ದೀಪಾವಳಿಯಂದೇ ಹಿಂದೂ ದೇವಾಲಯಗಳ ಧ್ವಂಸ

Posted By:
Subscribe to Oneindia Kannada

ಢಾಕಾ, ಅಕ್ಟೋಬರ್, 31: ದೀಪಾವಳಿ ಸಂಭ್ರಮ ದೇಶದಾದ್ಯಂತ ಮುಗಿಲುಮುಟ್ಟಿದ್ದು, ಭಾರತೀಯರೆಲ್ಲಾ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿದ್ದಾರೆ ಆದರೆ ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಮಾತ್ರ ಇ ದೀಪಾವಳಿ ಕರಾಳ ನೆನಪುಗಳನ್ನು ಉಳಿಸಿದೆ.

Mob Destroys Hindu Temples and Homes in Bangladesh

ಮಕ್ಕಾದ ಪವಿತ್ರ ಕಾಬಾವನ್ನು ಹೀಯಾಳಿಸುವಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಬಂಗ್ಲಾದೇಶದ ಯುವಕರು ಕಣ್ಣಿಗ ಕಂಡ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ವಿಗ್ರಹಗಳನ್ನು ವಿಘ್ನ ಮಾಡಿದ್ದಾರೆ.

Mob Destroys Hindu Temples and Homes in Bangladesh

ಅಷ್ಟೇ ಅಲ್ಲದೆ ಹಿಂದೂಗಳಿಗೆ ಸೇರಿದ ಆಸ್ತಿಗಳನ್ನು ಮತ್ತು ಹಿಂದೂಗಳಿಗೆ ಸೇರಿದ ಅಂಗಡಿಮುಂಗಟ್ಟುಗಳನ್ನು ನಾಶಮಾಡಿದ್ದಾರೆ. ಈ ಘಟನೆಯಿಂದ ಬಾಂಗ್ಲಾದಲ್ಲಿರು ಹಿಂದೂಗಳು ಮನೆಯಿಂದ ಹೊರಗೆ ಬರದೆ ಭಯದಲ್ಲೇ ಜೀವನ ಸಾಗಿಸುವಂತಾಗಿದೆ.

Mob Destroys Hindu Temples and Homes in Bangladesh

ಪವಿತ್ರ ಇಸ್ಲಾಂ ಅನ್ನು ಅವಮಾನಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಢಾಕಾದ ನಸೀರ್ ನಗರದಲ್ಲಿ ಬಾಂಗ್ಲಾ ಯುವಕರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

Mob Destroys Hindu Temples and Homes in Bangladesh

ಪ್ರತಿಭಟನೆಯಲ್ಲಿ ಉದ್ರಿಕ್ತರಾದ ಯುವಕರ ಗುಂಪು 10 ಹಿಂದೂ ದೇವಾಲಯಗಳನ್ನು 200 ಹಿಂದೂ ಮನೆಗಳನ್ನು ನಾಶಪಡಿಸಿದ್ದಾರೆ. ಅಷ್ಟೇ ಅಲ್ಲದೆ ಹಿಂದೂಗಳಿಗೆ ಸೇರಿದ 8 ಅಂಗಡಿಗಳನ್ನು ನಾಶಪಡಿಸಿದ್ದು, ಘಟನೆಯಲ್ಲಿ 150ಕ್ಕೂ ಅಧಿಕ ಹಿಂದೂಗಳು ಗಾಯಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a case of communal violence, a mob destroyed at least ten temples and attacked hundreds of houses of Hindus in Brahminbaria, Bangladesh on Sunday afternoon in Dhaka, Bangladesh.
Please Wait while comments are loading...