ಮೋದಿ ಸರ್ಕಾರ ಮುಸ್ಲಿಮರನ್ನು ಹಿಂಸಿಸುತ್ತಿದೆ: ಶಹಬಾಜ್

ಇಸ್ಲಾಮಾಬಾದ್‌, ಜೂ. 6: ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ನವೀನ್‌ ಕುಮಾರ್‌ ಜಿಂದಾಲ್‌ ಹೇಳಿಕೆಯನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ.

ನರೇಂದ್ರ ಮೋದಿ ಅವರ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯವನ್ನು ತುಳಿಯುತ್ತಿದೆ ಮತ್ತು ಮುಸ್ಲಿಮರನ್ನು ಹಿಂಸಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. "ನಮ್ಮ ಪ್ರೀತಿಯ ಪ್ರವಾದಿ ಬಗ್ಗೆ ಭಾರತದ ಬಿಜೆಪಿ ಇಬ್ಬರು ವಕ್ತಾರರ ನೋವುಂಟು ಮಾಡುವ ಹೇಳಿಕೆಗಳನ್ನು ನಾನು ಪ್ರಬಲವಾದ ಪದಗಳಲ್ಲಿ ಖಂಡಿಸುತ್ತೇನೆ" ಎಂದು ಷರೀಫ್ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಭಾರತ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿಶೇಷವಾಗಿ ಮುಸ್ಲಿಮರ ಹಕ್ಕುಗಳನ್ನು ತುಳಿಯುತ್ತಿದೆ ಎಂದ ಅವರು, "ಈ ಘಟನೆಯನ್ನು ಗಮನಿಸಿ ಮತ್ತು ಭಾರತವನ್ನು ತೀವ್ರವಾಗಿ ಖಂಡಿಸುವಂತೆ" ಜಗತ್ತನ್ನು ಒತ್ತಾಯಿಸಿದರು. ಮೋದಿಯವರ ನೇತೃತ್ವದಲ್ಲಿ ಭಾರತವು ಧಾರ್ಮಿಕ ಸ್ವಾತಂತ್ರ್ಯವನ್ನು ತುಳಿಯುತ್ತಿದೆ ಮತ್ತು ಮುಸ್ಲಿಮರನ್ನು ಹಿಂಸಿಸುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಜಗತ್ತು ಇದನ್ನು ಗಮನಿಸಬೇಕು ಮತ್ತು ಭಾರತವನ್ನು ತೀವ್ರವಾಗಿ ಖಂಡಿಸಬೇಕು ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಅವರು, "ಪವಿತ್ರ ಪ್ರವಾದಿ ಮೇಲಿನ ನಮ್ಮ ಪ್ರೀತಿ ಸರ್ವೋಚ್ಚವಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಪವಿತ್ರ ಪ್ರವಾದಿ ಪ್ರೀತಿ ಮತ್ತು ಗೌರವಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಬಹುದು ಎಂದಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ಕೂಡ ಈ ವಿಷಯದ ಬಗ್ಗೆ ಪ್ರಧಾನಿಯವರ ಹೇಳಿಕೆಯನ್ನು ಮರು ಟ್ವೀಟ್ ಮಾಡಿದೆ. ಪಾಕಿಸ್ತಾನದ ಹೊರತಾಗಿ, ಕತಾರ್, ಇರಾನ್ ಮತ್ತು ಕುವೈತ್ ಭಾರತದ ರಾಯಭಾರಿಗಳನ್ನು ಕರೆದಿದ್ದು, ಪ್ರಮುಖ ಗಲ್ಫ್ ರಾಷ್ಟ್ರಗಳು ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳಿಗೆ ತಮ್ಮ ತೀವ್ರ ಪ್ರತಿಭಟನೆ ಮತ್ತು ಖಂಡನೆಯನ್ನು ವ್ಯಕ್ತಪಡಿಸಿವೆ.

ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ಸುಮಾರು 10 ದಿನಗಳ ಹಿಂದೆ ಟಿವಿ ಚರ್ಚೆಯಲ್ಲಿ ಮಾಡಿದ ಶರ್ಮಾ ಅವರ ಹೇಳಿಕೆಗಳು ಮತ್ತು ಜಿಂದಾಲ್ ಈಗ ಅಳಿಸಲಾದ ಟ್ವೀಟ್‌ಗಳು ವಿವಾದವನ್ನು ಹುಟ್ಟುಹಾಕಿದವು. ಇದರ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳ ನಂತರ ಶರ್ಮಾ ಅವರನ್ನು ಅಮಾನತುಗೊಳಿಸಿತು ಮತ್ತು ಅದರ ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನೂ ಹೊರಹಾಕಿತ್ತು.

ಯಾರೊಬ್ಬರ ಭಾವನೆ ನೋಯಿಸುವ ಉದ್ದೇಶವಿಲ್ಲ: ಶರ್ಮಾ

ಯಾರೊಬ್ಬರ ಭಾವನೆ ನೋಯಿಸುವ ಉದ್ದೇಶವಿಲ್ಲ: ಶರ್ಮಾ

ಭಾನುವಾರದ ಹೇಳಿಕೆಗಳ ಕುರಿತು ಮುಸ್ಲಿಂ ಗುಂಪುಗಳಿಂದ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ, ಬಿಜೆಪಿ ಅಲ್ಪಸಂಖ್ಯಾತರ ಕಳವಳವನ್ನು ನಿವಾರಿಸುವ ಮತ್ತು ಈ ಸದಸ್ಯರಿಂದ ದೂರವಿರಿಸುವ ಉದ್ದೇಶದಿಂದ ಹೇಳಿಕೆಯನ್ನು ನೀಡಿತು, ಇದು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನವನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿತ್ತು. ಅಮಾನತುಗೊಂಡ ನಂತರ ಶರ್ಮಾ ಟ್ವಿಟರ್‌ನಲ್ಲಿ "ಯಾರೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಅವರ ನನ್ನ ಉದ್ದೇಶವಲ್ಲ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಪ್ರವಾದಿ ಮಹೊಮದ್ ಅವರ ಬಗ್ಗೆ ಅವಹೇಳನಕಾರಿ ಮಾತು

ಪ್ರವಾದಿ ಮಹೊಮದ್ ಅವರ ಬಗ್ಗೆ ಅವಹೇಳನಕಾರಿ ಮಾತು

ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯ ಚರ್ಚೆಯೊಂದರಲ್ಲಿ ಪ್ರವಾದಿ ಮಹೊಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅಮಾನತು ಮಾಡಲಾಗಿತ್ತು. ಈ ಘಟನೆಯ ನಂತರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಲಭೆ ನಡೆದಿದ್ದು, ಈ ಗಲಭೆಗೆ ಇವರ ಹೇಳಿಕೆಯೇ ಕಾರಣ ಎಂದು ಆರೋಪಿಸಲಾಗಿದೆ.

Recommended Video

    14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ Rafael Nadal | #Cricket | Oneindia Kannada
    ಧಾರ್ಮಿಕ ನಾಯಕರ ಅವಹೇಳನ ಬಿಜೆಪಿ ಖಂಡಿಸುತ್ತದೆ

    ಧಾರ್ಮಿಕ ನಾಯಕರ ಅವಹೇಳನ ಬಿಜೆಪಿ ಖಂಡಿಸುತ್ತದೆ

    "ಯಾವುದೇ ಧರ್ಮವನ್ನು ಅವಹೇಳನ ಮಾಡುವ ಚಿಂತನೆಯನ್ನು ತಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುತ್ತದೆ. ಭಾರತೀಯ ಜನತಾ ಪಕ್ಷ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಧಾರ್ಮಿಕ ನಾಯಕರ ಅವಹೇಳನವನ್ನು ಬಿಜೆಪಿ ಖಂಡಿಸುತ್ತದೆ. ಈ ರೀತಿಯ ವ್ಯಕ್ತಿಗಳು ಅಥವಾ ಸಿದ್ದಾಂತವನ್ನು ಬಿಜೆಪಿ ಎಂದಿಗೂ ಪ್ರೋತ್ಸಾಹಿಸುವುದಿಲ್ಲ,'' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+