ಭಾರತ-ಚೀನಾದಿಂದ 24 ಪ್ರಮುಖ ಒಪ್ಪಂದಕ್ಕೆ ಸಹಿ
ಬೀಜಿಂಗ್, ಮೇ.15: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ದಿನವಾದ ಶುಕ್ರವಾರ ಫುಲ್ ಮೀಟಿಂಗ್, ಚಾಟಿಂಗ್, ಒಪ್ಪಂದಗಳಿಗೆ ಸಹಿ ಹಾಕಿಂಗ್. ಗುರುವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಮೋದಿ ಅವರಿಗೆ ಇವತ್ತು ಮಹತ್ವದ ಚರ್ಚೆ ನಡೆಸಿದ್ದಾರೆ. ಭಾರತ ಹಾಗೂ ಚೀನಾ ನಡುವೆ 24 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕೆಖಿಯಾಂಗ್ ಅವರೊಂದಿಗೆ 10 ಬಿಲಿಯನ್ ಡಾಲರ್ ಮೌಲ್ಯದ ಮಹತ್ವದ 24 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. [ಭಾರತದಲ್ಲಿ ಸಹಿ ಕಂಡ 12 ಒಪ್ಪಂದಗಳು]

ಪ್ರವಾಸೋದ್ಯಮ ವಲಯದಲ್ಲಿ ಪರಸ್ಪರ ಸಹಕಾರ, ಭೂವಿಜ್ಞಾನ ತಂತ್ರಜ್ಞಾನ, ಚೀನಾ ದೇಶದ ಅಭಿವೃದ್ಧಿ ಸಂಶೋಧನಾ ಕೇಂದ್ರ, ಸಿಸ್ಟರ್ ಸಿಟಿ, ದೂರದರ್ಶನ, ಕಲೆ, ಸಂಸ್ಕೃತಿ, ವಿಜ್ಞಾನ ತಂತ್ರಜ್ಞಾನ, ರೈಲ್ವೆ ವಲಯ, ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. [ಚೀನಾದಲ್ಲಿ ಮೋದಿ: ಚೀನಿ ಪತ್ರಿಕೆಗಳ ಟೀಕೆ-ಟಿಪ್ಪಣಿ]
We deal with State Govts in a spirit of partnership and with sensitivity to their concerns: PM Modi #ModiInChina pic.twitter.com/paNg8F5SCv
— ANI (@ANI_news) May 15, 2015 ಚೀನಾ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರೂರಿಗೆ ಕ್ಸಿಯಾನ್ ಪ್ರಾಂತ್ಯಕ್ಕೆ ಭೇಟಿ ನೀಡುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಪ್ರವಾಸ ಆರಂಭ ಮಾಡಿದ್ದರು.
Press Statements being made by PM @narendramodi and Premier Li pic.twitter.com/xiTCiMPbqa
— Vikas Swarup (@MEAIndia) May 15, 2015 ಟೆರಾಕೋಟಾ ವಾರಿಯರ್ಸ್ ಮ್ಯೂಸಿಯಂ ಭೇಟಿ, ಕ್ಸಿಂಗ್ ಶಾನ್ ದೇಗುಲ, ಬಿಗ್ ವೈಲ್ಡ್ ಗೂಸೆ ಪಗೋಡಾಗೆ ಭೇಟಿ, ಪಾಟ್ ಸಿಟಿ ನಡಿಗೆ, ಅಧ್ಯಕ್ಷರಿಗೆ ಜಿನ್ ಪಿಂಗ್ ಗೆ ಬೋಧಿ ಸಸಿ ಹಸ್ತಾಂತರ ಎಲ್ಲವೂ ಮೊದಲ ದಿನದ ಮುಖ್ಯಾಂಶವಾಗಿತ್ತು.
ಭಾರತ ಹಾಗೂ ಚೀನಾ ನಡುವೆ ಸಹಿ ಕಂಡ 24 ಒಪ್ಪಂದಗಳ ಪಟ್ಟಿ:
1. ಚೆಂಗ್ಡು ಹಾಗೂ ಚೆನ್ನೈ ನಡುವೆ ರಾಯಭಾರಿ ಕಚೇರಿ ಸ್ಥಾಪನೆಗೆ ಅಧಿಸೂಚನೆ.
2. ಕೌಶಲ್ಯ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ಇನ್ಶ್ಟಿಟ್ಯೂಟ್ ಸ್ಥಾಪನೆ. ವೃತ್ತಿಪರ ತರಬೇತಿ ಶಿಕ್ಷಣ ಹಾಗೂ ಅಭಿವೃದ್ಧಿಯಲ್ಲಿ ಸಹಕಾರಕ್ಕಾಗಿ ಒಪ್ಪಂದ.
3. ವ್ಯಾಪಾರ ವಹಿವಾಟು ಪರಸ್ಪರ ಸಹಕಾರಕ್ಕಾಗಿ ಹೊಸ ಒಪ್ಪಂದ.
4. ವಿದೇಶಾಂಗ ಸಚಿವಾಲಯ ಹಾಗೂ ಸೆಂಟರ್ ಕಮಿಟಿ ಆಫ್ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ(ಸಿಸಿಸಿಪಿಸಿ) ಜೊತೆ ಸಹಕಾರ ಒಪ್ಪಂದ.
5. ಭಾರತೀಯ ರೈಲ್ವೆ ಹಾಗೂ ನ್ಯಾಷನಲ್ ರೈಲ್ವೆ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ ನಡುವೆ ಒಪ್ಪಂದ.
6. ಶೈಕ್ಷಣಿಕ ವಿನಿಮಯ ಒಪ್ಪಂದ.
7. ಗಣಿ ಹಾಗೂ ಖನಿಜ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದ.
8. ಬಾಹ್ಯಾಕಾಶ ಯೋಜನೆ ಹಾಗೂ ಖಗೋಳದಲ್ಲಿ ಸಹಕಾರಕ್ಕಾಗಿ ಒಪ್ಪಂದ.
9. ಜೈವಿಕ ಇಂಧನ ನೀಡುವ ಸಸ್ಯ ಹಾಗೂ ಬೀಜಗಳ(Rapeseed oil) ಆಮದು-ರಫ್ತು ಸಹಕಾರಕ್ಕಾಗಿ ಒಪ್ಪಂದ.
10. ಸಿಸಿಟಿವಿ ಹಾಗೂ ದೂರದರ್ಶನ ನಡುವೆ ವಿಚಾರ ವಿನಿಮಯ ಒಪ್ಪಂದ.
11. ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಒಪ್ಪಂದಕ್ಕೆ ಸಹಿ.
12. ಕುಶಲಕರ್ಮಿಗಳು, ಪಂಡಿತರ ನಡುವೆ ನಿರಂತರ ಸಂಪರ್ಕಕ್ಕಾಗಿ ಒಪ್ಪಂದ.
13. ನೀತಿ ಆಯೋಗ ಹಾಗೂ ಸಂಶೋಧನಾ ಅಭಿವೃದ್ಧಿ ಕೇಂದ್ರ ಸಹಕಾರಕ್ಕಾಗಿ ಒಪ್ಪಂದ
14. ಭೂಕಂಪ ವಿಜ್ಞಾನ ಹಾಗೂ ಇಂಜಿನಿಯರಿಂಗ್ ನಲ್ಲಿ ಪರಸ್ಪರ ನೆರವಿಗಾಗಿ ಒಪ್ಪಂದ.
15. ಸಾಗರ ವಿಜ್ಞಾನ, ಹವಾಮಾನ ವೈಪರೀತ್ಯ ಕುರಿತಂತೆ ಅಧ್ಯಯನ, ಸಂಶೋಧನೆ, ನೆರವು.
16. ಭೂಗರ್ಭ ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಒಪ್ಪಂದ.
17. ರಾಜ್ಯ ಹಾಗೂ ಪ್ರಾಂತ್ಯಗಳ ನಾಯಕರ ನಡುವೆ ಒಡಂಬಡಿಕೆ.
18. ಭಾರತದ ರಾಜ್ಯ, ಮುನ್ಸಿಪಾಲಿಟಿ ಮಟ್ಟದ ಮಾತುಕತೆಗೂ ಒಪ್ಪಂದ.
19. ಸಿಚೂಯಾನ್ ಹಾಗೂ ಕರ್ನಾಟಕ ನಡುವೆ ಸಿಸ್ಟರ್ ಸಿಟಿ ಒಪ್ಪಂದ.
20. ಚೆನ್ನೈ ಹಾಗೂ ಚೊನ್ಗ್ ಗಿಂಗ್ ನಡುವೆ ಸಿಸ್ಟರ್ ಸಿಟಿ ಒಪ್ಪಂದ.
21. ಹೈದರಾಬಾದ್ ಹಾಗೂ ಗಿಂಗ್ಡೋ ನಡುವೆ ಸೋದರ ಸಂಬಂಧ.
22. ಔರಂಗಾಬಾದ್ ಹಾಗೂ ಡಂಹುಯಾಂಗ್ ನಡುವೆ ಸಿಸ್ಟರ್ ಸಿಟಿ.
23. ICCR ಹಾಗೂ ಫುಡಾನ್ ವಿವಿ ನಡುವೆ ಗಾಂಧಿ ವಿಚಾರಧಾರೆ ಅಧ್ಯಯನ ವಿನಿಮಯಕ್ಕೆ ಒಪ್ಪಂದ
24. ಕುಮ್ನಿಂಗ್ ನಲ್ಲಿ ಯೋಗ ಶಾಲೆ ಸ್ಥಾಪನೆಗೆ ಒಡಂಬಡಿಕೆಗೆ ಸಹಿ.
{document1}
(ಒನ್ ಇಂಡಿಯಾ ಸುದ್ದಿ)
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications