Get Updates
Get notified of breaking news, exclusive insights, and must-see stories!

2019ರ ಲೋಕಸಭೆ ಚುನಾವಣೆಯಲ್ಲಿ ಮೋದಿಯೇ ಫೇವರಿಟ್

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವುದು ದೂರದ ಅಮೆರಿಕದ ರಾಜಕೀಯ ತಜ್ಞರನ್ನೂ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.

ವಾಷಿಂಗ್ಟನ್, ಮಾರ್ಚ್ 14: ಮುಂದಿನ ಲೋಕಸಭೆ ಚುನಾವಣೆ (2019) ವೇಳೆ ಭಾರತದ ಪ್ರಜೆಗಳಿಗೆ ಹಾಗೂ ವಿದೇಶಿ ಬಂಡವಾಳ ಶಾಹಿಗಳಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರೇ ಫೇವರಿಟ್ ವ್ಯಕ್ತಿಯಾಗಿರಲಿದ್ದಾರೆಂದು ಅಮೆರಿಕದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಹೊರಬಿದ್ದ ಉತ್ತರ ಪ್ರದೇಶ, ಉತ್ತರಾಖಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) ಅಮೋಘ ಜಯ ದಾಖಲಿಸಿದೆ. ಅಲ್ಲಿಗೆ, ಇಲ್ಲಿನ ವಿಧಾನ ಸಭೆ ಚುನಾವಣೆಯ ರಂಗು ದೂರದ ಅಮೆರಿಕವನ್ನೂ ಕೇವಲ ಮುಟ್ಟಿಲ್ಲ, ತಟ್ಟಿದೆ ಎನ್ನುವುದು ಮನದಟ್ಟಾಗಿದೆ.

Modi favourite for 2019 Lok Sabha elections: US experts

ಬಿಜೆಪಿಯ ಈ ವೈಭವದ ಜಯದಲ್ಲಿ ನರೇಂದ್ರ ಮೋದಿಯವರ ಪಾತ್ರ ಹಿರಿದಾಗಿದ್ದು, ಇದು ಮುಂದೆ 2019ರಲ್ಲಿ ಭಾರತದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ, ಅಮೆರಿಕದ ಔದ್ಯೋಗಿಕ ವಲಯವೂ ಭಾರತದಲ್ಲಿ 2019ರ ನಂತರವೂ ಬಂಡವಾಳ ಹೂಡುವ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಹೊಂದಲು ಸಾಧ್ಯವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+