ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ
ಕೊಲಂಬೋ, ಅಕ್ಟೋಬರ್ 18: ಇಂಡಿಯನ್ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R &AW) ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ. ಭಾರತದ ಪ್ರಧಾನಿ ಮೋದಿ ಅವರು ನನ್ನ ಮತ್ರರು ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷರ ಕಚೇರಿ ಈ ಬಗ್ಗೆ ಸ್ಪಷ್ಟನೆ ಹೊರಡಿಸಿದ್ದು, ಮಂಗಳವಾರ ನಡೆದ ಸಭೆಯಲ್ಲಿ ಸಿರಿಸೇನಾ ಅವರು ಕೊಲೆಯತ್ನ ಸಂಚಿನ ಬಗ್ಗೆ ಚರ್ಚೆಯಾದರೂ ಯಾವುದೇ ಸಂಸ್ಥೆಯ ಹೆಸರು ಪ್ರಸ್ತಾಪಿಸಿಲ್ಲವೆಂದು ಪ್ರಕಟಣೆಯಲ್ಲಿ ಹೇಳಿದೆ.
ಶ್ರೀಲಂಕಾದ ಸಂಸತ್ ಸಭೆಯಲ್ಲಿ ರಾ ವಿರುದ್ಧ ಆರೋಪ ಮಾಡಲಾಗಿದೆ. ಇದೆಲ್ಲವೂ ಗೊತ್ತಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿದ್ದಾರೆ ಎಂದು ಮೈತ್ರಿಪಾಲ ಸಭೆಯಲ್ಲಿ ಹೇಳಿದರು ಎಂದು ಮಾಧ್ಯಮಗಳು ವರದಿ ಬಂದಿತ್ತು.

ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರೆಮೆಸಿಂಘೆ ಅವರು ನವದೆಹಲಿಗೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಮಯ ನಿಗದಿಯಾಗಿದೆ. ಈಸ್ಟ್ ಥರ್ಮಲ್ ಯೋಜನೆ ಸೇರಿದಂತೆ ಬಂದರು ಹಾಗೂ ಹಿಂದೂ ಮಹಾ ಸಾಗರದ ಭಾಗಗಳ ಹಂಚಿಕೆ ಕುರಿತಂತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿಯೇ ಸಿರಿಸೇನಾ ಅವರು ಇಂಥ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಉಭಯ ರಾಷ್ಟ್ರಗಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಸಿರಿಸೇನಾ ಅವರ ಅಧ್ಯಕ್ಷರ ಕಚೇರಿಯಿಂದ ಸ್ಪಷ್ಟನೆಯ ಪ್ರಕಟಣೆ ಹೊರಬಿದ್ದಿದೆ.
ಸಭೆ ವೇಳೆ ಕೊಲೊಂಬೊ ಪೋರ್ಟ್ ಅಭಿವೃದ್ಧಿ ಕುರಿತ ಪತ್ರಗಳ ಕುರಿತಾಗಿ ಅಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ವಿಕ್ರೆಮೆಸಿಂಘೆ ಅವರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ.
ಪೂರ್ವದ ಕಂಟೈನರ್ಟರ್ಮಿನಲ್ ಪ್ರಾಜೆಕ್ಟ್ನಲ್ಲಿ ಭಾರತದ ಸಹಭಾಗಿತ್ವದ ಬಗ್ಗೆ ಸಿರಿಸೇನಾ ಆಕ್ಷೇಪ ವ್ಯಕ್ತಪಡಿಸಿದ್ದಾಗ, ವಿಕ್ರೆಮೆಸಿಂಘೆ ಇದನ್ನು ವಿರೋಧಿಸಿದ್ದರು. ಭಾರತ ಹಾಗೂ ಶ್ರೀಲಂಕಾ ಸಂಬಂಧ ವೃದ್ಧಿ ದೃಷ್ಟಿಯಿಂದ ಇದು ಮುಖ್ಯ ಎಂದು ಅವರು ವಾದಿಸಿದ್ದರು ಎಂದು ಸಭೆಯ ವಿವರಗಳು ಮಾಧ್ಯಮದಲ್ಲಿ ಬಂದಿತ್ತು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications