ಮಂಗಚೇಷ್ಟೆ : ಕೀನ್ಯಾದಲ್ಲಿ ಗಂಟೆಗಟ್ಟಲೆ ಪವರ್ ಕಟ್

Posted By:
Subscribe to Oneindia Kannada

ನೈರೋಬಿ, ಜೂನ್ 08: ಮಂಗವೊಂದು ಕಳ್ಳತನ ಮಾಡಿದ ಸುದ್ದಿ ಇತ್ತೀಚೆಗೆ ಓದಿರಬಹುದು. ಈಗ ಮಂಗನ ಕಾಟದಿಂದ ಕೀನ್ಯಾದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾದ ವಿಚಿತ್ರ ಘಟನೆ ವರದಿಯಾಗಿದೆ.

ಮಂಗಚೇಷ್ಟೆಯ ಕಾರಣದಿಂದ ಇಡೀ ಕೀನ್ಯಾ ಮತ್ತೊಮ್ಮೆ ಕಗ್ಗತ್ತಲ ಖಂಡದ ಭಾಗ ಎನಿಸಿಕೊಂಡಿತು. ಈ ವಿದ್ಯುತ್ ಪೂರೈಕೆ ವ್ಯತ್ಯಯಕ್ಕೆ ಮಂಗಗಳ ಕಾಟವೇ ಕಾರಣ ಎಂದು ಕೀನ್ಯಾ ವಿದ್ಯುತ್ ಉತ್ಪಾದನಾ ಹಾಗೂ ಪೂರೈಕೆ ಸಂಸ್ಥೆ ಆರೋಪಿಸಿದೆ.[ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]

Kenya blames a monkey for 3-hour nationwide blackout

ಕೀನ್ಯಾ ಪವರ್ ಜನರೇಷನ್ ಕಂಪನಿ ಮಂಗಳವಾರ ಹೊರಡಿಸಿರುವ ಪ್ರಕಟಣೆಯಂತೆ ಇಲ್ಲಿನ ಗಿಟಾರು ಜಲವಿದ್ಯುತ್ ಕೇಂದ್ರದಲ್ಲಿರುವ ಗ್ರಿಡ್​ನ ಉಪಕರಣ ಕೇಬಲ್​ಗಳನ್ನು ಕಡಿದು ಕತ್ತರಿಸಿ ಹಾಕಿವೆ. ಜೊತೆಗೆ ಟ್ರಾನ್ಸ್ ಫಾರ್ಮರ್ ಮೇಲೆ ಹಾರಿ,ಟ್ರಿಪ್ ಆಗುವಂತೆ ಮಾಡಿವೆ. ಇದರ ಪರಿಣಾಮವಾಗಿ ಮಂಗಳವಾರದಂದು ಕೀನ್ಯಾದ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಪೂರೈಕೆ ಇರಲಿಲ್ಲ.

ಮಂಗಾಟ ಎಂದರೆ ಯಾರು ನಂಬಲಿಲ್ಲ: ವಿದ್ಯುತ್ ಪೂರೈಕೆ ವ್ಯತ್ಯಯವಾದ ಬಳಿಕ ಗ್ರಾಹಕರು ದೂರು ನೀಡಲು ಕರೆ ಮಾಡಿದರು. ಆದರೆ, ವಿದ್ಯುತ್ ಪೂರೈಕೆ ತೊಂದರೆಗೆ ಮಂಗಗಳು ಕಾರಣ ಎಂದು ಹೇಳಿದರೆ ಯಾರು ನಂಬಲು ತಯಾರಿರಲಿಲ್ಲ. ಎಂದು ಸಂಸ್ಥೆ ನಿರ್ವಾಹಕ ಕೆನ್​ಜೆನ್ ಹೇಳಿದ್ದಾರೆ.

ಮಂಗಾಟದ ಕಾರಣದಿಂದ 180 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತ, ನಷ್ಟ ಉಂಟಾಗಿದೆ. ಇದರಿಂದಾಗಿ ಹೆಚ್ಚೂಕಡಿಮೆ ನಾಲ್ಕು ಗಂಟೆಗಳ ಕಾಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ, ಇಷ್ಟೆಲ್ಲ ಅನರ್ಥಕ್ಕೆ ಕಾರಣವಾದ ಮಂಗಗಳು ಇನ್ನೂ ಬದುಕಿವೆಯೇ ಅಥವಾ ಎಲೆಕ್ಟ್ರಿಕ್ ಬೇಲಿ ಹಾರಲು ಹೋಗಿ ಪ್ರಾಣತೆತ್ತಿವೆಯೋ ಗೊತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kenya's power generation company says a monkey caused a three-hour nationwide blackout. A monkey climbed onto the roof of the Gitaru Power Station in central Kenya and fell onto a transformer, tripping it.
Please Wait while comments are loading...