ಮ್ಯಾಚ್ ನೋಡೋಕೆ ನಾನು ಬಂದೇ ಬರ್ತೀನಿ: ವಿಜಯ್ ಮಲ್ಯ

ಭಾರತ- ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ತೆರಳಿದ್ದನ್ನು ಮಾಧ್ಯಮಗಳು ಹೆಚ್ಚಾಗಿ ಬಿಂಬಿಸಿದ್ದಕ್ಕೆ ವಿಜಯ್ ಮಲ್ಯ ಉತ್ತರಿಸಿದ್ದು, ಚಾಂಪಿಯನ್ಸ್ ಟ್ರೋಫಿಯ ಭಾರತದ ಪಂದ್ಯಗಳಿಗೆ ಹೋಗುವುದಾಗಿ

ಲಂಡನ್, ಜೂನ್ 6: ''ಮೊನ್ನೆ ಭಾರತ- ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯವನ್ನು ನೋಡಲು ಬಂದಿದ್ದೆ. ನಾನು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿ. ಭಾರತದ ಪಂದ್ಯಗಳನ್ನು ನೋಡಲು, ನಮ್ಮ ತಂಡವನ್ನು ಹುರಿದುಂಬಿಸಲು ನಾನು ಬಂದೇ ಬರುತ್ತೇನೆ'' - ಇವು ಮದ್ಯದ ದೊರೆ ವಿಜಯ್ ಮಲ್ಯ ಅವರ ಮಾತು.

ಕಾರಣ: ಭಾರತ- ಪಾಕಿಸ್ತಾನ ಪಂದ್ಯದ ವೇಳೆ ಅವರು ಗ್ಯಾಲರಿಯಲ್ಲಿ ಕೂತಿದ್ದು, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಜತೆ ಮಾತನಾಡುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಮಾಧ್ಯಮಗಳಲ್ಲೂ ಅದು ಚರ್ಚೆಗೆ ಕಾರಣವಾಗಿದ್ದು. ಭಾರತೀಯ ಬ್ಯಾಂಕುಗಳಿಗೆ ಕೋಟ್ಯಾಂತರ ರು. ಸಾಲ ಬಾಕಿ ಉಳಿಸಿಕೊಂಡು ಲಂಡನ್ ನಲ್ಲಿ ಅವಿತಿರುವ ಮಲ್ಯ, ಅಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿರುವ ಬಗ್ಗೆ ಚರ್ಚೆ.

Mallya's reaction regarding his presence in India- Pakistan Match in Champions Trophy

ಸ್ಪಷ್ಟನೆ: ತಮ್ಮ ಫೋಟೋಗಳು ವೈರಲ್ ಆಗಿ, ತಮ್ಮ ಬಗ್ಗೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಲ್ಯ, ''ನಾನು ಭಾರತ ತಂಡದ ಅಪ್ಪಟ ಅಭಿಮಾನಿ. ಚಾಂಪಿಯನ್ಸ್ ಟ್ರೋಫಿ ಲಂಡನ್ ನಲ್ಲೇ ನಡೆಯುತ್ತಿರುವುದರಿಂದ ಭಾರತ ತಂಡದ ಪಂದ್ಯಗಳನ್ನು ನೋಡಲು ನಾನು ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ? ಮಾಧ್ಯಮಗಳು ಇದನ್ನು ಸುಮ್ಮನೇ ಗಂಭೀರ ಸುದ್ದಿಯೆಂಬಂತೆ ಬಿತ್ತರಿಸಿವೆ'' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+