Science Alert: ಅಮೆರಿಕಾದಾದ್ಯಂತ ಭೂಮಿ ಮೇಲೆ ಬೃಹತ್ ಬಿರುಕು: ವಿಜ್ಞಾನಿಗಳ ಎಚ್ಚರಿಕೆ!
ಅಮೆರಿಕಾದಾದ್ಯಂತ ಭೂಮಿ ಮೇಲೆ ದೈತ್ಯ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ದೇಶದ ನೈಋತ್ಯ ಭಾಗಗಳಲ್ಲಿ ನೆಲದಲ್ಲಿ ಬೃಹತ್ ಗಾತ್ರದ ಬಿರುಕು ಕಾಣಿಸಲು ಪ್ರಾರಂಭಿಸಿರುವುದರಿಂದ ಯುನೈಟೆಡ್ ಸ್ಟೇಟ್ಸ್ ತೀವ್ರ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಅತಿಯಾದ ಅಂತರ್ಜಲ ಪಂಪಿಂಗ್‌ನಿಂದಾಗಿ ಅಮೆರಿಕಾ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಫಿಶರ್ಸ್ ಎಂದು ಕರೆಯಲ್ಪಡುವ ಈ ದೈತ್ಯ ಬಿರುಕುಗಳು ಅರಿಜೋನಾ, ಉತಾಹ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗುರುತಿಸಲ್ಪಟ್ಟಿವೆ. ಮಾತ್ರವಲ್ಲದೆ ಇವು ಮೈಲುಗಳವರೆಗೆ ವಿಸ್ತರಿಸಿವೆ. ಇದು ಪರಿಸರ ನಾಶದ ಮುನ್ಸೂಚನೆಯನ್ನು ತೋರಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕುಡಿಯುವ ನೀರಿನಲ್ಲಿ ಅರ್ಧದಷ್ಟು ನೀರನ್ನು ಭೂಮಿಯಿಂದ ಪಂಪಿಂಗ್ ಮಾಡಲಾಗುತ್ತಿದೆ. ಜಾಗತಿಕ ನೀರಾವರಿಯ ಸುಮಾರು 40% ಅನ್ನು ಒದಗಿಸುವ ಅಂತರ್ಜಲ ಭೂಮಿಯಲ್ಲಿ ನೈಸರ್ಗಿಕವಾಗಿ ಮರುಪೂರಣಗೊಳಿಸುವುದಕ್ಕಿಂತ ವೇಗವಾಗಿ ಪಂಪ್ ಮಾಡಲಾಗುತ್ತಿದೆ. ಇದರಿಂದ ಭೂಮಿ ಬಾಯಿ ತೆರೆದುಕೊಳ್ಳುತ್ತಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆಯ ಸಂಶೋಧಕ ಜೋಸೆಫ್ ಕುಕ್ ಪ್ರಕಾರ, ಈ ಬೃಹತ್ ಬಿರುಕುಗಳು ಭೂಮಿ ಕುಸಿಯಲು ಕಾರಣವಾಗುತ್ತವೆ. ಬಿರುಕುಗಳು ನೈಸರ್ಗಿಕವಾಗಿ ಸಂಭವಿಸುವ ವಿಷಯವಲ್ಲ. ಇದು ನಮ್ಮಿಂದಾದ ಸಮಸ್ಯೆ ಎಂದು ಕುಕ್ ಹೇಳಿದರು.
ಪರ್ವತಗಳ ನಡುವಿನ ಜಲಾನಯನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಬಿರುಕುಗಳು ಮನೆಗಳು, ರಸ್ತೆಗಳು, ಕಾಲುವೆಗಳು ಮತ್ತು ಅಣೆಕಟ್ಟುಗಳಲ್ಲಿ ಅನಿರೀಕ್ಷಿತವಾಗಿ ಕಂಡು ಬಂದಿದ್ದು ಬೆದರಿಕೆಯನ್ನುಂಟುಮಾಡುತ್ತಿವೆ. ಇದು ಮುಂದುವರಿದರೆ ಅಪಾರ ಆಸ್ತಿ ನಾಶವಾಗಬಹುದು. ಜಾನುವಾರುಗಳು ಮತ್ತು ಮಾನವ ಜೀವನ ಕಳೆದುಕೊಳ್ಳಬಹುದು.

ಈ ಬಗ್ಗೆ ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆ ಮಾಡುತ್ತಿದೆ. ಅರಿಝೋನಾವು ಈ ಸಮಸ್ಯೆಯ ಬಗ್ಗೆ ಬಹಳ ಸಮಯದಿಂದ ಅರಿತಿದೆ. 2002 ರಿಂದ ಅದನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪ್ರಸ್ತುತ ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ 169 ಮೈಲುಗಳಷ್ಟು ಬಿರುಕುಗಳಿವೆ.
ಅಮೆರಿಕಾದಲ್ಲಿ ಸುಮಾರು ಶೇ.90ರಷ್ಟು ನೀರನ್ನು ಪೂರೈಸುವ ಜಲಚರಗಳು ಕ್ಷೀಣಿಸುತ್ತಿವೆ. ಅವು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ 40 ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಸೈಟ್‌ಗಳು ಗಣನೀಯವಾಗಿ ಕುಸಿದಿವೆ. ಪ್ರತಿ ಹತ್ತು ಸೈಟ್‌ಗಳಲ್ಲಿ ನಾಲ್ಕು ಕಳೆದ ದಶಕದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿವೆ.
ಕುಕ್ ಪ್ರಕಾರ, ಅರಿಜೋನಾದ ಕೆಲವು ಸೈಟ್‌ಗಳಲ್ಲಿ ವಿಪರೀತ ನೀರಿನ ಬಳಕೆಯಿಂದಾಗಿ ಈಗಾಗಲೇ ಅಳಿವಿನ ಅಂಚಿಗೆ ತಲುಪಿವೆ. ಇವುಗಳಲ್ಲಿ ಮಳೆನೀರು ಭೂಗತ ಜಲಚರಗಳನ್ನು ಮರುಪೂರಣಗೊಳಿಸಲು ಸಾಕಷ್ಟು ಸಮಯವನ್ನು ನೀಡುತ್ತಿಲ್ಲ. ಕೆಲವು ಜಲಾನಯನ ಪ್ರದೇಶಗಳು ಆ ಹಂತವನ್ನು ಮೀರಿವೆ ಎಂದು ಕುಕ್ ಸೇರಿಸಲಾಗಿದೆ.
ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಜಾಗತಿಕ ತಾಪಮಾನವು ಹೆಚ್ಚಾದಂತೆ ನದಿಗಳು ಬತ್ತುತ್ತಿವೆ. ಸಿಹಿನೀರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿದ್ದಾರೆ. ನೈಋತ್ಯದಾದ್ಯಂತ ರೈತರಿಗೆ ಪ್ರಮುಖ ಸಿಹಿನೀರಿನ ಮೂಲವಾದ ಕೊಲೊರಾಡೋ ನದಿಯು ಈಗಾಗಲೇ 2000 ರಿಂದ ಸುಮಾರು 20% ರಷ್ಟು ಬತ್ತಿದೆ.
ಇದನ್ನು ತಡೆಯಲು ತಕ್ಷಣ ಅಂತರ್ಜಲ ಪಂಪಿಂಗ್ ನಿಲ್ಲಿಸಬೇಕು. ಆದರೆ ಸ್ಥಳೀಯ ಸರ್ಕಾರ ತಕ್ಷಣಕ್ಕೆ ಇಂತಹ ಯಾವುದೇ ನಿಯಮಗಳನ್ನು ಹೊಂದಿಲ್ಲ. ಪ್ರತ್ಯೇಕ ರಾಜ್ಯಗಳು ಬೇರೆ ಬೇರೆ ನಿಯಮಗಳನ್ನು ಹೊಂದಿವೆ. ಉದಾಹರಣೆಗೆ, ಅರಿಝೋನಾ ಐತಿಹಾಸಿಕವಾಗಿ ಅನಿಯಂತ್ರಿತ ಅಂತರ್ಜಲ ಬಳಕೆಯನ್ನು ಹೊಂದಿದ್ದು, ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
ಅಭ್ಯಾಸಗಳು ಬದಲಾಗದಿದ್ದರೆ ಮತ್ತು ಭೂಗತ ಜಲಚರಗಳು ಸ್ವಾಭಾವಿಕವಾಗಿ ಮರುಪೂರಣಗೊಳ್ಳಲು ಅನುಮತಿಸದಿದ್ದರೆ, ಈ ಬಿರುಕುಗಳು ಬೆಳೆಯುತ್ತಲೇ ಇರುತ್ತವೆ ಎಂದು ಕುಕ್ ಎಚ್ಚರಿಸಿದ್ದಾರೆ. "ನೈಸರ್ಗಿಕವಾಗಿ ರೀಚಾರ್ಜ್ ಮಾಡುವುದಕ್ಕಿಂತ ಹೆಚ್ಚಿನದನ್ನು ನಾವು ಬಳಸುತ್ತಿರುವವರೆಗೆ, ನಾವು ಈ ಸಮಸ್ಯೆಯನ್ನು ಎದುರಿಸುತ್ತೇವೆ" ಎಂದು ಅವರು ಎಚ್ಚರಿಸಿದರು.












Click it and Unblock the Notifications