ಕಂದಕಕ್ಕೆ ಉರುಳಿದ ಬಸ್ 20ಕ್ಕೂ ಅಧಿಕ ಮಂದಿ ಸಾವು
ಕಠ್ಮಂಡು, ಡಿ.8: ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಕಂದಕಕ್ಕೆ ಬಸ್ ಉರುಳಿ ಬಿದ್ದು, 20 ಮಂದಿ ಮೃತಪಟ್ಟಿದ್ದು, ಇತರ 50 ಜನ ಗಾಯಗೊಂಡಿದ್ದಾರುವ ದುರ್ಘಟನೆ ನಡೆದಿದೆ.
ಪೊಖಾರಾಕಾಡ ಎಂಬ ಗ್ರಾಮದ ಬಳಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಬಿದ್ದು, ಅಲ್ಲಿಂದ ಸುಮಾರು ಎರಡು ಸಾವಿರ ಅಡಿಗಳ ಪ್ರಪಾತಕ್ಕೆ ಉರುಳಿ ಹೋಗಿದೆ. ಸುಮಾರು 600 ಮೀಟರ್ ಗೂ ಅಧಿಕ ಆಳದ ಕದಂಕಕ್ಕೆ ಉರುಳಿದೆ ಇದುವರೆಗೆ 15 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ, ಬಹಾದೂರ್ ಶಾಹಿ ತಿಳಿಸಿದ್ದಾರೆ. [ನೇಪಾಳದಲ್ಲಿ ಭಾರತದ ಕರೆನ್ಸಿ ಧೈರ್ಯವಾಗಿ ಬಳಸಿ]

ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 400ಕಿಮೀ ದೂರದ ಗುಡ್ಡಗಾಡು ಪ್ರದೇಶದ ಇಕ್ಕಟ್ಟಾದ ಕಣಿವೆ ರಸ್ತೆಯಲ್ಲಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. 38 ಸೀಟುಗಳಿರುವ ಬಸ್ ನಲ್ಲಿ 67 ಜನರು ಪ್ರಯಾಣಿಕರಿದ್ದರು. ಗಾಯಗೊಂಡವರಲ್ಲಿ 12ಕ್ಕೂ ಅಧಿಕ ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಭಾರತದ ಹಿಂದು ಯಾತ್ರಿಗಳ ದುರ್ಮರಣ]
ಕಳೆದ ಜೂನ್ ತಿಂಗಳಿನಲ್ಲಿ ನೇಪಾಳದ ಪರ್ವತ ಪ್ರದೇಶದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಬೆಟ್ಟದ ಮೇಲಿಂದ ಉರುಳಿ ನದಿಗೆ ಬಿದ್ದು 17ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ದುರ್ಘಟನೆ ನಡೆದಿತ್ತು. ಮೃತರಲ್ಲಿ ನಾಲ್ವರು ಭಾರತೀಯ ಯಾತ್ರಿಗಳು ಸೇರಿದ್ದರು.












Click it and Unblock the Notifications