ಬ್ರಿಟನ್ ಆಗಸದಲ್ಲಿ ವಿಮಾನ - ಹೆಲಿಕಾಪ್ಟರ್ ಡಿಕ್ಕಿ, ಮೂರು ಸಾವು

By: ವಿಕಾಸ್
Subscribe to Oneindia Kannada

ಲಂಡನ್, ನವೆಂಬರ್ 17: ಬ್ರಿಟನ್ ನ ಆಗಸದಲ್ಲಿ ನಡೆದ ಅಚ್ಚರಿಯ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಬ್ರಿಟನ್ ನಲ್ಲಿ ಬಕಿಂಗ್ ಹ್ಯಾಮ್ ಶೈರ್ ಪ್ರದೇಶದ ಆಕಾಶದಲ್ಲಿ ಈ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಹೆಲಿ ಏರ್ ಫ್ಲೀಟ್ ಗೆ ಸೇರಿದ್ದಾಗಿದೆ. ಇದರಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಹಗುರ ವಿಮಾನ ಡಿಕ್ಕಿಯಾಗಿದ್ದು ಇದರಲ್ಲಲಿ ಪೈಲಟ್ ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

 Mid-air collision between chopper and plane in UK, three dead

ಅಪಘಾತ ನಡೆದ ಸ್ಥಳಕ್ಕೆ 7 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು ಸಾವಿನ ಸಂಖ್ಯೆ ಬಗ್ಗೆ ನಿಖರತೆ ಸಿಕ್ಕಿಲ್ಲ. ವಿಮಾನ ಮತ್ತು ಹೆಲಿಕಾಪ್ಟರ್ ಅವಶೇಷಗಳು ಬಿದ್ದ ಜಾಗ ಕಾಡು ಪ್ರದೇಶವಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆ ಬಗ್ಗೆ ತನಿಖೆಗೆ ವಾಯು ಅಪಘಾತ ತನಿಖಾ ತಂಡವನ್ನು ಕಳುಹಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least three were killed in a mid-air collision involving an aircraft and a helicopter in Buckinghamshire, United Kingdom, on Friday.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ