
ಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರು
ಕೆನಡಾ ದೇಶದ ಬ್ರಾಂಪ್ಟನ್ ನಗರದ ಪಾರ್ಕ್‌ವೊಂದಕ್ಕೆ ಭಗವದ್ಗೀತೆಯ ಹೆಸರಿಡಾಗಿದೆ. 3.75 ಎಕರೆ ವಿಸ್ತೀರ್ಣದ ಟ್ರೋಯರ್ಸ್ ಪಾರ್ಕ್ ಅನ್ನು ಶ್ರೀ ಭಗವದ್ ಗೀತಾ ಪಾರ್ಕ್ ಎಂದು ಬ್ರಾಂಪ್ಟನ್ ಸಿಟಿ ಕೌನ್ಸಿಲ್ ಬುಧವಾರ ಮರುನಾಮಕರಣಗೊಳಿಸಿದೆ.
ಬ್ರಾಂಪ್ಟನ್ ನಗರದ ಆರನೇ ನಂಬರ್ ವಾರ್ಡ್‌ನಲ್ಲಿ ಈ ಪಾರ್ಕ್ ಇದೆ. ಕೇವಲ ಹೆಸರು ಬದಲಾವಣೆ ಮಾತ್ರವಲ್ಲ, ಉದ್ಯಾನವನದ ಕೆಲ ಸ್ವರೂಪಗಳಲ್ಲೂ ಬದಲಾವಣೆಗಳಾಗಲಿವೆ. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನ ಅರ್ಜುನನಿಗೆ ಬೋಧಿಸುವ ದೃಶ್ಯದ ಶಿಲ್ಪ ಕೃತಿಯನ್ನು ಪಾರ್ಕ್‌ನಲ್ಲಿ ಸ್ಥಾಪಿಸಲಾಗುತ್ತಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಚಂಡಮಾರುತ: ಭಯಾನಕ ದೃಶ್ಯಗಳು ವೈರಲ್
ರಥದ ಮೇಲೆ ಶ್ರೀಕೃಷ್ಣ ಮತ್ತು ಅರ್ಜುನ ಇರುವ ಶಿಲ್ಪದ ಜೊತೆಗೆ ಇತರ ಕೆಲ ಹಿಂದೂ ದೇವರುಗಳ ವಿಗ್ರಹಗಳನ್ನು ಪಾರ್ಕ್‌ನಲ್ಲಿ ಸ್ಥಾಪಿಸಲಾಗುತ್ತಿದೆ. ಇವಷ್ಟೇ ಅಲ್ಲದೇ, ಭಗವದ್ಗೀತೆಯ ಥೀಮ್ ಇಟ್ಟುಕೊಂಡು ಪಾರ್ಕ್‌ನ ರೂಪುರೇಖೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗುತ್ತಿದೆ. ಹಾಗೆಯೇ ಈ ಪಾರ್ಕ್‌ನಲ್ಲಿ ಕ್ರಿಕೆಟ್ ಮೈದಾನ, ಬ್ಯಾಸ್ಕೆಟ್‌ಬಾಲ್ ಕೋರ್ಟ್ ಕೂಡ ಇದೆ. ಜೊತೆಗೆ ಹಿಂದೂಗಳಿಗೆಂದು ಗರ್ಬ ನರ್ತನಕ್ಕೆ ಸ್ಥಳ, ಯೋಗ ಮಾಡಲು ಸ್ಥಳಾವಕಾಶ ಕೊಡಲಾಗಿದೆ.
ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ತನಗೆ ಭಗವದ್ಗೀತೆ ಬಗ್ಗೆ ಇರುವ ನಂಬಿಕೆಯನ್ನು ವ್ಯಕ್ತಪಡಿಸಿದರು. "ಗೀತೆಯ ಬೋಧನೆಗಳನ್ನು ನಾನು ನಂಬುತ್ತೇನೆ. ಹಿಂದೂ ಸಮುದಾಯಕ್ಕೆ ನಾವು ಬಹಳ ಕೃತಜ್ಞರಾಗಿದ್ದೇವೆ. ನಮ್ಮ ಸ್ನೇಹಕ್ಕೆ ಸಂಕೇತವಾಗಿ ಈ ಉದ್ಯಾನವನ ಇದೆ" ಎಂದು ಅವರು ಹೇಳಿದರು.
ಪಾಕಿಸ್ತಾನ; ಚೀನೀಯರ ಮೇಲೆ ಉಗ್ರ ದಾಳಿ; ಒಬ್ಬ ಸಾವು; ಇಬ್ಬರಿಗೆ ಗಾಯ
ಕೆನಡಾದಲ್ಲಿ ನೆಲಸಿರುವ ವಲಸಿಗರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಿಖ್ ಸಮುದಾಯದವರು. ಅವರನ್ನು ಬಿಟ್ಟರೆ ಹಿಂದೂಗಳ ನಂತರ ಸ್ಥಾನದಲ್ಲಿದ್ದಾರೆ. ಮುಸ್ಲಿಮರೂ ಬಹಳ ಸಂಖ್ಯೆಯಲ್ಲಿದ್ದಾರೆ.
ಬ್ರಾಂಪ್ಟನ್ ನಗರದಲ್ಲಿ ಹಿಂದೂಗಳಿಗಷ್ಟೇ ಅಲ್ಲ ಸಿಖ್ ಮತ್ತು ಮುಸ್ಲಿಮರ ಪ್ರಾತಿನಿಧ್ಯವಾಗಿ ಕೆಲ ಸ್ಥಳಗಳಿವೆ. ಈ ನಗರದಲ್ಲಿ ಪ್ರಮುಖ ರಸ್ತೆಯೊಂದಕ್ಕೆ ಗುರು ನಾನಕ್ ಹೆಸರಿಡಲಾಗಿದೆ. ಮಸ್ಜಿದ್ ಡ್ರೈವ್ ಹೆಸರಿನ ಒಂದು ರಸ್ತೆ ಇದೆ.

"ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಜನರು ಅನುಸರಿಸುವ ಎಲ್ಲಾ ಧರ್ಮಗಳನ್ನೂ ನಾವು ಗೌರವಿಸುತ್ತೇವೆ" ಎಂದು ಹೇಳಿರುವ ಬ್ರಾಂಪ್ಟನ್ ಸಿಟಿ ಮೇಯರ್ ಪ್ಯಾಟ್ರಿಕ್ ಬ್ರೌನ್, ತಮಗೆ ಧಾರ್ಮಿಕ ಸ್ವಾತಂತ್ರ್ಯದ ನಮಗಿರವ ನಂಬಿಕೆ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ.
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಬ್ರಾಂಪ್ಟನ್ ನಗರ ಆಡಳಿತದ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಭಗವದ್ಗೀತೆಯಲ್ಲಿ ತಿಳಿಸಲಾಗಿರುವಂತೆ ವಿಶ್ವ ಭ್ರಾತೃತ್ವ ಮತ್ತು ಸೌಹಾರ್ದತೆಯ ಸಂದೇಶಕ್ಕೆ ಮಾದರಿಯಾಗಿ ಈ ಉದ್ಯಾನವನ ಇದೆ ಎಂದು ಹರ್ಯಾಣ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಮೇಯರ್‌ರಿಂದ ನವರಾತ್ರಿ ಶುಭಾಶಯ
ಇದೇ ವೇಳೆ, ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಇಂದು ಗುರುವಾರ ನವರಾತ್ರಿ ಹಬ್ಬಕ್ಕೆ ಹಿಂದೂಗಳಿಗೆ ಶುಭಾಶಯ ತಿಳಿಸಿದ್ದಾರೆ.
Yesterday, Mayor @patrickbrownont, Councillors and members of the community gathered to unveil the renaming of Brampton's Troyers Park to Shri Bhagavad Gita Park.
— City of Brampton (@CityBrampton) September 28, 2022
Brampton is a Mosaic, and this renaming commemorates the Hindu community and all they contribute to our city. pic.twitter.com/G6K4yDsgwv
"ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಈ ವಾರ ಆರಂಭವಾಗಿದೆ. ಕೆಟ್ಟ ಶಕ್ತಿಯ ಮೇಲೆ ಒಳ್ಳೆಯ ಶಕ್ತಿ ಗೆಲುವು ಸಾಧಿಸುವುದನ್ನು ಆಚರಿಸುವ ಹಬ್ಬ ಇದು. ನಿಮ್ಮ ನೆರೆಹೊರೆಯವರು, ಬಂಧು ಬಾಂಧವರು, ಸ್ನೇಹಿತರು ಸೇರಿ ಸಂಭ್ರಮಿಸುತ್ತೀರಿ. ನಾವೆಲ್ಲರೂ ಒಗ್ಗೂಡಿ ಉತ್ತಮ ಭವಿಷ್ಯ ನಿರ್ಮಾಣ ಮಾಡೋಣ" ಎಂದು ಟ್ವೀಟ್ ಮಾಡಿರುವ ಪ್ಯಾಟ್ರಿಕ್ ಬ್ರೌನ್, ನವರಾತ್ರಿಯ ಶುಭಾಶಯಯವನ್ನು ತಾನು ತಿಳಿಸುವ ವಿಡಿಯೋವನ್ನು ಟ್ವೀಟ್‌ಗೆ ಲಗತ್ತಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)