತೈಲಾಗಾರದಲ್ಲಿ ಸ್ಥಳೀಯ ಕಾರ್ಮಿಕರು ಹಾಗೂ ವಿದೇಶಿ ಎಂಜಿನಿಯರ್‌ಗಳ ಮಧ್ಯೆ ಮಾತಿನ ಚಕಮಕಿಯೇ ಈ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮಹಿಳಾ ಸಿಬ್ಬಂದಿ ಒಬ್ಬರಿಗೆ ಸಂಬಂಧಿಸಿದ ವಾಟ್ಸಪ್ ಸಂದೇಶವು ಈ ಹೊಡೆದಾಟಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಎಂಜಿನಿಯರ್‌ಗಳೂ ಸೇರಿ 30ಕ್ಕೂ ಅಧಿಕ ಸಿಬ್ಬಂದಿಗೆ ಗಾಯವಾಗಿದೆ.
ಘಟನೆ ಕುರಿತು ಸ್ಥಳೀಯ ಸರ್ಕಾರ ತನಿಖೆಗೆ ಆದೇಶಿಸಿದೆ.












Click it and Unblock the Notifications