ಲೆಬನಾನ್ ಪರಿಸ್ಥಿತಿ ಮತ್ತಷ್ಟು ಘೋರ: ಹಿಜ್ಬುಲ್ಲಾ ಮುಖಂಡರಿಗೆ ಇಸ್ರೇಲ್ ಸರ್ಚಿಂಗ್!
ಇಸ್ರೇಲ್ ದಾಳಿ ಶುರು ಮಾಡಿದ ನಂತರ ಲೆಬನಾನ್ ದೇಶ ಇದೀಗ ಭಾರಿ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿದೆ. ಅದರಲ್ಲೂ ಲೆಬನಾನ್ ರಾಜಧಾನಿ ಬೈರೂತ್ ಇದೀಗ ಶವಗಳಿಂದ ತುಂಬಿ ಹೋಗಿದ್ದು, ಜನರು ಬದುಕು ನಡೆಸುವುದೇ ಕಷ್ಟವಾಗಿದೆ. ಇದೇ ಕಾರಣಕ್ಕೆ ಈಗಾಗಲೇ ಅಲ್ಲಿನ ಜನರು ಜಾಗ ಬಿಟ್ಟು ಹೋಗಬೇಕು ಎಂದು ಇಸ್ರೇಲ್ ಆದೇಶ ಹೊರಡಿಸಿದೆ ಎಂಬ ಆರೋಪ ಕೂಡ ಇಸ್ರೇಲ್ ವಿರುದ್ಧ ಇದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಭಯದ ವಾತಾವರಣವು ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದೆ!
ಇಸ್ರೇಲ್ ಇದೀಗ ತನ್ನ ಶತ್ರುಗಳ ನಾಶಕ್ಕಾಗಿ ತನ್ನಲ್ಲಿ ಇರುವ ಎಲ್ಲಾ ಅಸ್ತ್ರಗಳನ್ನೂ ಇದೀಗ ಹೊರಗೆ ತೆಗೆಯುತ್ತಿದೆ. ಅದರಲ್ಲೂ ಲೆಬನಾನ್ ವಿರುದ್ಧ ನಡೆಸುತ್ತಿರುವ ದಾಳಿ ಭಯವನ್ನೇ ಸೃಷ್ಟಿ ಮಾಡಿದೆ. ಕಳೆದ 2 ವಾರಗಳಿಂದ ನಿರಂತರವಾಗಿ ಯುದ್ಧ ನಡೆಸುತ್ತಿರುವ ಇಸ್ರೇಲ್ & ಲೆಬನಾನ್ ಯಾವುದೋ ವಿನಾಶಕ್ಕೆ ಸಿದ್ಧವಾದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ, ಲೆಬನಾನ್ ದೇಶದಲ್ಲಿ ಜನರು ಊರು ಬಿಟ್ಟು ಹೋಗುವಾಗಲೇ, ಇಸ್ರೇಲ್ ತನ್ನ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಲು ಸಜ್ಜಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇಸ್ರೇಲ್ ಮಿಲಿಟರಿ ಪ್ಲಾನ್ ಏನು?
ಲೆಬನಾನ್ ಮೇಲೆ ಮಾತ್ರವಲ್ಲ ಗಾಜಾ ಪಟ್ಟಿ ಸೇರಿದಂತೆ ಸಿರಿಯಾ ಮೇಲೂ ಇಸ್ರೇಲ್ ದಾಳಿ ಮಾಡುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಭಿಕರತೆ ಮತ್ತಷ್ಟು ಘೋರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಗಾಜಾ ಪಟ್ಟಿಯ ನೆಲದಿಂದ ಹಮಾಸ್ ಗುಡುಗಿದ ನಂತರ, ಇಸ್ರೇಲ್ ಮಿಲಿಟರಿ ಮತ್ತಷ್ಟು ಅಲರ್ಟ್ ಆಗಿ ತನ್ನ ದಾಳಿಯನ್ನ ನಡೆಸುತ್ತಿದೆ. ಈ ಕಾರಣಕ್ಕೆ ಇದೀಗ ಹಮಾಸ್ ಬೆಂಬಲಿಗರಿಗೆ ಅಗತ್ಯ ಸೌಲಭ್ಯ ಸಿಗದಂತೆ ತಡೆ ಹಾಕಲಾಗಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ಕೈಮೀರುತ್ತಿದೆ. ಮತ್ತೊಂದು ಕಡೆ ಲೆಬನಾನ್ ನೆಲದಲ್ಲಿಯೂ ಇದೇ ರೀತಿಯ ದಾಳಿ ಮಾಡಲು ಇಸ್ರೇಲ್ ಮಿಲಿಟರಿ ಸಿದ್ಧವಾಗಿದೆ ಎಂಬ ಸ್ಫೋಟಕ ಆರೋಪ ಈಗ ಕೇಳಿಬಂದಿದೆ!
ಆದಷ್ಟು ಬೇಗ ಶಾಂತಿ ಮಾತುಕತೆ?
ಒಟ್ನಲ್ಲಿ ಆದಷ್ಟು ಬೇಗ ಇಸ್ರೇಲ್ & ಲೆಬನಾನ್ ನಡುವೆ ಶಾಂತಿ ಮಾತುಕತೆ ನಡೆಸಬೇಕು & ಈ ಮೂಲಕ ಎರಡೂ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳ ಒತ್ತಾಯವಾಗಿದೆ. ಆದರೆ ಈ ಒತ್ತಾಯ ಈಡೇರುವುದು ಯಾವಾಗ? ಶಾಂತಿ ಮೂಡುವುದು ಯಾವಾಗ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಮತ್ತೊಂದು ಕಡೆಯಲ್ಲಿ ಜಾಗತಿಕ ಆರ್ಥಿಕತೆ ಮೇಲೆ ಕೂಡ ಈ ಬೆಳವಣಿಗೆಗಳು ದೊಡ್ಡ ಪರಿಣಾಮ ಬೀರುತ್ತಿವೆ.












Click it and Unblock the Notifications