ಲಂಡನಿನ ಮಾರುಕಟ್ಟೆಯೊಂದರಲ್ಲಿ ಭಾರೀ ಅಗ್ನಿ ಅವಘಡ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಂಡನ್, ಜುಲೈ 10: ಇಲ್ಲಿನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಭಾರೀ ಅಗ್ನ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು 10 ಅಗ್ನಿ ಶಾಮಕ ದಳಗಳು ಮತ್ತು 70 ಜನ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.

ಲಂಡನ್ನಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಭೀಕರ ಬೆಂಕಿ ಅವಘಡ

ಭಾನುವಾರ ರಾತ್ರಿ ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳ ಕಾಮ್ಡೆನ್ ಲಾಕ್ ಮಾರ್ಕೆಟ್ ಗೆ ಬೆಂಕಿ ತಗುಲಿದೆ. ಇಲ್ಲಿ ಸುಮಾರು 1,000 ಅಂಗಡಿಗಳಿವೆ. ದುರಂತದಲ್ಲಾದ ಸಾವು, ನೋವು ಹಾಗೂ ಹಾನಿಯ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.

ಬೆಂಕಿ ಅವಘಡದ ಹಿನ್ನಲೆಯಲ್ಲಿ ಈ ಮಾರ್ಕೆಟ್ ನಿಂದ ದೂರ ಉಳಿಯುವಂತೆ ಅಲ್ಲಿನ ಅಧಿಕಾರಿಗಳು ಪ್ರವಾಸಿಗರಿಗೆ ಸೂಚಿಸಿದ್ದಾರೆ. 2008ರಲ್ಲೂ ಇಲ್ಲೊಮ್ಮೆ ಬೆಂಕಿ ದುರಂತ ನಡೆದಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು.

Major fire at London's Camden Lock Market

ಇತ್ತೀಚೆಗೆ ಲಂಡನ್ನಿನ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ದುರಂತ ಸಂಭವಿಸಿದ ಪರಿಣಾಮ 58 ಜನ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Firefighters are tackling a large fire at London's Camden Lock Market which broke out on Sunday night. The London Fire Brigade has engaged 10 fire engines and more than 70 firefighters are battling the blaze.
Please Wait while comments are loading...