ಮೈಕ್ರೋಸಾಫ್ಟ್, ಗೂಗಲ್ ಬೆನ್ನಲ್ಲೇ ಉದ್ಯೋಗಿಗಳಿಗೆ ವಾಲಂಟಿಯರ್‌ ಏಕ್ಸಿಟ್‌ ಆಫರ್ ನೀಡಿದ ಮೆಟಾ

ಕೃತಕ ಬುದ್ಧಿಮತ್ತೆ ಅಥವಾ ಈ ಎಐ ತಂತ್ರಜ್ಞಾನದ ಭಾರಿ ಪೈಪೋಟಿಯ ನಡುವೆ, ಜಗತ್ತಿನ ದೈತ್ಯ ಐಟಿ ಕಂಪನಿಗಳು ತಮ್ಮ ಕಾರ್ಯವೈಖರಿಯಲ್ಲಿ ಭಾರಿ ಬದಲಾವಣೆಗಳನ್ನಾ ತರುತ್ತಿದ್ದಾವೆ. ಎಐ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿರುವ ಕಂಪನಿಗಳು, ತೀವ್ರ ಆರ್ಥಿಕ ಒತ್ತಡದಿಂದಾಗಿ ವೆಚ್ಚ ಕಡಿತಕ್ಕೆ ಮುಂದಾಗಿವೆ.

ಐಟಿ ಉದ್ಯೋಗಿಗಳನ್ನ ನೇರವಾಗಿ ಕೆಲಸದಿಂದ ವಜಾಗೊಳಿಸುವ ಬದಲು, ಆಕರ್ಷಕ ಪರಿಹಾರ ಪ್ಯಾಕೇಜ್‌ಗಳನ್ನ ನೀಡಿ ಕಂಪನಿಯಿಂದ ಹೊರಹೋಗಲು ಸ್ವಯಂ ನಿರ್ಗಮನ ಅಂದರೆ ವಾಲಂಟಿಯರ್‌ ಏಕ್ಸಿಟ್‌ ಆಯ್ಕೆಯನ್ನ ನೀಡುತ್ತಿವೆ. ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಹಾಗೂ ಗೂಗಲ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇಂತಹ ಬಂಪರ್ ಆಫರ್ ನೀಡಿದ್ದವು. ಇದೀಗ ಆ ಸಾಲಿಗೆ ಫೇಸ್‌ಬುಕ್ ಮಾತೃಸಂಸ್ಥೆಯಾದ 'ಮೆಟಾ' ಕೂಡ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ತನ್ನ ಉದ್ಯೋಗಿಗಳಿಗೆ ಸ್ವಯಂ ನಿರ್ಗಮನದ ಆಫರ್ ಮುಂದಿಟ್ಟಿದೆ.

Meta Joins Microsoft and Google in Offering Voluntary Exit Packages Amid Artificial Intelligence Race

ಮೆಟಾದಿಂದ ವಾಲಂಟಿಯರ್‌ ಏಕ್ಸಿಟ್‌ ಆಫರ್

ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾ ಸಂಸ್ಥೆಯು ಫ್ರಾನ್ಸ್‌ನಲ್ಲಿರುವ ತನ್ನ ಅಂಗಸಂಸ್ಥೆಯ ನೌಕರರಿಗೆ ಈ ಸ್ವಯಂ ನಿರ್ಗಮನದ ಆಯ್ಕೆಯನ್ನ ಒದಗಿಸುತ್ತಿದೆ. ವರದಿಗಳ ಪ್ರಕಾರ, ಫ್ರಾನ್ಸ್‌ನಲ್ಲಿ ಮೆಟಾ ಸಂಸ್ಥೆಯು ಒಟ್ಟು 300 ಉದ್ಯೋಗಿಗಳನ್ನ ಹೊಂದಿದ್ದು, ಈ ಪೈಕಿ ಅಂದಾಜು 100 ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾಗಿದೆ. ಆದರೆ, ಮೈಕ್ರೋಸಾಫ್ಟ್ ಅಥವಾ ಗೂಗಲ್‌ನಂತೆ ಇಲ್ಲಿನ ಉದ್ಯೋಗಿಗಳು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.

ಫ್ರಾನ್ಸ್‌ನ ಕಾರ್ಮಿಕ ಕಾನೂನುಗಳ ಅನ್ವಯ, ಟ್ರೇಡ್ ಯೂನಿಯನ್‌ಗಳ ಜೊತೆ ಮಾತುಕತೆ ನಡೆಸಿ 'ಸಾಮೂಹಿಕ ಗುತ್ತಿಗೆ ಮುಕ್ತಾಯ ಪ್ರಕ್ರಿಯೆ' (RCC) ಮೂಲಕ ಈ ಉದ್ಯೋಗ ಕಡಿತವನ್ನ ಮಾಡಲಾಗುತ್ತಿದೆ. ಈ ಆಕರ್ಷಕ ಪ್ಯಾಕೇಜ್ ಒಳಗೊಂಡಿರುವ ಯೋಜನೆಯಡಿ ಸ್ವಯಂಪ್ರೇರಿತವಾಗಿ ಹೊರಹೋಗಲು ಇಚ್ಛಿಸುವ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು.

ಎಐ ರೇಸ್‌ನಲ್ಲಿ ಮೈಕ್ರೋಸಾಫ್ಟ್, ಗೂಗಲ್ ಅನ್ನು ಹಿಂದಿಕ್ಕಲು ಮೆಟಾ ಏಪ್ರಿಲ್‌ನಲ್ಲೇ ಶೇ. 10ರಷ್ಟು ಜಾಗತಿಕ ಉದ್ಯೋಗ ಕಡಿತವನ್ನ ಘೋಷಿಸಿತ್ತು, ಅದರ ಮುಂದುವರಿದ ಭಾಗವಾಗಿ ಫ್ರಾನ್ಸ್‌ನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

5 ದೇಶಗಳಲ್ಲಿ ಗೂಗಲ್ ಸ್ವಯಂ ನಿರ್ಗಮನ ಆಫರ್

ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಅತಿ ಹೆಚ್ಚು ಹಣ ವ್ಯಯಿಸುತ್ತಿರುವ ಸರ್ಚ್ ಎಂಜಿನ್ ಗೂಗಲ್, ತನ್ನ ಹೆಚ್ಚುತ್ತಿರುವ ವೆಚ್ಚವನ್ನ ಹೇಗಾದರೂ ಮಾಡಿ ನಿಯಂತ್ರಿಸಲು ಪರದಾಡುತ್ತಿದೆ. ಎಐ ಮೇಲಿನ ಈ ಭಾರಿ ಹೂಡಿಕೆಯು ವಾಲ್ ಸ್ಟ್ರೀಟ್‌ನಲ್ಲಿ ಆಲ್ಫಾಬೆಟ್ (Alphabet) ಷೇರುಗಳ ಬೆಲೆಯ ಮೇಲೂ ನಕಾರಾತ್ಮಕ ಪ್ರಭಾವ ಬೀರಿದೆ. ಹೀಗಾಗಿ ವೆಚ್ಚ ಕಡಿತಕ್ಕಾಗಿ ಜೂನ್ ತಿಂಗಳಿನಿಂದ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿರುವ ಕೆಲವು ಉದ್ಯೋಗಿಗಳಿಗೆ ಗೂಗಲ್ ಸ್ವಯಂ ನಿರ್ಗಮನ ಆಫರ್ ಅನ್ನು ವಿಸ್ತರಿಸಿದೆ.

ಕಳೆದ ವರ್ಷ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಕೆಲವು ವಿಭಾಗಗಳ ಉದ್ಯೋಗಿಗಳಿಗೆ ಈ ಯೋಜನೆಯನ್ನ ಜಾರಿಗೆ ತರಲಾಗಿತ್ತು. "ಕಂಪನಿಯ ಪ್ರಸ್ತುತ ವೇಗ, ಕಾರ್ಯವೈಖರಿ ಅಥವಾ ಭವಿಷ್ಯದಲ್ಲಿ ಕಂಪನಿಯ ಹೊಸ ನಿರ್ಧಾರಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಉದ್ಯೋಗಿಗಳಿಗೆ ಇದು ಒಂದು ಅತ್ಯುತ್ತಮ ಆಯ್ಕೆಯಾಗಿದೆ" ಎಂದು ಗೂಗಲ್‌ನ ಉನ್ನತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

60,000 ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಆಫರ್

ಮೆಟಾ ಮತ್ತು ಗೂಗಲ್ ಮಾತ್ರವಲ್ಲ, ಮತ್ತೊಂದು ಟೆಕ್ ದೈತ್ಯ ಮೈಕ್ರೋಸಾಫ್ಟ್ ಕೂಡ ಕಳೆದ ವಾರವಷ್ಟೇ ತನ್ನ ಬರೋಬ್ಬರಿ 60,000 ಉದ್ಯೋಗಿಗಳಿಗೆ ವೆಚ್ಚ ಕಡಿತದ ಭಾಗವಾಗಿ ಇಂತಹದ್ದೇ ಸ್ವಯಂ ನಿರ್ಗಮನದ ಆಫರ್ ನೀಡಿ ಅಚ್ಚರಿ ಮೂಡಿಸಿತ್ತು.

ಒಟ್ಟಾರೆಯಾಗಿ ಐಟಿ ವಲಯದ ಭವಿಷ್ಯವನ್ನ ಸ್ವಲ್ಪ ಗಮನಿಸುವುದಾದರೆ, ಭವಿಷ್ಯದ ತಂತ್ರಜ್ಞಾನವಾದ ಎಐ ಕಡೆಗೆ ಹೆಚ್ಚಿನ ಬಂಡವಾಳ ಹೂಡಲು ಟೆಕ್ ಕಂಪನಿಗಳು ತಮ್ಮ ಮಾನವ ಸಂಪನ್ಮೂಲವನ್ನು ಅನಿವಾರ್ಯವಾಗಿ ಕಡಿತಗೊಳಿಸುತ್ತಿವೆ.

ನೇರ ಲೇಆಫ್‌ಗಳಿಂದ ಉಂಟಾಗುವ ಕೆಟ್ಟ ಹೆಸರು, ಬ್ರ್ಯಾಂಡ್ ಇಮೇಜ್ ಕುಸಿತ ಮತ್ತು ಉದ್ಯೋಗಿಗಳ ಆಕ್ರೋಶವನ್ನ ತಪ್ಪಿಸಲು, ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್ ನೀಡಿ ನೌಕರರನ್ನ ಗೌರವಯುತವಾಗಿ ಬೀಳ್ಕೊಡುವ ತಂತ್ರಕ್ಕೆ ಬಹುತೇಕ ದೈತ್ಯ ಕಂಪನಿಗಳು ಮೊರೆಹೋಗಿರುವುದು ಈಗ ಸ್ಪಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+