ಮೆಕ್ಸಿಕೋ ಪರಿಸ್ಥಿತಿ ಹಿಡಿತಕ್ಕೆ ತರಲು ಹರಸಾಹಸ, ಲಕ್ಷಾಂತರ ಕೋಟಿ ರೂಪಾಯಿ ನಷ್ಟದ ಭಯ | Mexico Situation

ಅಮೆರಿಕದ ನೆರೆಯ ದೇಶ ಹಾಗೂ ಉತ್ತರ ಅಮೆರಿಕ ಖಂಡದ ಪ್ರಮುಖ ರಾಷ್ಟ್ರವಾಗಿರುವ ಮೆಕ್ಸಿಕೋ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ಮೆಕ್ಸಿಕೋ ನೆಲದಲ್ಲಿ ಮಾದಕ ವಸ್ತುಗಳ ಗುಂಪಿನ ಲೀಡರ್ ಹತ್ಯೆ ನಂತರ ಹಿಂಸಾಚಾರದ ಕಿಡಿ ಹೊತ್ತಿಕೊಂಡಿತ್ತು. ಹೇಗಾದರೂ ಮಾಡಿ ಹಿಂಸೆ ನಿಯಂತ್ರಣ ಮಾಡಬೇಕು ಎಂಬ ಒತ್ತಡದಲ್ಲಿ ಮೆಕ್ಸಿಕೋ ಸರ್ಕಾರ ಪರದಾಡುತ್ತಿದೆ. ಆದರೆ ಪ್ರತಿಭಟನೆಯ ಕಿಚ್ಚು ದಿನದಿನಕ್ಕೂ ಬೇರೆ ಬೇರೆ ಭಾಗಗಳಿಗೆ ವಿಸ್ತರಣೆ ಆಗುತ್ತಿರುವ ಕಾರಣಕ್ಕೆ ಆತಂಕ ಹೆಚ್ಚಾಗಿದೆ. ಇದರ ಜೊತೆ ಮೆಕ್ಸಿಕೋ ದೇಶ ಈಗ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸುವ ಭಯದಲ್ಲಿ ಇದೆ.

ಮೆಕ್ಸಿಕೋ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಪಕ್ಕದಲ್ಲೇ ಇರುವ ಅಮೆರಿಕ ಪದೇ ಪದೇ ಈ ದೇಶವನ್ನ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಪ್ರಮುಖವಾಗಿ ಮೆಕ್ಸಿಕೋದಿಂದ ಬರುವ ಮಾದಕ ವಸ್ತುಗಳು ಹಾಗೂ ಅಕ್ರಮ ವಲಸಿಗರು ಅಮೆರಿಕಗೆ ತಲೆನೋವು ತರುತ್ತಿದ್ದಾರೆ ಎಂಬ ಆರೋಪ ಅಮೆರಿಕ ಸರ್ಕಾರದ್ದು. ಹೀಗಿದ್ದಾಗ ಮಾದಕ ವಸ್ತುಗಳ ಪೂರೈಕೆ ಮಾಡುವ ಗುಂಪುಗಳನ್ನ ಹತ್ತಿಕ್ಕಲು ಪದೇ ಪದೇ ಅಮೆರಿಕ ಸರ್ಕಾರ ಆಗ್ರಹ ಮಾಡುತ್ತಿತ್ತು.

Mexico Situation

ಫುಟ್‌ಬಾಲ್ ವಿಶ್ವಕಪ್‌ ನಡೆಯುವುದು ಅನುಮಾನ

ಕೆಲವು ದಿನಗಳ ಹಿಂದಷ್ಟೇ ಇದೇ ವಿಚಾರವಾಗಿ ಮಾದಕ ವಸ್ತುಗಳ ಡಾನ್ ಎಂದು ಕರೆಸಿಕೊಳ್ಳುತ್ತಿದ್ದ ಎಲ್ ಮೆಂಚೊ ಹತ್ಯೆ ನಡೆದಿತ್ತು. ಈ ಹತ್ಯೆ ಬಳಿಕ ಮೆಕ್ಸಿಕೋ ಹೊತ್ತಿ ಉರಿಯುತ್ತಿದ್ದು, ಮುಂಬರುವ ಫುಟ್‌ಬಾಲ್ ವಿಶ್ವಕಪ್‌ಗೆ ಕೂಡ ಅಡ್ಡಿ ಮಾಡುವ ಆತಂಕ ಎದುರಾಗಿದೆ. ಎಲ್ಲೆಂದರಲ್ಲಿ ಬೆಂಕಿ ಹಾಗೂ ದಾಳಿ ನಡೆಯುತ್ತಿದ್ದು, ಮೆಕ್ಸಿಕೋ ಪ್ರಜೆಗಳು ಹೊರಗೆ ಬರಲು ಆಗದ ವಾತಾವರಣ ನಿರ್ಮಾಣ ಆಗಿದೆ. ಇನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನ ನಿಯೋಜನೆ ಮಾಡಿದ್ದರೂ ಪ್ರಯೋಜನ ಆಗುತ್ತಿಲ್ಲ.

ಲಕ್ಷಾಂತರ ಕೋಟಿ ರೂಪಾಯಿ ನಷ್ಟ?

ಫುಟ್‌ಬಾಲ್ ವಿಶ್ವಕಪ್‌ ಹಿನ್ನೆಲೆ ಈಗಾಗಲೇ ಮೆಕ್ಸಿಕೋ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಹಣ ಸುರಿದು, ಬಹುತೇಕ ಎಲ್ಲಾ ಸಿದ್ಧತೆಗಳನ್ನು ಮುಗಿಸಿತ್ತು. ಆದರೆ ಎಲ್ ಮೆಂಚೊ ಹತ್ಯೆ ನಂತರ ಭಾರಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದು ಬೆಂಕಿ ಹೊತ್ತಿಕೊಂಡಿದೆ. ಪ್ರತಿಭಟನೆ ನಡೆಸುತ್ತಿರುವ ಮಾದಕ ವಸ್ತುಗಳ ಕಳ್ಳ ಸಾಗಣೆದಾರರು ಎಲ್ಲೆಂದರಲ್ಲಿ ಬೆಂಕಿ ಹೊತ್ತಿಸುತ್ತಿದ್ದಾರೆ. ಅದೇ ರೀತಿಯಾಗಿ ಮೆಕ್ಸಿಕೋ ದೇಶದ ಫುಟ್‌ಬಾಲ್ ಕ್ರೀಡಾಂಗಣದ ಮೇಲೆ ಕೂಡ ದಾಳಿಗಳು ನಡೆಯುತ್ತಿದ್ದು, ಫುಟ್‌ಬಾಲ್ ವಿಶ್ವಕಪ್ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ. ಅಕಸ್ಮಾತ್ ಇದು ನಿಜವಾದರೆ ಮುಂದೆ ಮೆಕ್ಸಿಕೋ ಈ ಬೆಳವಣಿಗೆ ಪರಿಣಾಮ ದೊಡ್ಡ ನಷ್ಟ ಅನುಭವಿಸಲಿದೆ. ಹೀಗೆ ಮೆಕ್ಸಿಕೋ ದೇಶದ ಫುಟ್‌ಬಾಲ್ ಭವಿಷ್ಯಕ್ಕೆ ಕೂಡ ಇದು ಅಡ್ಡಿ ಮಾಡುವ ಆತಂಕ ಆವರಿಸಿದ್ದು, ಮೆಕ್ಸಿಕೋ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+