ಖೇಲ್ ಖತಂ.. ನಾಟಕ್ ಬಂದ್.. ಉತ್ತರ ಕೊರಿಯಾ ಅಧ್ಯಕ್ಷ ಮಾಡಿದ್ದೇನು?

ಉತ್ತರ ಕೊರಿಯಾ ಸರ್ವಾಧಿಕಾರಿ ಉರಿಯಬಾರದ ರೇಂಜ್‌ಗೆ ಉರಿಯುತ್ತಿದ್ದಾನೆ. ಸೈಲೆಂಟ್ ಆಗಿ ಇರದೆ ಸದಾ ಪರಮಾಣು ದಾಳಿ ಬಗ್ಗೆ ಅಂದ್ರೆ ನ್ಯೂಕ್ಲಿಯರ್ ಅಟ್ಯಾಕ್ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ಇದೀಗ ಮತ್ತೆ ಅಂತಹದ್ದೇ ಕೃತ್ಯಕ್ಕೆ ಕೈ ಹಾಕಿ ಭಯ ಹುಟ್ಟಿಸಿದ್ದಾನೆ. ಮೊನ್ನೆ ಮೊನ್ನೆ ತಾನೆ ಮಿಸೈಲ್ ಟೆಸ್ಟ್ ಮಾಡಿದ್ದ ಕಿಮ್ ಜಾಂಗ್ ಉನ್‌ಗೆ ಸಂಬಂಧಪಟ್ಟ ಭಯಾನಕ ಫೋಟೋ ಒಂದು ಇದೀಗ ರಿಲೀಸ್ ಆಗಿದೆ. ಹಾಗಾದ್ರೆ, ಯಾವುದು ಆ ಫೋಟೋ? ಬನ್ನಿ ತಿಳಿಯೋಣ.

ಕಿಮ್ ಜಾಂಗ್ ಉನ್ ಇದೀಗ ಯುರೇನಿಯಂ ಘಟಕದಲ್ಲಿ ಪತ್ತೆ ಆಗಿದ್ದಾರೆ. ಪರಮಾಣುಗಳ ಮೂಲಕ ಬಾಂಬ್ ತಯಾರಿಸಲು ಇದೇ ಯುರೇನಿಯಂ ಪದಾರ್ಥ ಪ್ರಮುಖ ವಸ್ತು. ಆದರೆ ಈ ಯುರೇನಿಯಂ ಸಂಸ್ಕರಣೆಗಾಗಿ ಇರುವ ಘಟಕದಲ್ಲೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಂಡು ಬಂದಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದೆ ಹಾಗೂ ಫೋಟೋ ಕಂಡು ಇದೀಗ ದಕ್ಷಿಣ ಕೊರಿಯಾ & ಜಪಾನ್ ದೇಶಗಳು ಬೆಚ್ಚಿ ಬಿದ್ದಿವೆ. ಯಾಕೆ ಅಂದ್ರೆ ಕಿಮ್ ಜಾಂಗ್ ಉನ್ ತಲೆ ಕೆಟ್ಟು ಯಾವ ಕ್ಷಣದಲ್ಲಿ ಬೇಕಾದರೂ ಪರಮಾಣು ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಭಯ ಆವರಿಸಿದೆ.

Kim Jong Un Visits To A Uranium Plant In North Korea

ಉ.ಕೊರಿಯಾ ಬಳಿ ಕ್ಷಿಪಣಿಗಳ ರಾಶಿ!

ಈಗಿನ ಪರಿಸ್ಥಿತಿಯಲ್ಲಿ ಉತ್ತರ ಕೊರಿಯಾ ಬಳಿ ಸಾಕಷ್ಟು ಕ್ಷಿಪಣಿಗಳು ಇವೆ. ಹಾಗೇ ಎಲ್ಲವು ಪರಮಾಣು ಸಾಮರ್ಥ್ಯ ಹೊಂದಿರುವ ಕ್ಷಿಪಣಿಗಳೇ ಆಗಿವೆ. ಇದೇ ಕಾರಣಕ್ಕೆ ದಕ್ಷಿಣ ಕೊರಿಯಾ & ಜಪಾನ್ ಬುಡ ಅಲುಗಾಡುತ್ತಿದೆ. ಮೊದಲೇ ತಿಕ್ಕಲು ತಿಕ್ಕಲು ರೀತಿ ವರ್ತಿಸುವ ಕಿಮ್ ಜಾಂಗ್ ಉನ್ ಯಾವ ಕ್ಷಣದಲ್ಲಿ ಬೇಕಾದರೂ ಪರಮಾಣು ಸಾಮರ್ಥ್ಯದ ಮಿಸೈಲ್ ಬಳಕೆ ಮಾಡಿ, ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಗಡಿ ಭಾಗದಲ್ಲಿ ಅಲರ್ಟ್ ಆಗಿರುವ ದಕ್ಷಿಣ ಕೊರಿಯಾ & ಜಪಾನ್ ಮಿಲಿಟರಿ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇವೆ.

ಶಕ್ತಿಶಾಲಿ ಮಿಸೈಲ್ ಹೊಂದಿದೆ ಉ.ಕೊರಿಯಾ

ಒಟ್ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಾಟಕ್ಕೆ ದಕ್ಷಿಣ ಕೊರಿಯಾ & ಜಪಾನ್ ಸೇರಿದಂತೆ ಅಮೆರಿಕ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಉತ್ತರ ಕೊರಿಯಾದ ಬಳಿ ಇರುವ ಮಿಸೈಲ್ ಅಂದ್ರೆ ಕ್ಷಿಪಣಿಗಳು ಅಮೆರಿಕ ಮುಟ್ಟುವ ಶಕ್ತಿ ಹೊಂದಿವೆ. ಹೀಗಾಗಿ ಉತ್ತರ ಕೊರಿಯಾದ ಪ್ರತಿಯೊಂದು ನಡೆಯನ್ನ ಕೂಡ ಅಮೆರಿಕ & ದಕ್ಷಿಣ ಕೊರಿಯಾ ಸೇರಿ ಜಪಾನ್ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಲ್ಲದೆ ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾ ದಾಳಿ ಎದುರಿಸಲು ಈ ಎಲ್ಲಾ ದೇಶಗಳು ಸನ್ನದ್ಧವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+