• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರ ಕದನದ ನಡುವೆ ತವರು ಕಾಣಲಾಗದ ಮಹಿಳೆಯರು

|
Google Oneindia Kannada News

ಪಾಕ್ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಕಾಶ್ಮೀರ ಭಾಗಕ್ಕೆ ಮದುವೆಯಾಗಿ ಬಂದ ಮಹಿಳೆಯರು ತವರು ಮನೆಗೆ ಹೋಗಲಾಗದೆ ಪೀಕಲಾಟದಲ್ಲಿ ಸಿಲುಕಿಕೊಂಡಿದ್ದಾರೆ.
ಉಭಯ ದೇಶಗಳ ನಡುವಿನ ಗಡಿಯಲ್ಲಿ ಪರಿಸ್ಥಿತಿ ಪದೇ ಪದೇ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ತವರು ಮನೆಗೂ ಹೋಗಲಾಗದೆ ಪರಿಸ್ಥಿತಿಗೆ ಕಾಶ್ಮೀರ ಭಾಗದಲ್ಲಿನ ಕೆಲ ಮಹಿಳೆಯರು ಸಿಲುಕಿಕೊಂಡಿದ್ದಾರೆ.

ಇದಕ್ಕೆ ಅವರ ಕುಟುಂಬಕ್ಕೆ ಇರುವ ಕೆಲವು ಉಗ್ರ ಚಟುವಟಿಕೆಗಳ ಇತಿಹಾಸವು ಕಾರಣವಾಗಿದೆ. ಅಂಬ್ರೀನ್ ರೆಹಮಾನ್ ಹುಟ್ಟಿದ್ದು ಕಾಶ್ಮೀರದ ಮುಜಾಫರಾಬಾದ್‌ನಲ್ಲಿ, ಅಂಬ್ರೀನ್ ಎಂಬುವವರು ಅಲ್ಲಿಗೆ ಹೋಗಲು ಹವಣಿಸುತ್ತಿದ್ದಾರೆ ಆದರೆ ಎಂಟು ವರ್ಷಗಳ ನಂತರ 37ವರ್ಷದ ಕಾಶ್ಮೀರದ ಕುಪ್ವಾರದಲ್ಲಿರುವ ಮನೆಯನ್ನು ತಲುಪಲು ಗಡಿ ದಾಟಿ ಹೋಗುವುದು ಅಷ್ಟು ಸುಲಭದ ಮಾತಲ್ಲ.

ಪಂಜರದಲ್ಲಿರುವ ಪಕ್ಷಿಯಂತಹ ಸ್ಥಿತಿ ನನ್ನದು: ಕಳೆದ 7 ವರ್ಷಗಳಿಂದ ರೆಹಮಾನ್ ಕುಪ್ವಾರದ ಡ್ರುಗ್‌ಮುಲ್ಲಾದಲ್ಲಿರುವ ತನ್ನ ಮನೆಯ ಮನೆಯ ಕಿಟಕಿಯನ್ನು ತೆರೆದು ಎತ್ತರದ ಪರ್ವತಗಳನ್ನು ನೋಡುತ್ತಾ, ನಾನು ನನ್ನವರನ್ನು ಸೇರುವುದು ಯಾವಾಗ ಎಂದು ಕೊರಗುತ್ತಲೇ ಇದ್ದಾರೆ.

Married To a Former Kashmir Militant, Pakistani Women Are Now In Trouble

ಕೇವಲ ನಾನು ಮಾತ್ರ ಇಲ್ಲಿದ್ದೇನೆ ನನ್ನ ಮನಸ್ಸೆಲ್ಲವೂ ತವರು ಮನೆಯಲ್ಲಿಯೇ ಇದೆ ಎನ್ನುತ್ತಾರೆ ರೆಹಮಾನ್, ನಾನು ಪಂಜರದಲ್ಲಿರುವ ಪಕ್ಷಿಯಂತಾಗಿದ್ದೇನೆ, ಹಾರಲು ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

2013ರಲ್ಲಿ ಭಾರತ ಆಕ್ರಮಿತ ಕಾಶ್ಮೀರಕ್ಕೆ ಬಂದ ಬಳಿಕ ಹಿಂದುರುಗಿ ಊರಿಗೆ ಹೋಗಿಲ್ಲ, ಅವರು ಇದೀಗ ಪತಿ ಅಬ್ದುಲ್ ಮಜೀದ್ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.

1990ರಲ್ಲಿ ಹಲವಾರು ಮಂದಿ ಕಾಶ್ಮೀರಿಗಳು ಕಾಶ್ಮೀರವನ್ನು ತೊರೆದು ಪಾಕಿಸ್ತಾನದ ಕ್ಯಾಂಪ್‌ಗಳನ್ನು ಸೇರಿಕೊಂಡಿದ್ದರು. ಅವರಿಗೆ ಭಾರತೀಯ ಸೇನೆ ವಿರುದ್ಧ ಹೋರಾಡುವುದು ಹೇಗೆ ಎನ್ನುವ ತರಬೇತಿ ನೀಡಲಾಗುತ್ತಿತ್ತು ಎನ್ನುವ ಮಾತೂ ಇದೆ.

ಅದೇ ರೀತಿ ಅಹಂಗರ್ ಕೂಡ 1999ರಲ್ಲಿ ಕಾಶ್ಮೀರವನ್ನು ತೊರೆದು ಪಾಕಿಸ್ತಾನದ ಕಡೆಗೆ ತೆರಳಿದ್ದರು. ಮುಜಾಫರಾಬಾದ್‌ನಲ್ಲಿರುವ ತನ್ನ ಸಂಬಂಧಿಕರೊಂದಿಗೆ ನೆಲೆಸಿ ಟೈಲರ್ ಆಗಿ ಕರ್ತವ್ಯ ಮುಂದುವರೆಸಿದ್ದರು.

2002ರಲ್ಲಿ ರೆಹಮಾನ್ ಅವರನ್ನು ಮದುವೆಯಾದರು, ಬಳಿಕ ಅವರು ಭಾರತಕ್ಕೆ ಬಂದು ನೆಲೆಸಿದರು. 2010ರಲ್ಲಿ ಕಾಶ್ಮೀರ ಸರ್ಕಾರವು ಅಮ್ನೆಸ್ಟಿ ಯೋಜನೆ ಘೋಷಿಸಿದಾಗ ಅವಕಾಶ ದೊರೆತಿತ್ತು. ಈ ನೀತಿ ಪ್ರಕಾರ ಜವನರಿ 1 1989 ಮತ್ತು ಡಿಸೆಂಬರ್ 312009ರ ನಡುವೆ ಪಾಕಿಸ್ತಾನಕ್ಕೆ ಹೋದವರು ಮತ್ತು ಅವರ ಕುಟುಂಬಗಳು ಪುನರ್ವಸತಿಗೆ ಅರ್ಹರಾಗಿದ್ದಾರೆ ಎಂದು ಹೇಳಲಾಗಿತ್ತು.

ಹಿಂದಿರುಗುವವರು ವಾಘಾ, ಅತ್ತಾರಿ, ಪಂಜಾಬ್, ಪಶ್ಚಿಮ ಭಾರತ, ಸಲಾಮಾಬಾದ್ ಮತ್ತು ಚಕ್ಕನ್ ಡಾ ಬಾಗ್ ಗಡಿ ಮೂಲಕ ನವದೆಹಲಿಗೆ ಪ್ರವೇಶಿಸಬಹುದಿತ್ತು.
ಆದರೆ ಸಾಕಷ್ಟು ಮಂದಿ ಗೊತ್ತುಪಡಿಸಿರುವ ಈ ಮಾರ್ಗದ ಮೂಲಕ ಬರಲೇ ಇಲ್ಲ. ಹೀಗಾಗಿ ಕೆಲವರನ್ನು ಬಂಧಿಸಲಾಯಿತು.

ಭಾರತ ನಿಯಂತ್ರಿತ ಕಾಶ್ಮೀರದಲ್ಲಿರುವ ತನ್ನ ಮನೆಗೆ ಮರಳಿ ಕೆಲವು ತಿಂಗಳುಗಳಲ್ಲಿ ಮುಜಾಫರಾಬಾದ್‌ಗೆ ಹಿಂದಿರುಗುವುದಾಗಿ ಪತಿ ಭರವಸೆ ನೀಡಿದ್ದರು.
ಐವರು ಕುಟುಂಬವು ಇಸ್ಲಾಮಾಬಾದ್‌ನಿಂದ ಕಟ್ಮಂಡುವಿಗೆ ತಲುಪಿತು. ಭಾರತವನ್ನು ದಾಟಿ ಕುಪ್ವಾರಾದಲ್ಲಿರುವ ಡೆಮುರಾ ಗ್ರಾಮವನ್ನು ರೈಲುಗಳು ಹಾಗೂ ಬಸ್‌ಗಳನ್ನು ಹೀಡಿದು ಹೇಗೋ ತಲುಪಿದರು.

ಮನೆಗೆ ಬಂದ ಬಳಿಕ ಅಂಹಗಾರ್ ಅವರ ಪಾಕಿಸ್ತಾನದ ಪಾಸ್‌ಪೋರ್ಟ್‌ಗಳು ಸೇರಿದಂತೆ ಹಲವು ಪ್ರಯಾಣದ ದಾಖಲೆಗಳನ್ನು ನಾಶಪಡಿಸಿದ್ದರು. 2019ರಲ್ಲಿ ತಂದೆ ಮೃತಪಟ್ಟಾಗ ಕೂಡ ಮುಜಾಫರಾಬಾದ್‌ಗೆ ತೆರಳಲು ಸಾಧ್ಯವಾಗಿಲ್ಲ, ಕೇವಲ ಫೋನ್ ಮೂಲಕ ಮನೆಯವರ ಬಳಿ ಮಾತನಾಡುತ್ತಿದ್ದೇನೆ.

ಇಲ್ಲಿಗೆ ಬಂದ ಬಳಿಕ ನನ್ನ ಪಾಕಿಸ್ತಾನದ ಪಾಸ್‌ಪೋರ್ಟ್‌ನ್ನು ಪತಿ ನಾಶಪಡಿಸಿದ್ದರು, ಆದರೆ ನನಗೆ ಭಾರತದ ಪೌರತ್ವ ಇಲ್ಲದ ಕಾರಣ ಇಲ್ಲಿಯ ಪಾಸ್‌ಪೋರ್ಟ್ ಕೂಡ ಸಿಗಲಿಲ್ಲ.

ಪತಿ ಮಾಡಿದ ಈ ಕೆಲಸದಿಂದ ನಮ್ಮ ಮಕ್ಕಳು ಶಿಕ್ಷೆ ಅನುಭವಿಸುವಂತಾದರೆ ಎನ್ನುವ ಭಯ ಕಾಡುತ್ತಿದೆ. ಪತಿಯನ್ನು ಈಗಲೂ ಮಾಜಿ ಉಗ್ರ ಎಂದೇ ಕರೆಯಲಾಗುತ್ತದೆ. ಹಾಗೂ ನನ್ನನ್ನು ಪಾಕಿಸ್ತಾನಿ ಹೊರಗಿನವರು ಎಂದೇ ಭಾವಿಸಲಾಗುತ್ತಿದೆ. ರೆಹಮಾನ್ ಒಬ್ಬರೇ ಅಲ್ಲ 370 ಮಂದಿ ಮಹಿಳೆಯರ ಪೈಕಿ ಅವರು ಕೂಡ ಒಬ್ಬರು.

English summary
TIndia-controlled Kashmir Kupwara – Ambreen Rehman is eager to visit her birthplace: her maternal grandparents’ home in Muzaffarabad, the capital of Kashmir, under the management of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X