ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ, ನೀರಿನ ಅಭಾವದತ್ತ ದಾಯಾದಿ ರಾಷ್ಟ್ರ
ಇಸ್ಲಾಮಾಬಾದ್, ಮಾರ್ಚ್. 30: ಪವಿತ್ರ ರಂಜಾನ್ ಮಾಸದಲ್ಲಿ ಆಹಾರದ ಬಿಕ್ಕಟ್ಟಿನ ಜೊತೆಗೆ ಪ್ರಸ್ತುತ ತನ್ನ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ದೇಶ ಪಾಕಿಸ್ತಾನದಲ್ಲಿ ಈಗ ಮುಂಬರುವ ಖಾರಿಫ್ ಋತುವಿನಲ್ಲಿ ಭಾರಿ ನೀರಿನ ಕೊರತೆ ಉಂಟಾಗಲಿದೆ. ಈಗಾಗಲೇ ಆಹಾರ ಕೊರತೆಯಿಂದ ಸಂಕಷ್ಟದಲ್ಲಿರುವ ನೆರೆಯ ದೇಶದ ಜನತೆ ನೀರಿಗೂ ಪರದಾಡುವಂತಾಗಲಿದೆ.
ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಾದ್ಯಂತ ಬಂದ ಭಾರೀ ಪ್ರವಾಹದಿಂದ ದೊಡ್ಡ ದೊಡ್ಡ ಭೂಪ್ರದೇಶಗಳೇ ಮುಳುಗಡೆಯಾಗಿದ್ದು, ಪ್ರವಾಹದಿಮದ ಚೇತರಿಕೊಳ್ಳಲು ಪ್ರಯತ್ನಿಸುತ್ತಿರುವ ನಾಡಿಗೆ ಆರ್ಥಿಕ ಕುಸಿತ ಮತ್ತಷ್ಟು ಪೆಟ್ಟು ನೀಡಿದೆ. ಈಗ ನೀರಿನ ಅಭಾವ ಮತ್ತೆ ಸಂಕಷ್ಟಕ್ಕೆ ನೂಕಲಿದೆ. ಈಗಾಗಲೇ ಕರಾಚಿ ಸುತ್ತಮುತ್ತ ನೀಎಇಗಾಘಿ ಜನರು ಪರದಾಡುತ್ತಿದ್ದಾರೆ.

ಪಾಕಿಸ್ತಾನದ ಡಾನ್‌ನೊಂದಿಗೆ ಮಾತನಾಡಿಎಉವ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ (ಇರ್ಸಾ) ಪ್ರಾಂತ್ಯಗಳಿಗೆ ನೀರು ವಿತರಣೆಗಾಗಿ ವಿವಾದಾತ್ಮಕ ಮೂರು ಹಂತದ ನೀರು ನಿರ್ವಹಣಾ ಕಾರ್ಯವಿಧಾನವನ್ನು ಅನುಸರಿಸಲು ಒತ್ತಾಯಿಸಲಾಗುವುದು ಎಂದು ಹೇಳಿದೆ. ಇರ್ಸಾ ತಾಂತ್ರಿಕ ಸಮಿತಿಯು ಮಾರ್ಚ್ 24 ರಂದು ಸಂಭವನೀಯ ನೀರಿನ ಕೊರತೆಯ ಕುರಿತು ಸಭೆ ನಡೆಸಿತ್ತು. ಆದರೂ, 2023 ರ ಖಾರಿಫ್‌ಗೆ ಒಟ್ಟಾರೆ ನೀರಿನ ಲಭ್ಯತೆಯ ಅಂದಾಜುಗಳನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಈಗ ಅದನ್ನು ಪರಿಶೀಲಿಸಲು ಇಂದು ಮಾರ್ಚ್ 30 ರಂದು ಸಭೆ ನಡೆಸಲು ತನ್ನ ಸಲಹಾ ಸಮಿತಿಯನ್ನು ಕರೆದಿದೆ.
ಸಂತ್ರಸ್ತರಿಗೆ ರಂಜಾನ್ ಪರಿಹಾರ ಪ್ಯಾಕೇಜ್ ಘೋಷಿಸಿದ್ದರೂ ಹಣದ ಕೊರತೆಯಿಂದ ದೇಶವು ಆಹಾರದ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ದೇಶದ ಹಲವಾರು ಭಾಗಗಳಲ್ಲಿ ಉಚಿತ ಗೋಧಿ ಹಿಟ್ಟಿಗಾಗಿ ಜನರು ಉದ್ದನೆಯ ಸರತಿ ಸಾಲಿನಲ್ಲಿರುವುದನ್ನು ಕಾಣಬಹುದು. ಉಚಿತ ಗೋಧಿ ಹಿಟ್ಟು ಪಡೆಯಲು ನಡೆದ ಜಗಳಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವಿಡಿಯೋವೊಂದರಲ್ಲಿ, ಪೇಶಾವರದ ಅನೇಕ ಪಾಕಿಸ್ತಾನಿ ಪ್ರಜೆಗಳು ಬಡವರಿಗೆ ಮೀಸಲಾದ ಗೋಧಿ ಹಿಟ್ಟನ್ನು ಸಾಗಿಸುತ್ತಿದ್ದ ಟ್ರಕ್‌ನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಉಚಿತ ಗೋಧಿ ಹಿಟ್ಟನ್ನು ತಲುಪಿಸುತ್ತಿದ್ದ ಟ್ರಕ್‌ಗೆ ಜನರು ಹತ್ತುತ್ತಿರುವುದು ಕಂಡುಬಂದಿದೆ. ವಿತರಣಾ ಕೇಂದ್ರವನ್ನು ತಲುಪುವ ಮೊದಲು ಸ್ಥಳೀಯರು ಟ್ರಕ್ ಅನ್ನು ಲೂಟಿ ಮಾಡಿದ್ದಾರೆ ಎಂದು ನಂತರದ ವರದಿಗಳು ತಿಳಿಸಿವೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಬೇಲ್‌ಔಟ್ ಪ್ಯಾಕೇಜ್ ಪಡೆಯಲು ಸರ್ಕಾರ ಹೆಣಗಾಡುತ್ತಿರುವಾಗ ಏರುತ್ತಿರುವ ಹಣದುಬ್ಬರದಿಂದ ಜನರು ತೀವ್ರ ಹೊಡೆತ ತಿಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತಮ್ಮ ಜೀವನವನ್ನೇ ಅಂತ್ಯಗೊಳಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಗೋಧಿ ಹಿಟ್ಟಿನ ಸಾರ್ವಕಾಲಿಕ ಹೆಚ್ಚಿನ ಬೆಲೆಯು ಮಾರ್ಚ್ 23 ರಂದು ಮತ್ತೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಪರಿಣಾಮವಾಗಿ ಹಣದುಬ್ಬರ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆ ಕಂಡಿದೆ. ಐಎಂಎಫ್ ನಿಂದ 1.1 ಬಿಲಿಯನ್ ಡಾಲರ್ ಸಾಲ ಪಡೆಯುವುದಕ್ಕೆ ಅದರ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಹೊಸ ತೆರಿಗೆಗಳನ್ನು ವಿಧಿಸಿದೆ. ಇದರ ಜೊತೆಗೆ ಪೆಟ್ರೋಲ್ ದರ ಏರಿಸಿರುವುದು ಹಣದುಬ್ಬರಕ್ಕೆ ಕಾರಣವಾಗಿದೆ.
ಕಳೆದ ವಾರ ಶುಕ್ರವಾರದಿಂದ ಭಾನುವಾರದವರೆಗೆ ದುಬಾರಿ ಹಣ್ಣುಗಳನ್ನು ಖರೀದಿಸುವುದನ್ನು ದೇಶದ ಜನರು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಶೋಷಣೆಯ ವಿರುದ್ಧ ನಿಲುವು ತೆಗೆದುಕೊಳ್ಳುವ ಇಚ್ಛಾಶಕ್ತಿಯನ್ನು ಸಾರ್ವಜನಿಕರು ಹೊಂದಿದ್ದಾರೆಂದು ಪ್ರದರ್ಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
-
Water Tank Vastu: ಮನೆಯಲ್ಲಿ ನೀರಿನ ಟ್ಯಾಂಕ್ ಇದೆಯೇ? ವಾಸ್ತು ನಿಯಮಗಳು ತಿಳಿದುಕೊಳ್ಳಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications