ಉಕ್ರೇನ್-ರಷ್ಯಾ ಯುದ್ಧ: ಸುತ್ತಮುತ್ತಲಿನ ಪ್ರಮುಖ ಬೆಳವಣಿಗೆಗಳೇನು?
ಕೀವ್, ಮಾರ್ಚ್ 5: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ವಿಕೋಪಕ್ಕೆ ತಿರುಗಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಯಿಂದ ಉಕ್ರೇನ್ ನಗರಗಳು ಅಕ್ಷರಶಃ ನಲುಗಿ ಹೋಗಿವೆ. ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡ ನಂತರ ಪಶ್ಚಿಮದ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವು 10ನೇ ದಿನಕ್ಕೆ ಕಾಲಿಟ್ಟಿದೆ. ನಿರಂತರ ದಾಳಿಯಿಂದ ಸಾವು-ನೋವುಗಳ ಪ್ರಮಾಣ ಹೆಚ್ಚುವ ಆತಂಕ ಮೂಡಿದೆ. ಇದರ ಮಧ್ಯೆ ಉಕ್ರೇನ್‌ನ ಮರಿಯುಪೋಲ್ ಮತ್ತು ವೊಲ್ನೋವಾಖಾ ಪ್ರದೇಶಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ.
ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕಾಗಿ ರಷ್ಯಾ ಕೊಂಚ ವಿರಾಮ ನೀಡಿದೆ. ಭಾರತೀಯ ಕಾಲಾವಧಿ ಪ್ರಕಾರ ಬೆಳಗ್ಗೆ 11.30ರಿಂದ ಸಂಜೆ 7.30ರವರೆಗೂ ಕದನ ವಿರಾಮ ಘೋಷಿಸಲಾಗಿದೆ. ಇದನ್ನು ಉಕ್ರೇನ್ ಕಾಲಮಾನದಲ್ಲಿ ನೋಡುವುದಾದರೆ ಬೆಳಗ್ಗೆ 6 ಗಂಟೆ ಆಗಿರುತ್ತದೆ. ಮಾನವೀಯ ನೆಲಗಟ್ಟಿನಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ನಾಗರಿಕರ ಸ್ಥಳಾಂತರಕ್ಕೆ ರಷ್ಯಾ ಅವಕಾಶ ಕಲ್ಪಿಸಿ ಕೊಟ್ಟಿದೆ. ಈ ಮಧ್ಯೆ ಯುದ್ಧದ ಸುತ್ತಲೂ ನಡೆದಿರುವ ಪ್ರಮುಖ ಬೆಳವಣಿಗೆಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಉಕ್ರೇನ್-ರಷ್ಯಾ ಯುದ್ಧದ ಸುತ್ತ 5 ಬೆಳವಣಿಗೆಗಳು:
- ಕಳೆದ ಫೆಬ್ರವರಿ 24ರಂದು ರಷ್ಯಾದ ಆಕ್ರಮಣವು ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ಕನಿಷ್ಠ 331 ನಾಗರಿಕರು ಸಾವನ್ನಪ್ಪಿದ್ದು 675 ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆಯು ತುಂಬಾ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
- ರಷ್ಯಾದ ಪಡೆಗಳು ಉಕ್ರೇನ್‌ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ಅನ್ನು 'ನಿರ್ಬಂಧಿಸಿದೆ' ಎಂದು ನಗರದ ಮೇಯರ್ ಘೋಷಿಸಿದ್ದಾರೆ. ಅಜೋವ್ ಸಮುದ್ರದಲ್ಲಿ ನೆಲೆಗೊಂಡಿರುವ 4,50,000 ಜನರುಳ್ಳ ನಗರವು ಶೆಲ್ ದಾಳಿಯಿಂದ ಸ್ಫೋಟಗೊಂಡಿದೆ. ಚಳಿಗಾಲದ ಆಳದಲ್ಲಿ ನೀರು ಅಥವಾ ವಿದ್ಯುತ್ ಸೌಲಭ್ಯವೇ ಇಲ್ಲದಂತಾಗಿದೆ.
- ಉಕ್ರೇನ್‌ನಲ್ಲಿರುವ ಎರಡನೇ ಅತಿದೊಡ್ಡ ಪರಮಾಣು ಸ್ಥಾವರದಿಂದ ರಷ್ಯಾದ ಪಡೆಗಳು ಕೇವಲ 32 ಕಿಮೀ ದೂರದಲ್ಲಿವೆ ಎಂದು ಯುಎಸ್ ಹೇಳಿದೆ. ಯುರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರವಾದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಶುಕ್ರವಾರ ವಶಪಡಿಸಿಕೊಂಡಿದೆ.
- ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡುವುದು ಯುದ್ಧಾಪರಾಧ ಎಂದು ಉಕ್ರೇನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿದೆ.
- ರಷ್ಯಾದ ಕ್ಷಿಪಣಿಗಳು ಮತ್ತು ಯುದ್ಧವಿಮಾನಗಳಿಂದ ತನ್ನ ವಾಯು ಪ್ರದೇಶವನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವಂತೆ ಉಕ್ರೇನಿಯನ್ ಮನವಿಯನ್ನು NATO ಶುಕ್ರವಾರ ತಿರಸ್ಕರಿಸಿದೆ. ತನ್ನ ನೆರೆಯ ಮೇಲೆ ಮಾಸ್ಕೋದ ಯುದ್ಧಕ್ಕೆ ಎಳೆಯಲ್ಪಡುವ ಎಚ್ಚರಿಕೆ ನೀಡಿದೆ, ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಶಿಕ್ಷಿಸಲು ಯುರೋಪ್ ಹೆಚ್ಚಿನ ನಿರ್ಬಂಧಗಳನ್ನು ಹಾಕುವ ಭರವಸೆ ನೀಡಿದೆ.
- ನ್ಯಾಟೋ ಒಕ್ಕೂಟವು ಉಕ್ರೇನ್ ಪ್ರದೇಶದಲ್ಲಿ ಹಾರಾಟ-ನಿಷೇಧ ವಲಯವನ್ನು ಸ್ಥಾಪಿಸಲು ನಿರಾಕರಿಸಿದೆ. ಆ ಮೂಲಕ ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆಯನ್ನು ತೋರಿಸಿದಂತೆ ಆಗಿದೆ," ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಕಟುವಾಗಿ ದೂಷಿಸಿದ್ದಾರೆ.
- ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ನಿರಂತರ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.
- ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕಾಗಿ ರಷ್ಯಾ ಕೊಂಚ ವಿರಾಮ ನೀಡಿದೆ. ಭಾರತೀಯ ಕಾಲಾವಧಿ ಪ್ರಕಾರ ಬೆಳಗ್ಗೆ 11.30ರಿಂದ ಸಂಜೆ 7.30ರವರೆಗೂ ಕದನ ವಿರಾಮ ಘೋಷಿಸಲಾಗಿದೆ.
- ರಷ್ಯಾ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಉಕ್ರೇನ್‌ನ ಮರಿಯುಪೋಲ್‌ನಲ್ಲಿ ಜನರ ಸ್ಥಳಾಂತರಿಸುವಿಕೆ ಕಾರ್ಯಾಚರಣೆ ಪ್ರಾರಂಭವಾಗಿದೆ












Click it and Unblock the Notifications