ಥೂ ಹೋಗಪ್ಪ.. ಮಾಲ್ಡೀವ್ಸ್ ಅಧ್ಯಕ್ಷನಿಗೆ ಈ ಜನ್ಮದಲ್ಲಿ ಬುದ್ಧಿ ಬರಲ್ಲ!
ಭಾರತದ ಜೊತೆ ಮಾಲ್ಡೀವ್ಸ್ ಅಧ್ಯಕ್ಷನ ಕಿರಿಕ್ ಸರದಿ ಮುಂದುವರಿದಿದ್ದು, ಈ ಬುದ್ದಿಗೇಡಿ ರಾಜಕೀಯ ನಾಯಕನಿಗೆ ಬುದ್ಧಿ ಬರುವಂತೆ ಕಾಣ್ತಿಲ್ಲ. ಮಾಲ್ದೀವ್ಸ್ ದೇಶದ ಹೊಸ ಅಧ್ಯಕ್ಷನಾಗಿ ಮೊಹಮ್ಮದ್ ಮುಯಿಝ ಅವರು ಅಧಿಕಾರಕ್ಕೆ ಬಂದ ನಂತರ ಭಾರಿ ಕಿರಿಕ್ ನಡೆಯುತ್ತಿದೆ. ಮೊನ್ನೆ ಮೊನ್ನೆ ದಾರಿಗೆ ಬಂದಂತೆ ನಟಿಸಿದ್ದ ಈ ಪುಣ್ಯಾತ್ಮ ಈಗ ಮತ್ತೆ ಹೊಸದಾಗಿ ಕಿರಿ, ಕಿರಿ ಕಿರಿಕ್ ಶುರು ಮಾಡಿದ್ದಾನೆ.
ಹೌದು ಮಾಲ್ಡೀವ್ಸ್ ಅನ್ನೋ ಪುಟ್ಟ ದ್ವೀಪ ರಾಷ್ಟ್ರಕ್ಕೆ ಭಾರತ ಇಲ್ಲದೆ ಬದುಕೇ ಇಲ್ಲವೆಂದು ಹೇಳಬಹುದು. ಯಾಕಂದ್ರೆ ಈ ಮಾಲ್ಡೀವ್ಸ್ ಬದುಕಿ ಉಳಿದಿದ್ದೇ ಭಾರತ ಎಂಬ, ಹೆಮ್ಮೆಯ ದೇಶದಿಂದ. ಭಾರತದಿಂದ ಸಿಗುವ ಸಹಾಯದಲ್ಲೇ ಅಂದ್ರೆ ಭಾರತ ಹಾಕಿದ ಬಿಕ್ಷೆಯಿಂದಲೇ ಮಾಲ್ಡೀವ್ಸ್ ಬದುಕಿದೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ಸುಖಾಸುಮ್ಮನೆ ಭಾರತದ ಜೊತೆ ಕಿರಿಕ್ ತೆಗೆದು, ಮತ್ತೆ ಮತ್ತೆ ಮಾನ ಮರ್ಯಾದಿ ಕಳೆದುಕೊಳ್ಳುತ್ತಿರುವ ಮಾಲ್ಡೀವ್ಸ್ ಅಧ್ಯಕ್ಷ ಹೇಳಿರುವುದು ಏನು ಗೊತ್ತಾ? ಮಾಲ್ಡೀವ್ಸ್ ಅಧ್ಯಕ್ಷನ ಹೊಸ ಕಿತಾಪತಿ ಏನು? ಮುಂದೆ ಓದಿ.

ಹಿಂದೂ ಮಹಾಸಾಗರದ ಮೇಲೆ ಕಣ್ಣು?
ಅಷ್ಟಕ್ಕೂ, ಭಾರತದ ಸೈನಿಕರಿಗೆ ತನ್ನ ದೇಶದ ನೆಲದಲ್ಲಿ ಇರಲು ಬಿಡಲ್ಲ ಎಂದಿದ್ದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ ಈಗ ಬೇರೆಯದ್ದೇ ಕಿರಿಕ್ ಶುರು ಮಾಡಿದ್ದಾರೆ. ಹಿಂದೂ ಮಹಾಸಾಗರದ ಮೇಲೆ ಮಾಲ್ಡೀವ್ಸ್ ತನ್ನ ಏಕಸ್ವಾಮ್ಯತೆ ಪ್ರತಿಪಾದನೆ ಮಾಡುವಾಗಲೇ ಭಾರತ ವಿರೋಧಿ ನಿಲುವನ್ನ ತಳೆಯುತ್ತಿದೆ. ಈಗ ಜಲರಾಶಿ ಸಮೀಕ್ಷೆಗೆ ಭಾರತದ ಜೊತೆಗಿನ ಒಪ್ಪಂದ ಮುಂದುವರಿಸಲ್ಲ ಅಂತಾ ಹೇಳಿದೆ ಮಾಲ್ಡೀವ್ಸ್. ಇಷ್ಟೇ ಅಲ್ಲದೆ ಈ ಸಮೀಕ್ಷೆಗೆ ಅಗತ್ಯ ಇರುವ ಎಲ್ಲ ಸಾಧನ & ಪರಿಕರಗಳನ್ನು ತಾನೇ ಖರೀದಿಸುವ ಯೋಜನೆಯನ್ನು ಮಾಲ್ಡೀವ್ಸ್ ಸರ್ಕಾರವು ಹಾಕಿಕೊಂಡಿದೆ ಎನ್ನಲಾಗಿದೆ.
ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ..
ಈ ಮಾಲ್ಡೀವ್ಸ್ ಕಥೆ ಹೆಂಗಾಗಿದೆ ಅಂದ್ರೆ, ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಹೂ ಬೇಕು ಎನ್ನುವಂತಾಗಿದೆ. ಇದೇ ಕಾರಣಕ್ಕೆ ಭಾರತವನ್ನು ದೂರ ಇಡುತ್ತಿದೆ. ಈ ಮೂಲಕ, ಬೇರೆಯವರ ಮಾತು ಕೇಳಿ ಭಾರತದ ಜೊತೆಗಿನ ಸಂಬಂಧ ಹಾಳು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅಂದಹಾಗೆ ವಿಶೇಷ ಹಣಕಾಸು ವಲಯವನ್ನು ನಿಯಂತ್ರಿಸಲು ಮಾಲ್ದೀವ್ಸ್ ನೀರಿನ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸುವ ವ್ಯವಸ್ಥೆಯನ್ನು ಸ್ಥಾಪಿಸಲು ಮಾಲ್ಡೀವ್ಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ತಿಳಿಸಿದ್ದಾರೆ.
ಚೀನಾಗೆ ಜೈ ಎಂದ ಮಾಲ್ಡೀವ್ಸ್?
ಭಾರತ & ಮಾಲ್ಡೀವ್ಸ್ ಸಂಬಂಧ ಹದಗೆಟ್ಟ ಈ ಸಮಯದಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಮತ್ತೊಂದು ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೇ ಮುಯಿಝು ಚೀನಾ ಪರ ಒಲವಿರುವ ನಾಯಕ ಎನಿಸಿಕೊಂಡಿದ್ದಾರೆ. ಹೀಗಿದ್ದಾಗಲೇ ಭಾರತ ಮತ್ತು ಮಾಲ್ಡೀವ್ಸ್‌ನ ಸಂಬಂಧ ಮತ್ತಷ್ಟು ಹಳಸಿ ಹೋಗುತ್ತಿದೆ. ಇದೆಲ್ಲಾ ಯಾವಾಗ ಸರಿಹೋಗುತ್ತೆ? ಅಂತಲೂ ಚರ್ಚೆ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರತ & ಮಾಲ್ಡೀವ್ಸ್ ವಿಚಾರ ಈಗ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.

ಭಾರತ ಸೇನೆ ಹೊರಗೆ ಬರುತ್ತಾ?
ಮಾಲ್ಡೀವ್ಸ್ ಈಗಾಗಲೇ ಭಾರತ ವಿರೋಧ ಕಟ್ಟಿಕೊಂಡು ಸಮಸ್ಯೆನ ಎದುರಿಸುತ್ತಿದೆ. ಇಷ್ಟಾದ್ರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಈಗ ಮತ್ತೆ ಭಾರತ ವಿರುದ್ಧ ಮಾತನಾಡಿರುವ, ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝ ಆ ದೇಶಕ್ಕೆ ಮತ್ತಷ್ಟು ಸಂಕಷ್ಟ ತರುತ್ತಿದ್ದಾರೆ. ಈಗಾಗಲೇ ಮಾಲ್ದೀವ್ಸ್‌ನಿಂದ ಮಾರ್ಚ್ 15ರ ಒಳಗಾಗಿ ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹಿಸಲಾಗಿದೆ. ಕೆಲ ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರವನ್ನ ಸ್ವೀಕರಿಸಿದ ತಕ್ಷಣ ಮುಯಿಝು ಈ ಪ್ರಸ್ತಾಪವನ್ನ ಇಟ್ಟಿದ್ದರು. ಈಗ ಮನಸ್ಸಿಗೆ ಬಂದಂತೆ ಮಾತನಾಡುತ್ತಾ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.












Click it and Unblock the Notifications