ಇಬ್ಭಾಗವಾಯ್ತು ಅಂಟಾರ್ಕ್ಟಿಕದ ದೈತ್ಯ ಮಂಜುಗಡ್ಡೆ

Posted By:
Subscribe to Oneindia Kannada

ಲಂಡನ್, ಜುಲೈ 13: ಅಂಟಾರ್ಕ್ಟಿಕದ ದೈತ್ಯ ಮಂಜುಗಡ್ಡೆ ಎಂದು ಹೆಸರು ಪಡೆದಿದ್ದ ನಾರ್ಸೆನ್ ಸಿ ಹೋಳಾಗುವ ಮೂಲಕ ಆತಂಕ ಸೃಷ್ಟಿಸಿದೆ. ಜುಲೈ 10 ಮತ್ತು 12ರ ನಡುವಲ್ಲಿ ಈ ಮಂಜುಗಡ್ಡೆ ಹೋಳಾಗಿದೆ ಎಂದು ಲಂಡನ್ನಿನ ಸಂಶೋಧಕರು ತಿಳಿಸಿದ್ದಾರೆ.

ಅಂಟಾರ್ಟಿಕಾಗಿಂತ ಅಮೆರಿಕ ಚಳಿ ಚಳಿ ಸಿವಾ!

5,800 ಚ.ಕಿ.ಮೀ. ವ್ಯಾಪ್ತಿಯ ಈ ಮಂಜುಗಡ್ಡೆ ಬೇರ್ಪಟ್ಟಿರುವುದರಿಂದ ಈ ಭಾಗದ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವ ಸಾಧ್ಯತೆಯಿದೆ.

Larsen C a huge iceberg in Antarctica breaks

ಅಂದಾಜು ಒಂದು ಲಕ್ಷ ಸಾವಿರ ಕೋಟಿ ಟನ್ ತೂಗುವ ಈ ಮಂಜುಗಡ್ಡೆ ಹೋಳಾಗಿರುವುದರಿಂದ ಭೂಮಿಯ ದಕ್ಷಿಣ ತುತ್ತತುದಿಯ ಖಂಡವಾದ ಅಂಟಾರ್ಕ್ಟಿಕ ಸುತ್ತಮುತ್ತಲ ಹಡಗು ಸಂಚಾರಕ್ಕೂ ತಾಪತ್ರಯವಾಗಲಿದೆ.

ಮಂಜುಗಡ್ಡೆಗಳು ಕರಗಿ ಹೋಳಾಗುವುದು ಅಂಟಾರ್ಕ್ಟಿಕ ಮಟ್ಟಿಗೆ ಹೊಸ ವಿಷಯವಲ್ಲದಿದ್ದರೂ ಇಷ್ಟು ದೊಡ್ಡ ಮಂಜುಗಡ್ಡೆ ಹೋಳಾಗಿರುವುದು ಆತಂಕವನ್ನು ಸೃಷ್ಟಿಸಿದೆ.
ಆದರೆ ಮಂಜುಗಡ್ಡೆ ಹೋಳಾಗಿರುವುದರಿಂದ ಜಾಗತಿಕವಾಗಿ ಸಮುದ್ರ ಮಟ್ಟದಲ್ಲಿ ಬದಲಾವಣೆಯಾಗುವುದಿಲ್ಲ ಎಂದು ವಿಜ್ಞಾನಿಗಳು ಖಾತ್ರಿಪಡಿಸಿದ್ದಾರೆ.

ಎಷ್ಟು ಪ್ರಮಾಣದ ಮಂಜುಗಡ್ಡೆ ಹೋಳಾಗಿದೆ ಎಂಬ ಕುರಿತು ನಿಖರ ಮಾಹಿತಿ ದೊರೆತಿಲ್ಲ. ಜಾಗತಿಕ ತಾಪಮಾನದಲ್ಲಿನ ಏರಿಕೆಯೇ ಈ ಹೋಳಾಗುವಿಕೆಗೆ ಕಾರಣ ಎಂದು ಲಂಡನ್ನಿನ ಸಂಶೋಧಕ ಆನ್ನಾ ಹಾಗ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A massive iceberg named Larsen C breaks in Antarctica. Increase in global temperature is the reason behind this. But this will not effects global sea level, researchers from London told.
Please Wait while comments are loading...