India VS Canada: ಭಾರತೀಯರ ವಿರುದ್ಧ ಮುಂದುವರಿದ ಖಲಿಸ್ತಾನಿ ಕುತಂತ್ರ

ಬ್ರಿಟನ್‌: ಖಲಿಸ್ತಾನಿ ಉಗ್ರರ ಉಪಟಳ ಕೆನಡಾದಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ಖಲಿಸ್ತಾನಿಗಳಿಗೆ ಬೆಂಬಲ ನೀಡುವವರು ಇದ್ದಾರೋ ಅಲ್ಲೆಲ್ಲಾ ಭಾರತೀಯರ ವಿರುದ್ಧ ಕುತಂತ್ರ ನಿಂತಿಲ್ಲ. ಅದ್ರಲ್ಲೂ ಕೆನಡಾ ಮತ್ತು ಭಾರತದ ಸಂಬಂಧ ಹಾಳು ಮಾಡಿರುವ ಈ ಖಲಿಸ್ತಾನಿ ಗ್ಯಾಂಗ್ ಈಗ ಬ್ರಿಟನ್ ಮತ್ತು ಭಾರತದ ಬಾಂಧವ್ಯಕ್ಕೂ ಬೆಂಕಿ ಇಡಲು ಮುಂದಾಗಿದೆ. ಹಾಗಾದರೆ ಬ್ರಿಟನ್‌ನಲ್ಲಿ ಆಗಿದ್ದು ಏನು?

ಅಂದಹಾಗೆ ಬ್ರಿಟನ್‌ನ ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ ಅವರನ್ನ ಸ್ಕಾಟ್ಲೆಂಡ್‌ನ ಗ್ಲಾಸ್ಕೊದ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದಿರುವ ಘಟನೆ ನಡೆದಿದೆ. ಇದು ಖಲಿಸ್ತಾನಿ ಬೆಂಬಲಿಗರ ಕೃತ್ಯ ಎಂದು ಆರೋಪ ಮಾಡಲಾಗಿದೆ. ಮೊದಲೇ ಕೆನಡಾ ಮತ್ತು ಭಾರತದ ಬಾಂಧವ್ಯ ಹಾಳಾಗಿ ಹೋಗಿದೆ. ಇದೇ ಸಂದರ್ಭದಲ್ಲಿ ಬ್ರಿಟನ್ ಮತ್ತು ಭಾರತದ ಸಂಬಂಧಕ್ಕೂ ಬೆಂಕಿ ಇಡುತ್ತಿದ್ದಾರೆ ಈ ಖಲಿಸ್ತಾನಿಗಳು. ಬ್ರಿಟನ್‌ನಲ್ಲಿ ನಡೆದ ಘಟನೆ ಬಗ್ಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಖಲಿಸ್ತಾನಿಗಳ ವಿರುದ್ಧ ಭಾರತೀಯರು ಈಗ ಗರಂ ಆಗಿದ್ದಾರೆ.

Khalistan supporters continues annoying the Indian diplomats in foreign

ಖಲಿಸ್ತಾನಿಗಳ ಕಿರಿಕಿರಿಗೆ ಅಂತ್ಯ ಯಾವಾಗ?

ಅಷ್ಟಕ್ಕೂ ಬ್ರಿಟನ್‌ನ ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ ಅವರನ್ನು ಗುರುದ್ವಾರ ವ್ಯವಸ್ಥಾಪಕ ಸಮಿತಿ ಆಹ್ವಾನಿಸಿತ್ತು. ಇನ್ನು ಆಹ್ವಾನದ ಹಿನ್ನೆಲೆ ದೊರೈಸ್ವಾಮಿ ಗುರುದ್ವಾರಕ್ಕೆ ಬಂದಿದ್ರು. ಆದ್ರೆ ಈ ವೇಳೆ ಖಾಲಿಸ್ತಾನಿಗಳ ಪರ ಇದ್ದಾರೆ ಎನ್ನಲಾಗಿರುವ ಕೆಲ ವ್ಯಕ್ತಿಗಳು ದೊರೈಸ್ವಾಮಿ ಅವರನ್ನ ಕಾರಿನಿಂದ ಕೆಳಗಿಳಿಯದಂತೆ ತಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಘಟನೆ ಬಗ್ಗೆ 'ಸಿಖ್‌ ಯುತ್‌ ಯುಕೆ' ಇನ್‌ಸ್ಟಾಗ್ರಾಂ ಖಾತೆ ಮೂಲಕ ವಿಡಿಯೋ ಶೇರ್ ಮಾಡಿಕೊಂಡಿದೆ. 'ಭಾರತೀಯ ರಾಜತಾಂತ್ರಿಕರಿಗೆ ಗುರುದ್ವಾರ ಪ್ರವೇಶ ನಿರಾಕರಿಸಲಾಯಿತು. ಸಿಖ್ ನೌಜವಾನ್‌ಗಳು ಅವರನ್ನು ತಡೆದು ಗುರುದ್ವಾರದಿಂದ ಹೊರಡಲು ಆಗ್ರಹಿಸಿದರು' ಅಂತಾ ವಿವಾದಾತ್ಮಕ ಪೋಸ್ಟ್ ಹಾಕಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಗುರುದ್ವಾರ ವ್ಯವಸ್ಥಾಪಕ ಸಮಿತಿ ಆಹ್ವಾನದ ಹಿನ್ನೆಲೆ ಸ್ಕಾಟ್ಲೆಂಡ್‌ನ ಗ್ಲಾಸ್ಕೊ ಗುರುದ್ವಾರಕ್ಕೆ ಬಂದು, ವಿಕ್ರಮ್ ದೊರೈಸ್ವಾಮಿ ಅವರ ಕಾರು ಪಾರ್ಕಿಂಗ್ ಜಾಗಕ್ಕೆ ಎಂಟ್ರಿ ಕೊಟ್ಟಿದ್ದಾಗ ಈ ಘಟನೆ ನಡೆದಿದೆ. ಹೀಗೆ ಸುಖಾಸುಮ್ಮನೆ ಖಲಿಸ್ತಾನಿ ಗ್ಯಾಂಗ್ ಭಾರತದ ರಾಜತಾಂತ್ರಿಕರ ಜೊತೆಗೆ ಕಿರಿಕ್ ಮಾಡಿದ ನಂತರ ವಿಕ್ರಮ್ ದೊರೈಸ್ವಾಮಿ ಅವರು ಅಲ್ಲಿಂದ ಹೋಗಿದ್ದಾರೆ. ಘಟನೆ ಬಗ್ಗೆ ಇದೀಗ ಭಾರತೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ರಾಜತಾಂತ್ರಿಕ ಅಧಿಕಾರಿಯನ್ನ ನಡೆಸಿಕೊಂಡ ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಒಟ್ನಲ್ಲಿ ಕೆನಡಾ ಹಾಗೂ ಭಾರತದ ಸಂಬಂಧ ತಿಳಿಯಾಗಿಸಲು ಇದೀಗ ಖಲಿಸ್ತಾನಿ ಗ್ಯಾಂಗ್ ಬಿಡುತ್ತಿಲ್ಲ. ಇದರ ಜೊತೆ ಭಾರತೀಯರ ಮೇಲೆ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಸೇರಿ ಖಲಿಸ್ತಾನಿ ಗ್ಯಾಂಗ್‌ನ ಉಪಟಳ ಹೆಚ್ಚಾಗಿರುವ ದೇಶಗಳಲ್ಲೂ ಕುತಂತ್ರ ನಡೆಯುತ್ತಿದೆ. ಇದು ಈಗಿನ ಘಟನೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ಭಾರತ ಸರ್ಕಾರ ಘಟನೆಯ ಬಗ್ಗೆ ಬ್ರಿಟನ್ ಅಧಿಕಾರಿಗಳ ಬಳಿ ವಿವರಣೆ ಕೇಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+