• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟು

|

ನ್ಯೂಯಾರ್ಕ್, ನವೆಂಬರ್ 03 : "ನನ್ನ ಮತ್ತು ಆಕೆಯ ನಡುವೆ ಸಹಮತದ ಸಂಬಂಧವಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿದ್ದೆಲ್ಲ ಹಸಿ ಸುಳ್ಳು" ಎಂದು ಖ್ಯಾತ ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಹೇಳಿರುವ ಹೇಳಿಕೆಯನ್ನು, ಅವರಿಂದ ಅತ್ಯಾಚಾರಕ್ಕೀಡಾಗಿದ್ದೇನೆಂದು ಮಿಟೂ ಬಾಂಬ್ ಸಿಡಿಸಿರುವ ಪತ್ರಕರ್ತೆ ಪಲ್ಲವಿ ಗೊಗೊಯ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ತಾವು ಏಷ್ಯನ್ ಏಜ್ ಪತ್ರಿಕೆಯಲ್ಲಿ ಇದ್ದಾಗ, ಸುಮಾರು 20 ವರ್ಷಗಳ ಹಿಂದೆ ತನ್ನ ಮೇಲೆ ಮೊಬಶಾರ್ ಜಾವೇದ್ ಅಕ್ಬರ್ ಅವರು ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದರು, ಒಂದು ಬಾರಿ ಜೈಪುರದ ಹೋಟೆಲೊಂದರಲ್ಲಿ ಬಟ್ಟೆಗಳನ್ನೆಲ್ಲ ಹರಿದುಹಾಕಿ ಬಲಾತ್ಕಾರ ಮಾಡಿದ್ದರು ನ್ಯೂಯಾರ್ಕ್ ನಲ್ಲಿ ಪತ್ರಕರ್ತೆಯಾಗಿರುವ ಪಲ್ಲವಿ ಗೊಗೊಯ್ ಆರೋಪ ಮಾಡಿದ್ದಾರೆ.

ಅವರ ಕಣ್ಣೀರ, ನೋವಿನ ಕಥೆಯನ್ನು ವಾಷಿಂಗ್ಟನ್ ಪೋಸ್ಟ್ ಸಂಪೂರ್ಣವಾಗಿ ಪ್ರಕಟಿಸಿತ್ತು. ಈ ಸುದ್ದಿ ಪ್ರಕಟಿಸುವ ಮುನ್ನ ಅಕ್ಬರ್ ಅವರನ್ನು ಸಂಪರ್ಕಿಸಿದಾಗ, ಅತ್ಯಾಚಾರ ಮಾಡಿದ್ದೆಲ್ಲ ಶುದ್ಧ ಸುಳ್ಳು ಎಂದು ಅಕ್ಬರ್ ವಕೀಲರು ಹೇಳಿಕೆ ನೀಡಿದ್ದರು. ನಂತರ, ಅಕ್ಬರ್ ಅವರ ಹೆಂಡತಿ ಮಲ್ಲಿಕಾ ಅಕ್ಬರ್ ಅವರು ಕೂಡ, ಅವರಿಬ್ಬರ ಮಧ್ಯೆ ಸಮ್ಮತದ ಸಂಬಂಧವಿತ್ತು, ಅದು ನಮ್ಮ ಬಾಳಲ್ಲಿಯೂ ಹುಳಿ ಹಿಂಡಿತ್ತು ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು.

ಎಂಜೆ ಅಕ್ಬರ್ ನನ್ನನ್ನು ರೇಪ್ ಮಾಡಿದ್ರು : ಯುಎಸ್ ಪತ್ರಕರ್ತೆ

ಇದೀಗ ಎಂಜೆ ಅಕ್ಬರ್ ಮತ್ತು ಮಲ್ಲಿಕಾ ಅಕ್ಬರ್ ಅವರ ಹೇಳಿಕೆಗೆ ಪ್ರತಿಯಾಗಿ ಪಲ್ಲವಿ ಗೊಗೊಯ್ ಅವರು ಕೂಡ ಸ್ಪಷ್ಟನೆ ನೀಡಿದ್ದು, ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಸಮ್ಮತದ ಸಂಬಂಧವಿರಲೇ ಇಲ್ಲ ಎಂದು ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ. ಅದರ ವಿವರ ಮುಂದಿದೆ.

ವಾಷಿಂಗ್ಟನ್ ಪೋಸ್ಟ್ ನಲ್ಲಿ ಲೈಂಗಿಕ ಹಲ್ಲೆಯ 'ಪಲ್ಲವಿ'

ನಾನು ಎಂಜೆ ಅಕ್ಬರ್ ಅವರಿಂದ ದೈಹಿಕವಾಗಿ, ಮೌಖಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆಗೊಳಗಾದ ನನ್ನ ಕಥಾನಕವನ್ನು ಇದ್ದಂತೆಯೇ ವಾಷಿಂಗ್ಟನ್ ಪೋಸ್ಟ್ ಗುರುವಾರ ಪ್ರಕಟಿಸಿತ್ತು ಎಂದು ಹೇಳಿಕೆ ಆರಂಭಿಸಿರುವ ಪಲ್ಲವಿ ಗೊಗೊಯ್ ಅವರು ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ನ್ಯಾಷನಲ್ ಪಬ್ಲಿಕ್ ರೇಡಿಯೋದಲ್ಲಿ ಚೀಫ್ ಬಿಸಿನೆಸ್ ಎಡಿಟರ್ ಆಗಿರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮಾತುಗಳು ಮುಂದಿವೆ ಓದಿರಿ.

#ಮಿಟೂಗೆ ಮೊದಲ ಜಯ, ಕೇಂದ್ರ ಮಂತ್ರಿ ಎಂಜೆ ಅಕ್ಬರ್‌ ರಾಜೀನಾಮೆ

ಇತರ ಸಂತ್ರಸ್ತ ಮಹಿಳೆಯರೂ ಮುಂದೆ ಬರಲಿ

ಇತರ ಸಂತ್ರಸ್ತ ಮಹಿಳೆಯರೂ ಮುಂದೆ ಬರಲಿ

ನನಗಾಗ ಇಪ್ಪತ್ತರ ಹರೆಯ, ಪತ್ರಿಕೋದ್ಯಮವನ್ನು ಕಲಿಯಬೇಕೆಂಬ ಹುಮ್ಮಸ್ಸು ಮತ್ತು ಅವರ (ಎಂಜಿ ಅಕ್ಬರ್) ಮುಂದಾಳತ್ವದ ಪತ್ರಿಕೆಯಲ್ಲಿ ಉದ್ಯೋಗಿಯಾಗಿ ಕೆಲಸ ಕಲಿಯುವ ಅವಕಾಶ ಒದಗಿತ್ತು. ನನ್ನ ಮೇಲೆ ಮತ್ತು ಲೈಂಗಿಕ ದೌರ್ಜನ್ಯದ ಕಥೆಯನ್ನು ಬಿಚ್ಚಿಟ್ಟಿರುವ ನನ್ನಂಥ ಹಲವಾರು ಯುವ ಪತ್ರಕರ್ತೆಯರ ಮೇಲೆ ನಡೆಸಲಾದ ಲೈಂಗಿಕ ಕಿರುಕುಳದ ಜವಾಬ್ದಾರಿಯನ್ನು ಹೊರುವ ಬದಲು, ಇತರೆ ಸರಣಿ ಕಾಮುಕರ ಹಾಗೆ 'ನಮ್ಮಿಬ್ಬರ ಮಧ್ಯೆ ಒಪ್ಪಂದದ ಲೈಂಗಿಕ ಸಂಬಂಧವಾಗಿತ್ತು' ಎಂದು ತಿಪ್ಪೆ ಸಾರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಜೆ ಅಕ್ಬರ್ ವಿರುದ್ಧ ಹೇಳಿಕೆ ನೀಡಲು 20 ಪತ್ರಕರ್ತೆಯರು ಸಿದ್ಧ

ನನ್ನ ಮೇಲೆ ಎಂಜೆ ಅಕ್ಬರ್ ಅತ್ಯಾಚಾರ ಎಸಗಿದ್ದಾರೆ

ನನ್ನ ಮೇಲೆ ಎಂಜೆ ಅಕ್ಬರ್ ಅತ್ಯಾಚಾರ ಎಸಗಿದ್ದಾರೆ

ಅದು ಹಾಗೆ (ಸಮ್ಮತದ ಸಂಬಂಧ) ಇರಲೇ ಇಲ್ಲ. ದಬ್ಬಾಳಿಕೆಯ, ಅಧಿಕಾರ ದುರ್ಬಳಕೆಯಿಂದ ಹೇರಿದಂಥ ಸಂಬಂಧವಾಗಿತ್ತು. ಅದೆಂದೂ ಸಮ್ಮತದ ಸಂಬಂಧವಾಗಿರಲೇ ಇಲ್ಲ. ನಾನು ಪತ್ರಿಕೆಯಲ್ಲಿ ಬರೆದ ಒಂದೊಂದು ಅಕ್ಷರವನ್ನೂ ಒತ್ತಿಒತ್ತಿ ಹೇಳುತ್ತೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧಳಾಗಿದ್ದೇನೆ, ನನ್ನ ಮೇಲೆ ಎಂಜೆ ಅಕ್ಬರ್ ಅತ್ಯಾಚಾರ ಎಸಗಿದ್ದಾರೆ ಎಂದು ಪಲ್ಲವಿ ಗೊಗೊಯ್ ಅವರು ತಿರುಗೇಟು ನೀಡಿದ್ದಾರೆ. ಅಂದು ತುಷಿತಾ ಪಟೇಲ್ ಎಂಬ ಒಬ್ಬ ಸ್ನೇಹಿತೆಗೆ ಬಿಟ್ಟು ಉಳಿದಾರಿಗೂ ಹೇಳಲಾರದೆ ತೊಳಲಾಡಿದ್ದ ಕಥಾನಕವನ್ನು #ಮಿಟೂ ಅಭಿಯಾನ ಆರಂಭವಾಗುತ್ತಿದ್ದಂತೆ ಬಯಲು ಮಾಡಿದ್ದಾರೆ.

#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು

ಸತ್ಯ ಸಂಗತಿಯನ್ನು ಹೇಳಿಕೊಳ್ಳಲಿ

ಸತ್ಯ ಸಂಗತಿಯನ್ನು ಹೇಳಿಕೊಳ್ಳಲಿ

ನಾನು ಸತ್ಯದ ವಾಕ್ಯಕ್ಕೆ ಬದ್ಧಳಾಗಿದ್ದೇನೆ, ಮುಂದೆಯೂ ಮಾತನಾಡುತ್ತೇನೆ. ಏಕೆಂದರೆ, ನನ್ನಂತೆ ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಇತರೆ ಮಹಿಳೆಯರೂ ಮುಂದೆ ಬರಲಿ, ಧೈರ್ಯವಾಗಿ ಸತ್ಯ ಸಂಗತಿಯನ್ನು ಹೇಳಿಕೊಳ್ಳಲಿ ಎಂದು ತಮ್ಮ ಮಾತನ್ನು ಮುಗಿಸಿದ್ದಾರೆ ಪಲ್ಲವಿ ಗೊಗೊಯ್. ಈಗಾಗಲೆ ಸುಮಾರು ಹದಿನೇಳು ಮಹಿಳೆಯರು (ಗಝಾಲಾ ವಹಾಬ್, ಸುಪರ್ಣಾ ಶರ್ಮಾ, ತುಷಿತಾ ಪಟೇಲ್ ಮುಂತಾದವರು) ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಪಲ್ಲವಿ ಗೊಗೊಯ್ ಅವರು ಹದಿನೆಂಟನೆಯವರು.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಮಜಲಿ ಗಂಟಲಲ್ಲಿ ನಾಲಿಗೆ ಇಳಿಬಿಟ್ಟಿದ್ದ ಅಕ್ಬರ್

ಮಜಲಿ ಗಂಟಲಲ್ಲಿ ನಾಲಿಗೆ ಇಳಿಬಿಟ್ಟಿದ್ದ ಅಕ್ಬರ್

ಈಗಾಗಲೆ ಅಮೆರಿಕದಲ್ಲಿಯೇ ಪತ್ರಕರ್ತೆಯಾಗಿರುವ ಮಜಲಿ ಡೇ ಪುಯ್ ಕಂಪ್ ಎನ್ನುವ 30 ವರ್ಷದ ಮಹಿಳೆ ಕೂಡ ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಕ್ಬರ್ ಅವರು ನಾನು ಅವರ ಬಳಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಕಡೆಯ ದಿನ, ಅವರಿಗೆ ಥ್ಯಾಂಕ್ಸ್ ಹೇಳುವ ಉದ್ದೇಶದಿಂದ ಹ್ಯಾಂಡ್ ಶೇಕ್ ಮಾಡಲು ಬಂದಾಗ ನನ್ನ ಭುಜ ಹಿಡಿದೆಳೆದು, ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಬಲವಂತವಾಗಿ ಮುತ್ತಿಟ್ಟಿದ್ದರು ಮತ್ತು ತಮ್ಮ ಗಂಟಲೊಳಗೆ ನಾಲಗೆಯನ್ನು ತುರುಕಿ ಅಸಹ್ಯವಾಗಿ ವರ್ತಿಸಿದ್ದರು ಎಂದು ಮಜಲಿ ಗಂಭೀರ ಆರೋಪ ಹೊರಿಸಿದ್ದಾರೆ.

ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ

ಆದರೆ, ಮೊದಲ ಬಾರಿಗೆ ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು ಪ್ರಿಯಾ ರಮಣಿ ಎಂಬ ಪತ್ರಕರ್ತೆ. ಕೊಲ್ಕತಾದ ಹೋಟೆಲಿನಲ್ಲಿ ಸಂದರ್ಶನಕ್ಕೆಂದು ಹೋಗಿದ್ದಾಗ, ಸಂದರ್ಶನ ಮಾಡುವ ಬದಲು ರೋಮ್ಯಾಂಟಿಕ್ ಹಾಡು ಹೇಳಿಕೊಂಡು ಅವರು ಅಸಭ್ಯವಾಗಿ ವರ್ತಿಸಿದ್ದರು ಎಂದು ರಮಣಿ ಆರೋಪಿಸಿದ್ದಾರೆ. ಪ್ರಿಯಾ ರಮಣಿ ಅವರ ವಿರುದ್ಧ ಎಂಜೆ ಅಕ್ಬರ್ ಅವರು ಈಗಾಗಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಅಕ್ಬರ್ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ಆರೋಪಿಸಿರುವ ಹಲವಾರು ಪತ್ರಕರ್ತೆಯರು ಈ ಪ್ರಕರಣದಲ್ಲಿ ಪ್ರಿಯಾ ರಮಣಿ ಪರವಾಗಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ.

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ

English summary
MeToo against MJ Akbar : New York based journalist Pallavi Gogoi has denied that there was no consensual relationship between her and MJ Akbar, as claimed by Akbar and his wife Mallika. In a statement on Twitter, Pallavi has said she will stand by her statement and tell the truth that she was raped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X